ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತ್ಕಾಲಿಕವಾಗಿ ಬಿಸಿಯೂಟ ಸ್ಥಗಿತ

Last Updated 22 ಸೆಪ್ಟೆಂಬರ್ 2014, 20:05 IST
ಅಕ್ಷರ ಗಾತ್ರ

ಬೆಂಗಳೂರು: ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದೇವರಜೀವನ ಹಳ್ಳಿಯ ಸರ್ಕಾರಿ ಉರ್ದು ಶಾಲೆ­ಯಲ್ಲಿ ಬಿಸಿಯೂಟವನ್ನು ಪೋಷಕರ ಒತ್ತಾಯದ ಮೇರೆಗೆ  ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಇಸ್ಕಾನ್ ಸಂಸ್ಥೆಯು ಎಂದಿನಂತೆ ಶಾಲೆಗೆ ಮಧ್ಯಾಹ್ನದ ಬಿಸಿಯೂ­ಟ­ವನ್ನು ಸೋಮವಾರ ಪೂರೈಕೆ ಮಾಡಿದ್ದು, ಅದನ್ನು ವಾಪಸ್ ಕಳುಹಿಸ­ಲಾಗಿದೆ. ಶುಕ್ರವಾರ ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಚೇತರಿಸಿ­ಕೊಳ್ಳು­ತ್ತಿದ್ದಾರೆ. ಮತ್ತೆ ಅದೇ ಸಂಸ್ಥೆಯ ಊಟ ಮಕ್ಕಳಿಗೆ ನೀಡಬಾರದು ಎಂದು ಪೋಷ­ಕರು ಪ್ರತಿಭಟನೆ ನಡೆಸಿ ಬಿಸಿ­ಯೂಟ ಪೂರೈಕೆಗೆ ಅಡ್ಡಿಪಡಿಸಿದರು.

ಪೋಷಕರ ವಿರೋಧದಿಂದಾಗಿ ಬಿಸಿಯೂಟವನ್ನು ಶಾಲಾ ಮುಖ್ಯಸ್ಥರು ವಾಪಸ್ ಕಳುಹಿಸಿದರು. ಸದ್ಯಕ್ಕೆ ಬಿಸಿಯೂಟ ಬೇಡ ಎಂದು ಶಾಲೆ ಮುಖ್ಯಸ್ಥರಾದ ಜರೀನಾ ಅವರು ಇಸ್ಕಾನ್ ಆಡಳಿತ ಮಂಡಳಿಗೆ ಸೂಚನೆ ನೀಡಿದರು.

ಈ ಮಧ್ಯೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಿಸಿನ್ ಸೋಮವಾರ ಶಾಲೆಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಅವರು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಪರೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT