ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಲಾರದ ನಷ್ಟ

ಅಕ್ಷರ ಗಾತ್ರ

ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದ ರೈತರಿಗೆ ವಾಯುಭಾರ ಕುಸಿತದಿಂದ ಬಿದ್ದ ಮಳೆ ಅಪಾರ ನಷ್ಟ ಉಂಟುಮಾಡಿದೆ. ಕಷ್ಟಪಟ್ಟು ಬೆಳೆದ ರಾಗಿ ಮತ್ತು ಜೋಳ ಸಂಪೂರ್ಣ ನೆಲಕಚ್ಚಿವೆ. ರಾಗಿ ಬೆಳೆ ಕಟಾವಿಗೆ ಬಂದಿತ್ತು. ಅಷ್ಟರಲ್ಲಿ ಯಮನಾಗಿ ಬಂದ ವರುಣ ಅನ್ನದಾತನಿಗೆ  ತುಂಬಲಾರದಷ್ಟು ನಷ್ಟ ತಂದೊಡ್ಡಿದ್ದಾನೆ.

ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮತ್ತೊಂದೆಡೆ ರೇಷ್ಮೆ ಕೃಷಿಕನ ಪಾಡು ಹೇಳತೀರದು. ಒಂದು ಮೂಟೆ ಹಿಪ್ಪುನೇರಳೆ ಸೊಪ್ಪಿಗೆ ₹ 400 ಕೊಟ್ಟು ರೇಷ್ಮೆ ಹುಳು ಪೋಷಿಸಿ   ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತಂದರೆ ಅಲ್ಲಿ  ಗೂಡಿನ ಬೆಲೆ ಕೆ.ಜಿ.ಗೆ ಕೇವಲ ₹ 80ರಿಂದ 150.  ರೇಷ್ಮೆ ಗೂಡಿಗೆ ಸರಿಯಾದ ಬೆಲೆ ಇಲ್ಲ. ರಾಗಿ ಬೆಳೆ ಸಂಪೂರ್ಣ ನಾಶವಾಗಿದೆ. ಸರ್ಕಾರ ಕೂಡಲೇ ಈ ಭಾಗದ ಅನ್ನದಾತನ ನೆರವಿಗೆ ಬರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT