ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಂಚನೆ ‘ಕ್ರಿಮಿನಲ್‌ ಅಪರಾಧ’ ವ್ಯಾಪ್ತಿಗೆ: ಎಸ್‌ಐಟಿ ಸಲಹೆ

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿದೇಶಗಳು ತಮ್ಮ ಬ್ಯಾಂಕುಗಳಲ್ಲಿನ ಭಾರತೀಯ ಖಾತೆ­ದಾರರ ಹೆಸರು ಹಾಗೂ ಠೇವಣಿ ಮಾಹಿತಿ­ಯನ್ನು ತನಗೆ ಒದಗಿಸ­ಬೇಕೆಂ­ದರೆ ತೆರಿಗೆ ವಂಚನೆಯನ್ನು ಕ್ರಿಮಿನಲ್‌ ಅಪ­ರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು ಎಂದು ಕಪ್ಪು­ಹಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲಹೆ ನೀಡಿದೆ.

‘ಈಗ ನಮ್ಮ ದೇಶದಲ್ಲಿ ತೆರಿಗೆ ವಂಚನೆ ಹಾಗೂ ವಿದೇಶಿ ವಿನಿಮಯ ಉಲ್ಲಂ­ಘನೆಗಳು ಸಿವಿಲ್‌ ಅಪ­ರಾಧಗಳಾಗಿವೆ. ಇವನ್ನು ಸಿವಿಲ್‌ ಅಪರಾಧ­ಗಳೆಂದು ಪರಿಗಣಿಸಿದರೆ ವಿದೇಶ­ಗಳ ಸರ್ಕಾರಗಳು ಅವನ್ನು ಗಂಭೀರ­ವಾಗಿ ಪರಿಗಣಿಸು­ವು­ದಿಲ್ಲ. ಹೀಗಾಗಿ ನಮಗೆ ಬೇಕಾದ ಮಾಹಿತಿ­ಗ­ಳನ್ನು ನೀಡಲು ಅವು ಸಹಕಾರ ನೀಡು­ವುದಿಲ್ಲ’ ಎಂದು ಎಸ್‌ಐಟಿ ಮುಖ್ಯಸ್ಥ ಎಂ.ಬಿ.ಷಾ ಹೇಳಿದರು.

‘ಈ ಪ್ರಕರಣಗಳನ್ನು ಕ್ರಿಮಿನಲ್‌ ಅಪ­ರಾಧ ವ್ಯಾಪ್ತಿಯಡಿ ತಂದಿದ್ದೇ ಆದರೆ ವಿದೇಶಗಳು ಸಂಬಂಧಿಸಿದ ಮಾಹಿತಿ­ಗಳನ್ನು ಒದಗಿಸಲೇಬೇಕಾದ ಕಟ್ಟು­ಪಾಡಿಗೆ ಸಿಲು­ಕುತ್ತವೆ. ಆಗ, ನಾವು ಅಗತ್ಯ ಮಾಹಿತಿ ಪಡೆಯುವುದು ಸುಲಭ­ವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT