ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದಲ್ಲಿ ದಲಿತ ಕ್ರೈಸ್ತರಿಗೂ ಸವಲತ್ತು

ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಕ್ರಿಸ್‌ಮಸ್‌ ಕೊಡುಗೆ
Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಪರಿಶಿಷ್ಟ ಜಾತಿಯವ­ರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ದಲಿತ ಕ್ರೈಸ್ತರಿಗೂ ವಿಸ್ತರಿಸಲು ತೆಲಂಗಾಣ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ಕ್ರಿಸ್‌ಮಸ್‌ ಹಬ್ಬದ ಸಂದರ್ಭ­ದಲ್ಲಿ ಇದನ್ನು ಪ್ರಕಟಿಸಿದ್ದಾರೆ.

ಇದರಿಂದಾಗಿ ಕೈಸ್ತ ಧರ್ಮಕ್ಕೆ ಮತಾಂತ­ರಗೊಂಡ ದಲಿತರು ಮೂರು ಎಕರೆ ಭೂಮಿ, ಶಿಕ್ಷಣ ಶುಲ್ಕ ಮರು­ಪಾವತಿ ಇನ್ನಿತರ ಸೌಲಭ್ಯಗಳಿಗೆ ಅರ್ಹ­ರಾಗುತ್ತಾರೆ. ‘ರಾಜಕೀಯ ಅಧಿಕಾರ­ಸ್ತರು ದಲಿತರು ಹಾಗೂ ಮತಾಂತರ­ಗೊಂಡ ದಲಿತರ ನಡುವೆ ಏಕೆ ತಾರ­ತಮ್ಯ ಮಾಡುತ್ತಾರೆ ಎಂಬುದೇ ಅರ್ಥ­ವಾಗದು. ನಾವು ತೆಲಂಗಾಣದಲ್ಲಿ ಪರಿ­ಶಿಷ್ಟ ಜಾತಿಯವರಿಗೆ ನೀಡುವ ಪ್ರತಿ­ಯೊಂದು ಸವಲತ್ತನ್ನೂ ದಲಿತ ಕ್ರೈಸ್ತ­ರಿಗೂ ನೀಡಲು ನಿರ್ಧರಿಸಿದ್ದೇವೆ’ ಎಂದು 36ನೇ ಏಕೀಕೃತ ಹೈದರಾಬಾದ್‌ ಕ್ರಿಸ್‌­ಮಸ್‌ ಆಚರಣೆ ವೇಳೆ ಹೇಳಿದರು.

ಕ್ರಿಸ್‌ಮಸ್‌ ವೇಳೆ ಊರಿಗೆ ತೆರಳುವ­ವರ ಅನುಕೂಲಕ್ಕಾಗಿ ಎರಡು ದಿನಗಳ ರಜೆಯನ್ನು ಪ್ರಕಟಿಸಲಾಗಿದೆ. ಆದರೆ ಡಿ.26ರ ರಜೆಯನ್ನು ಅರ್ಹರ ಆಯ್ಕೆಗೇ ಬಿಡಲಾಗಿದೆ. ಅವರು ಬೇಕೆಂದರೆ ರಜೆ ಪಡೆಯಬಹುದು. ಬೇಕಿಲ್ಲವೆಂದರೆ ಕರ್ತ­ವ್ಯಕ್ಕೆ ಹಾಜರಾಗಬಹುದು.

ಸರ್ಕಾರ ಹಾಗೂ ಕ್ರೈಸ್ತ ಜನಾಂಗ­ದ­ವರ ಸಮನ್ವಯಕ್ಕಾಗಿ ಕೆಲಸ ಮಾಡುವ ಸಲುವಾಗಿ ಕ್ರೈಸ್ತ ಮಂಡಳಿಯನ್ನು ಸ್ಥಾಪಿ­ಸು­ವುದಾಗಿಯೂ ಹೇಳಿದರು. ನಾಂಪಲ್ಲಿ­ಯಲ್ಲಿರುವ ಹಜ್‌ ಭವನದ ಮಾದರಿ­ಯಲ್ಲಿ ₨10 ಕೋಟಿ ವೆಚ್ಚದಲ್ಲಿ ಕ್ರೈಸ್ತ ಭವನ ನಿರ್ಮಿಸುವುದಾಗಿ ತಿಳಿಸಿದರು.
ಪರ–ವಿರೋಧ: ತೆಲಂಗಾಣದ ಬಿಜೆಪಿ ಘಟಕವು ಈ ನಿರ್ಧಾರವನ್ನು ಖಂಡಿಸಿದೆ. ಚಂದ್ರಶೇಖರ ರಾವ್‌ ಅವರ ನಿರ್ಧಾರ­ದಿಂದಾಗಿ ಮತಾಂತ­ರಕ್ಕೆ ದಿಡ್ಡಿಬಾಗಿಲನ್ನು ತೆರೆದಂತೆ ಆಗಿದೆ ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT