ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದ್ದರೂ, 80ಸಿ, 80ಸಿಸಿಡಿ ಸೇರಿದಂತೆ ವಿವಿಧ ಸೆಕ್ಸನ್‌ಗಳಡಿ ನೀಡುವ ಒಟ್ಟಾರೆ ತೆರಿಗೆ ಕಡಿತ ಮಿತಿಯನ್ನು ಸರ್ಕಾರ ರೂ 4.44 ಲಕ್ಷಕ್ಕೆ ಏರಿಕೆ ಮಾಡಿದೆ. ಇದರಿಂದ ತೆರಿಗೆ ಪಾವತಿದಾರನೊಬ್ಬ ವಾರ್ಷಿಕ ರೂ 4,44,200 ಮೊತ್ತದವರೆಗೆ ತೆರಿಗೆ ವಿನಾಯ್ತಿ ಪಡೆಯಬಹುದು.
ತೆರಿಗೆ ಕಡಿತದ ವಿವರ ಇಲ್ಲಿದೆ
80ಸಿ ಸೆಕ್ಸನ್‌ನಡಿ ಕಡಿತದ ಮಿತಿ ರೂ 1,50,00
80ಸಿಸಿಡಿ ಸೆಕ್ಸನ್‌ನಡಿ ಕಡಿತದ ಮಿತಿ ರೂ 50,00
ಗೃಹ/ನಿವೇಶನ ಸಾಲದ ಮೇಲಿನ ಬಡ್ಡಿ ಕಡಿತದ ಮಿತಿ ರೂ 2,00,000
80ಡಿಯಡಿ ಆರೋಗ್ಯ ವಿಮೆ ಕಂತು ಕಡಿತ ಮಿತಿ ರೂ 25,000
ಪ್ರಯಾಣ ಭತ್ಯೆ ವಿನಾಯ್ತಿ ರೂ 19,200
ಒಟ್ಟು ರೂ 4,44,200