ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿಗೆ ದಾದಿಯರು; ಬಂಧುಗಳಲ್ಲಿ ಸಂತಸ

Last Updated 5 ಜುಲೈ 2014, 13:33 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ಇರಾಕ್‌ನಲ್ಲಿ ಐಎಸ್‌ಐಎಸ್‌ ಉಗ್ರರ ವಶದಲ್ಲಿದ್ದ 46 ದಾದಿಯರು ಏರ್‌ ಇಂಡಿಯಾ ವಿಶೇಷ ವಿಮಾನದ ಮೂಲಕ ಶನಿವಾರ ಸುರಕ್ಷಿತವಾಗಿ ತವರಿಗೆ ಮರಳಿದ್ದು, ಸುಮಾರು ಕಳೆದೊಂದು ತಿಂಗಳಿನಿಂದ ಏರ್ಪಟ್ಟಿದ್ದ ಆತಂಕ ಅಂತ್ಯಕಂಡಿದೆ.

ಕೇರಳದ ಎಲ್ಲಾ 46 ದಾದಿಯರು ಹಾಗೂ ಇತರ 137 ಪ್ರಯಾಣಿಕರನ್ನು ಹೊತ್ತ ಏರ್‌ ಇಂಡಿಯಾ ವಿಶೇಷ ವಿಮಾನ ಬೆಳಿಗ್ಗೆ 11:57ಕ್ಕೆ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾದಿಯರ ಸ್ವಾಗತಕ್ಕೆ ಕುಟುಂಬ, ಬಂಧು ವರ್ಗದವರ ಜೊತೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ರಾಜಕೀಯ ಮುಖಂಡರು ನಿಲ್ದಾಣಕ್ಕೆ ಬಂದಿದ್ದರು.

ಕೊಚ್ಚಿಗೆ ಬರುವ ಮುನ್ನ ಏರ್‌ ಇಂಡಿಯಾ ವಿಶೇಷ ವಿಮಾನವು  ಬೆಳಿಗ್ಗೆ  8.43ಕ್ಕೆ ಮುಂಬೈಗೆ ಬಂದಿಳಿದಿತ್ತು.

ನಿಗದಿಯಂತೆ ಕೊಚ್ಚಿಗೆ ತೆರಳಬೇಕಿದ್ದ ವಿಮಾನವು ಇಂಧನ ಹಾಗೂ ಕೇಟರಿಂಗ್ ಸೇವೆಗಳಿಗಾಗಿ ಮುಂಬೈನಲ್ಲಿ
‘ತಾಂತ್ರಿಕ ನಿಲ್ಲುಗಡೆ’ ಒಳಗಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT