ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ ದೇವಸ್ಥಾನ: ನಿಧಿಗಳಲ್ಲಿ ಪಾಲು ಕೇಳಿದ ತೆಲಂಗಾಣ

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌:  ತಿರುಮಲ ತಿರುಪತಿ ದೇವ­­ಸ್ಥಾನದ ನಿಧಿಯಲ್ಲಿ ಪಾಲು ಕೇಳು­ವಂತೆ ದೇವಸ್ಥಾನ ರಕ್ಷಣಾ ಆಂದೋಲದ ಕಾರ್ಯಕರ್ತರು ಆಗ್ರಹಿಸಿದ ಬೆನ್ನ­ಲ್ಲಿಯೇ ತೆಲಂಗಾಣ ಸರ್ಕಾರವು ದೇವಸ್ಥಾನದ ಆದಾಯ ಸಂಗ್ರಹದಲ್ಲಿ ತನ್ನ ಪಾಲು ಕೇಳುವುದಕ್ಕೆ ನಿರ್ಧರಿಸಿದೆ.

ಇತರ ದೇವಸ್ಥಾನಗಳ ನೆರವಿಗಾಗಿ ತಿರುಪತಿಯಲ್ಲಿ   ಸ್ಥಾಪಿಸಲಾಗಿರುವ ನಿಧಿ­ಯಿಂದ   ₨ ೨೪೧ ಕೋಟಿ ಪಾಲು ಪಡೆದು­ಕೊಳ್ಳಲು ಹೋರಾಟ ಮಾಡು­ವುದಾಗಿ   ಸರ್ಕಾರವು ಬುಧವಾರ ವಿಧಾನಸಭೆಯಲ್ಲಿ ಘೋಷಿಸಿದೆ. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಜಿ.ವಿಠ್ಠಲ್‌ ರೆಡ್ಡಿ ಈ ಬೇಡಿಕೆ ಮುಂದಿಟ್ಟರು.

‘ಹತ್ತು ವರ್ಷಗಳಲ್ಲಿ ದೇವಸ್ಥಾನದ ಈ ನಿಧಿಗೆ  ₨ ೫೭೬ ಕೋಟಿ ಆದಾಯ ಬಂದಿದೆ. ಇದರಲ್ಲಿ ತೆಲಂಗಾಣದ ಪಾಲು ಸುಮಾರು ₨ ೨೪೧ ಕೋಟಿ. ಈ ಮೊತ್ತವನ್ನು ಆಂಧ್ರ ಸರ್ಕಾರ ಕೊಡ­ಬೇಕು ಎಂದು ಶಾಸಕಾಂಗ ವ್ಯವಹಾರ­ಗಳ ಸಚಿವ ಟಿ.ಹರೀಶ್‌್ ರಾವ್‌್ ಹೇಳಿದರು.

ಹೈದರಾಬಾದ್‌ನಿಂದ ೪೦ ಕಿ.ಮೀ ಅಂತರದಲ್ಲಿ ಇರುವ ನರಸಿಂಹಸ್ವಾಮಿ ದೇವಸ್ಥಾನವನ್ನು ತಿರುಪತಿ ದೇವಸ್ಥಾನದ ಮಾದರಿಯಲ್ಲಿಯೇ ಅಭಿವೃದ್ಧಿಪಡಿಸುವುದಕ್ಕೆ ತೆಲಂಗಾಣ ಸರ್ಕಾರ ಉತ್ಸುಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT