ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರಹಳ್ಳಿ, ಬಿಎಂ ಕಾವಲು ಅರಣ್ಯ ಒತ್ತುವರಿ

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಿರೇಮಠ ಆಗ್ರಹ
Last Updated 1 ಸೆಪ್ಟೆಂಬರ್ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ತುರಹಳ್ಳಿ ಗುಡ್ಡ ಮೀಸಲು ಅರಣ್ಯ ಪ್ರದೇಶ ಹಾಗೂ ಬಿ.ಎಂ.ಕಾವಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದವರ ವಿರುದ್ಧ ದಾಖ­ಲಾಗಿದ್ದ ಪ್ರಕರಣಗಳನ್ನು  ಅಂದಿನ ಉಪ ಅರಣ್ಯ ಸಂರಕ್ಷ­ಣಾಧಿಕಾರಿ ಎ.ಜಿ.ಅಪ್ಪುರಾವ್‌ ತನ್ನ ಅಧಿ­ಕಾರ ಬಳಸಿ ಮೊಕದ್ದಮೆಗಳನ್ನು ಮುಕ್ತಾ­ಯ­ಗೊಳಿಸಿ ಪ್ರಕರಣ ಹಿಂದಕ್ಕೆ ಪಡೆದಿದ್ದಾರೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ­ಯಲ್ಲಿ ಅವರು ಮಾತನಾಡಿದರು. ‘ಒತ್ತುವರಿ ಆರೋಪದ ಮೇಲೆ ಆದಿಚುಂಚನಗಿರಿ ಮಠಾಧೀಶ­ರಾಗಿದ್ದ ಬಾಲಗಂಗಾಧರನಾಥಸ್ವಾಮಿ ಮತ್ತು ಅವರ ಆಪ್ತ ಪುಟ್ಟರಾಜು ಅವರ ವಿರುದ್ಧ ಕಗ್ಗಲಿ­ಪುರದ ವಲಯ ಅರಣ್ಯಧಿಕಾರಿ 2006–07ರಲ್ಲಿ ಪ್ರಕರಣ ದಾಖಲಿಸಲಾಗಿತ್ತು’ ಎಂದು ಹೇಳಿದರು.

‘ಕೆಂಗೇರಿ ಹೋಬಳಿಯ ತುರಹಳ್ಳಿ ಗ್ರಾಮದ ಸರ್ವೆ ನಂ. 67 ರಲ್ಲಿ ಸುಮಾರು 5 ರಿಂದ 6 ಎಕರೆ ಹಾಗೂ ಸರ್ವೆ ನಂ. 68 ರಲ್ಲಿ ಅರಣ್ಯ ಭೂಮಿ­ಯನ್ನು ಒತ್ತುವರಿ ಮಾಡಿ ಆಟದ ಮೈದಾನವನ್ನು ಅಕ್ರಮವಾಗಿ  ನಿರ್ಮಿಸಲಾಗಿದೆ. ಪ್ರಕರಣವನ್ನು ವಿಚಾರಣೆ ಮಾಡಿ ಕಗ್ಗಲಿಪುರ ವಲಯ ಅರಣ್ಯ ಅಧಿಕಾರಿ ನೀಡಿದ ವರದಿಯ ವಿಚಾರಣಾ ಅಂಶ­ಗಳನ್ನು ಗಣನೆಗೆ ತೆಗೆದುಕೊಂಡು 2009 ರಲ್ಲಿ ಡಿಸಿಎಫ್‌ ಅವರು ಒತ್ತುವರಿ ಆಗಿದ್ದ 7.20 ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸುವಂತೆ ಬಾಲಗಂಗಾಧರನಾಥಸ್ವಾಮಿ ಹಾಗೂ ಪುಟ್ಟ­ರಾಜು ಅವರಿಗೆ ಸೂಚಿಸಿ ಆದೇಶ ಹೊರಡಿ­ಸಿದ್ದರು.

ಆದರೆ, ಎ.ಜಿ.ಅಪ್ಪುರಾವ್‌ ಸರ್ಕಾರದ ವಿರು­ದ್ಧ­ವಾಗಿ ತಮ್ಮ ವ್ಯಾಪ್ತಿಗೂ ಮೀರಿದ ಅಧಿಕಾರವನ್ನು ಬಳಸಿ ಒತ್ತುವರಿದಾರರ ಪರವಾಗಿ ನಿಂತು, ಅರಣ್ಯ ಮೊಕದ್ದಮೆ ಹಿಂದಕ್ಕೆ ಪಡೆದು ಪ್ರಕರಣ ಮುಕ್ತಾ­ಯಗೊಳಿಸಿದ್ದಾರೆ’ ಎಂದು ಆಪಾದಿಸಿದರು. ‘ಇನ್ನೊಂದು ಪ್ರಕರಣದಲ್ಲಿ ಸಯೀದಾ ಅಪೀಫ ತಸ್ಕೀನ್‌ ಎಂಬುವವರು ಸುಳ್ಳು ದಾಖಲೆಗಳನ್ನು ನೀಡಿ ಕಗ್ಗಲಿಪುರದ ಸರ್ವೆ ನಂ. 59/2 ರಲ್ಲಿ 1.38 ಎಕರೆ ಹಾಗೂ 60/2 ರಲ್ಲಿ ಅರ್ಧ ಎಕರೆ ಅರಣ್ಯ ಪ್ರದೇಶ ಒತ್ತುವರಿ ಮಾಡಿದ್ದರು.

ಅವರ ವಿರುದ್ಧ ವಲಯ ಅರಣ್ಯ ಅಧಿಕಾರಿ 2006–07­ರಲ್ಲಿ ಪ್ರಕರಣ  ದಾಖಲಿಸಿದ್ದು, ಎ.ಜಿ.ಅಪ್ಪು­ರಾವ್‌ ಅವರು 2012 ರಲ್ಲಿ ಪ್ರಕರಣ ಮುಕ್ತಾ­ಯ­ಗೊಳಿಸಿ ಹಿಂದಕ್ಕೆ ಪಡೆದಿದ್ದಾರೆ’ ಎಂದು ಆದೇಶ ಹೊರಡಿಸಿದ್ದಾರೆ ಎಂದು ಹಿರೇಮಠ ದೂರಿದರು. ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿ­ಕೊಂಡು ಸರ್ಕಾರಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಖಾಸಗಿ­-­­­­ಯವರಿಗೆ ಪರಭಾರೆಯಾಗುವಂತೆ ಮಾಡಿ­ರುವ ಹಾಗೂ ಮೊಕದ್ದಮೆ ಹಿಂದಕ್ಕೆ ಪಡೆದಿರುವ ಕುರಿತು ಸಂಪೂರ್ಣ ದಾಖಲೆಗಳನ್ನು ಮುಖ್ಯ ಅರಣ್ಯ  ಸಂರಕ್ಷಣಾಧಿಕಾರಿಯಾದ ಎಸ್‌.­ಶಾಂತಪ್ಪ ಸಿದ್ಧಪಡಿಸಿದ್ದು, ಎ.ಜಿ.ಅಪ್ಪುರಾವ್‌ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ತೆಗೆದು­ಕೊಳ್ಳಬೇಕು ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT