ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿ ಬಹಿಷ್ಕರಿಸುವ ಬೆದರಿಕೆ

ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆಗೆ ಆಗ್ರಹ
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಕಾಲೇಜು ಉಪ­ನ್ಯಾ­­ಸ­ಕರ ನೇಮಕಾತಿಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿ­ರುವ ಅತಿಥಿ ಉಪನ್ಯಾಸ­ಕರಿಗೆ ಆದ್ಯತೆ ನೀಡ­ದಿದ್ದರೆ ಸೆಪ್ಟೆಂಬರ್‌­ನಲ್ಲಿ ರಾಜ್ಯದಾ­ದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸಲಾಗು­ವುದು ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಎಚ್ಚರಿಸಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು­ಗಳಲ್ಲಿ ಕಾರ್ಯ­ನಿರ್ವಹಿಸುತ್ತಿ­ರುವ 17,800 ಅತಿಥಿ ಉಪನ್ಯಾಸಕರ ವೇತನ­ವನ್ನು ₨25 ಸಾವಿರಕ್ಕೆ ಹೆಚ್ಚಿಸಿ, ಸೇವಾ ಭದ್ರತೆ ಒದಗಿಸಬೇಕು. ಇಲ್ಲವಾದರೆ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಎದುರು  ಪ್ರತಿಭಟನೆ ನಡೆಸು­ವುದು ಅನಿವಾರ್ಯ ಎಂದು ತಿಳಿಸಿದೆ.

ಉನ್ನತ ಶಿಕ್ಷಣ ಸಚಿವರು ಹೇಳಿದಂತೆ ವೇತನ ಹೆಚ್ಚಳ ಮಾಡಿಲ್ಲ. ಎರಡು–ಮೂರು ತಿಂಗಳ ವೇತನವನ್ನು ಇನ್ನೂ  ನೀಡಿಲ್ಲ ಎಂದು ಸಂಘದ ಗೌರವ ಅಧ್ಯಕ್ಷ ಹಾಗೂ ಭಾರತ ಪ್ರಜಾಪ್ರಭುತ್ವ ಯುವ­ಜನ ಫೆಡರೇಷನ್‌ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ­ಮೂರ್ತಿ ಹೇಳಿದ್ದಾರೆ.

ಸಂಘದ ಪ್ರಮುಖ ಬೇಡಿಕೆಗಳು
*ಮಾಸಿಕ ವೇತನವನ್ನು ₨25 ಸಾವಿ­ರಕ್ಕೆ ಹೆಚ್ಚಳ ಮಾಡಿ ಪ್ರತಿ ತಿಂಗಳೂ ಮೊದಲ ವಾರದಲ್ಲೇ ನೀಡಬೇಕು.
*ಪ್ರಸಕ್ತ ಕಾರ್ಯ­ನಿರ್ವಹಿಸುತ್ತಿ­ರುವ ಅತಿಥಿ ಉಪ­ನ್ಯಾಸಕರನ್ನು  ಮುಂಬ­ರುವ ಶೈಕ್ಷಣಿಕ ವರ್ಷ­ಗಳಿಗೂ ಮುಂದುವರಿಸಿ ಸೇವಾ ಭದ್ರತೆ ಒದಗಿಸಬೇಕು. ಸೇವಾ ಹಿರಿ­ತನದ ಆಧಾರದಲ್ಲಿ ಕಾರ್ಯಭಾರ ಹೆಚ್ಚಿಸಬೇಕು.
*ಹೊಸದಾಗಿ ನೇಮಕಾತಿ ಮಾಡಿ­ಕೊಳ್ಳು­ವಾಗ ಅತಿಥಿ ಉಪನ್ಯಾಸಕರಾಗಿ ವಯೋಮಿತಿ ಮೀರುತ್ತಿರುವ ಮತ್ತು ಸೇವಾ ಹಿರಿತನದಲ್ಲಿರುವವರಿಗೆ ಆದ್ಯತೆ ಕೊಡಬೇಕು.
*ಮಹಿಳಾ ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳು ವೇತನ ಸಹಿತ ಹೆರಿಗೆ ರಜೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT