ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಪ್ಪ ದುರಂತ: ಶವಗಳು ಪತ್ತೆ

ಕುಟುಂಬಕ್ಕೆ ₨ 2 ಲಕ್ಷ ಪರಿಹಾರ
Last Updated 19 ಡಿಸೆಂಬರ್ 2014, 7:11 IST
ಅಕ್ಷರ ಗಾತ್ರ

ಹುನಗುಂದ (ಬಾಗಲಕೋಟೆ ಜಿಲ್ಲೆ): ತಾಲ್ಲೂಕಿನ ಇಂದವಾರ ಬಳಿ ಬುಧವಾರ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ನೀರುಪಾಲಾಗಿದ್ದ ಎಲ್ಲ ಆರು ಜನರ ಶವಗಳು ಗುರುವಾರ ಪತ್ತೆಯಾಗಿವೆ.

ಬುಧವಾರ ಸಂಜೆಯೇ ಶವಗಳಿಗಾಗಿ ಶೋಧ ನಡೆಸಿದರೂ ಪ್ರಯೋ­ಜನ­ವಾಗಿ­ರಲಿಲ್ಲ. ಗುರುವಾರ ಮುಂಜಾನೆ ಶೋಧ ಕಾರ್ಯಕ್ಕೆ ರಾಯಚೂರಿನ ಈಜು ಪರಿಣಿ­ತರ ತಂಡ ಮತ್ತು ದೋಣಿ ಬಳಸಲಾಗಿದ್ದು, ಎಲ್ಲ ಶವಗಳು ಮಧ್ಯಾಹ್ನದ ಹೊತ್ತಿಗೆ ಪತ್ತೆಯಾದವು.

ಶಾಸಕ ವಿಜಯಾನಂದ ಕಾಶಪ್ಪನವರ ಕೂಡ 2 ತಾಸು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲರು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ­ರಲ್ಲದೆ, ತಲಾ ₨ 2 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿ­ಯಿಂದ ತಲಾ ಒಂದು ಲಕ್ಷ ಮತ್ತು ವೈಯಕ್ತಿಕವಾಗಿ ₨ 50,000ವನ್ನು ಸಚಿವರು ಘೋಷಿಸಿದರೆ, ವಿಜಯಾನಂದ ತಮ್ಮ ಎಸ್‌ಆರ್‌ಕೆ ಪ್ರತಿಷ್ಠಾನದಿಂದ ತಲಾ ₨ 50,000 ನಗದು ಕೊಡುವು­ದಾಗಿ ಸುದ್ದಿಗಾರರಿಗೆ ತಿಳಿಸಿದರು.

ಈ ಭಾಗದಲ್ಲಿ ಜನಸಾಮಾನ್ಯರಿಗೆ ಯಾಂತ್ರಿಕೃತ ದೋಣಿ ಸೌಲಭ್ಯ ಕಲ್ಪಿಸಬೇಕು ಮತ್ತು ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುವುದಾಗಿ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT