ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನ ಮರದ ಬೆಳವಣಿಗೆಗೆ

ಎಣಿಕೆ ಗಳಿಕೆ-9
Last Updated 20 ಜೂನ್ 2016, 19:30 IST
ಅಕ್ಷರ ಗಾತ್ರ

ತೆಂಗಿನ ಮರಗಳು ಚೆನ್ನಾಗಿ ಬೆಳೆಯಲು
ಒಂಟಿ ಸಾಲು ತೆಂಗಿನ ಮರಗಳಾದರೆ ಕನಿಷ್ಠ 18 ಅಡಿ ದೂರವಿರಬೇಕು. ತೋಪು ಬೆಳೆಯಾದರೆ ಸಾಲಿಂದ ಸಾಲಿಗೆ 30 ಅಡಿ, ಮರದಿಂದ ಮರಕ್ಕೆ 30 ಅಂತರವಿರಬೇಕು.

* ಒಂದು ತಿಂಗಳವರೆಗೆ ದೇಸೀ ಆಕಳ ಮಜ್ಜಿಗೆ ಸಂಗ್ರಹಿಸಿ, ಚೆನ್ನಾಗಿ ಹುಳಿ ಬಂದ ಎರಡು ಲೀಟರ್ ಮಜ್ಜಿಗೆಯನ್ನು 18 ಲೀಟರ್‌ಗೆ ನೀರಿಗೆ ಸೇರಿಸಿ ರೋಗ ಪೀಡಿತ ಬೆಳೆಗಳಿಗೆ ಸಿಂಪಡಿಸಬೇಕು.

* ತೆಂಗಿನ ಮರದ ಸುತ್ತ 8 ಅಡಿ ಬಿಟ್ಟು ಬಾಳೆ ಬೆಳೆಯಬಹುದು. ತೆಂಗಿನ ತೋಟದಲ್ಲಿ ಶುಂಠಿ ತುಂಬಾ ಚೆನ್ನಾಗಿ ಬೆಳೆಯಬಹುದು.

* ಗೊಬ್ಬರ, ಮಣ್ಣಿನ ಜೊತೆಗೆ ತೆಂಗಿನ ಮರವೊಂದಕ್ಕೆ 45 ಲೀಟರ್ ನೀರು ಒದಗಿಸಿ.

* ತೆಂಗಿನ ಗಿಡಕ್ಕೆ ನುಸಿ ರೋಗ ಇದ್ದು, ಕಾಯಿಗಳು ಉದುರುತ್ತಿದ್ದರೆ ಹೀಗೆ ಮಾಡಿ: ಮರವೊಂದಕ್ಕೆ ವರ್ಷಕ್ಕೆ 5 ಕೆ.ಜಿ. ಬೇವಿನ ಹಿಂಡಿ, 5 ಕೆ.ಜಿ. ಹೊಂಗೆ ಹಿಂಡಿ ಕೊಟ್ಟು ದಿನಕ್ಕೆ 45 ಲೀಟರ್‌ ನೀರು ಒದಗಿಸಿ.

* ಪ್ರತಿ 3 ತಿಂಗಳಿಗೊಮ್ಮೆ ಮರವೊಂದಕ್ಕೆ 10 ಗ್ರಾಂ ನಾಪ್ತಾಲಿನ್‌ ಗುಳಿಗೆ, 20 ಗ್ರಾಂ ಬೆಳ್ಳುಳ್ಳಿ, 10 ಗ್ರಾಂ ಇಂಗು ಕುಟ್ಟಿ ಸಣ್ಣ ಪ್ಲಾಸ್ಟಿಕ್‌ ಚೀಲದಲ್ಲಿ ಕಟ್ಟಿ. ಸೂಜಿಯಿಂದ 1–2 ತೂತು ಮಾಡಿ ತೆಂಗಿನ ಹೊಂಬಾಳೆಗಳಿಗೆ ಕಟ್ಟಿ.­

* ಕಪ್ಪು ತಲೆ ಕಂಬಳಿ ಹುಳದ ಕಾಟವಾಗಿದ್ದರೆ  ಈ ಹುಳುವಿನ ಪರೋಪಜೀವಿಗಳ ಮೊಟ್ಟೆಗಳನ್ನು ತಂದು, ತೆಂಗಿನ ಗರಿಗಳಲ್ಲಿ ಕಟ್ಟಿ.

* ವಾತಾವರಣಕ್ಕೆ ಹೊಂದಿಕೊಳ್ಳುವ ತೆಂಗಿನ ತಳಿ ಆಯ್ಕೆ ಮಾಡಿ ಬೆಳೆಯಬೇಕು. ಇಲ್ಲದೇ ಹೋದರೆ ಕೆಲ ವರ್ಷಗಳಲ್ಲಿಯೇ ಸಮಸ್ಯೆ ಎದುರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT