ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು ಪ್ರಶ್ನಿಸಿದ್ದ ಅರ್ಜಿ ವಾಪಸ್‌ ಪಡೆದ ಬಿಎಸ್‌ವೈ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಶಿವಮೊಗ್ಗ ಜಿಲ್ಲೆಯಲ್ಲಿ ‘ಜಮೀನು ಮಂಜೂ­ರಾತಿ ಪ್ರಕರಣ’ ಕುರಿತು ತನಿಖೆ ನಡೆಸಲು ಲೋಕಾ­ಯುಕ್ತ ಪೊಲೀಸರಿಗೆ ಅನುಮತಿ ನೀಡಿದ ರಾಜ್ಯ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಬಿ.ಎಸ್‌. ಯಡಿ­ಯೂರಪ್ಪ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಸೋಮವಾರ ಹಿಂದಕ್ಕೆ ಪಡೆದರು.

ರಾಜ್ಯ ಹೈಕೋರ್ಟ್‌ ಅ.21­ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಮ್ಮ ಕಕ್ಷಿಗಾರರು ಸಲ್ಲಿಸಿರುವ ಎರಡು ವಿಶೇಷ ಮೇಲ್ಮ­ನವಿಗಳನ್ನು ವಾಪಸ್ ಪಡೆಯಲು ಉದ್ದೇಶಿಸಿ­ದ್ದಾರೆ ಎಂದು ಯಡಿಯೂರಪ್ಪನವರ ವಕೀಲರು ಮನವಿ ಮಾಡಿ­ದರು. ವಕೀಲರ ಮನವಿ ಕೇಳಿದ ನ್ಯಾ. ಪಿ.ಸಿ ಘೋಷ್‌, ಆರ್.ಕೆ. ಅಗರ­ವಾಲ್‌ ಅವರಿದ್ದ ಪೀಠ, ಅರ್ಜಿ ವಾಪಸ್‌ ಪಡೆದಿದ್ದಾ­ರೆಂದು ಪರಿಗಣಿಸಿ, ವಜಾ ಮಾಡಿತು.

ಆದರೆ, ಅರ್ಜಿದಾರರು ಎತ್ತಿರುವ ಕಾನೂನು ಸಂಬಂಧಿತ ಪ್ರಶ್ನೆಗಳನ್ನು ನ್ಯಾಯಾಲಯ ಮುಕ್ತವಾ­ಗಿರಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭೂ­ಸ್ವಾಧೀನ ಅಧಿಸೂಚನೆ ರದ್ದು­ಪಡಿಸಿದ ಯಡಿ­ಯೂರಪ್ಪ ವಿರುದ್ಧ ದಾಖಲಿಸಲಾಗಿದ್ದ ದೂರನ್ನು ವಜಾ ಮಾಡಿದ್ದ ಲೋಕಾ­ಯುಕ್ತ ನ್ಯಾಯಾ­ಲಯದ ತೀರ್ಪನ್ನು ಹೈಕೋರ್ಟ್‌­ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಿದೆ. ಲೋಕಾ­ಯುಕ್ತ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ಬದಿಗೊ­ತ್ತಿದೆ. ಶಿವಮೊಗ್ಗ ಮೂಲದ ವಕೀಲ­ರೊಬ್ಬರು ಯಡಿಯೂರಪ್ಪ ಮತ್ತು ಅವರ ಪುತ್ರನ ವಿರುದ್ಧ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT