ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ದಿನ ರಾಷ್ಟ್ರ ಧ್ವಜ ಹಾರಿಸಲು ಯತ್ನ

ಬಿಜೆಪಿ ಕಾರ್ಯಕರ್ತರ ಬಂಧನ
Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಐಎಎನ್ಎಸ್): ತೆಲಂಗಾಣ ವಿಮೋಚನಾ ದಿನಾಚರಣೆ ಅಂಗ­ವಾಗಿ ಇಲ್ಲಿನ ಗೋಲ್ಕೊಂಡ ಕೋಟೆಯ ಮೇಲೆ ತ್ರಿವರ್ಣ  ಧ್ವಜ ಹಾರಿ­ಸಲು ಮುಂದಾದ ಬಿಜೆಪಿ ಕಾರ್ಯ­ಕರ್ತ­ರನ್ನು ಪೊಲೀಸರು ಬಂಧಿಸಿದ್ದಾರೆ.

1948ರ ಸೆ.17ರಂದು ಹೈದರಾ­ಬಾದ್ ನಿಜಾಮ ಮತ್ತು ಆತನ ರಜಾಕಾ­ರರ ಸೇನೆ ಭಾರತೀಯ ಸೇನೆಗೆ ಶರಣಾಗಿ, ಭಾರತದೊಂದಿಗೆ ಹೈದರಾಬಾದ್ ಸಂಸ್ಥಾ­ನ­­ವನ್ನು ವಿಲೀನಗೊಳಿಸಿದ್ದರು. ಇದರ ನೆನಪಿಗೆ ತೆಲಂಗಾಣ ವಿಮೋ­ಚನಾ ದಿನ ಆಚರಿಸಲಾಗುತ್ತಿದೆ.

ಇದರ ಅಂಗವಾಗಿ ಗೋಲ್ಕೊಂಡ ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿ­ಸಲು ಸಿದ್ಧತೆ ನಡೆಸಿದ್ದ ಬಿಜೆಪಿಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು. ಹೀಗಾಗಿ ಪೊಲೀಸರು ಕೋಟೆಯ ಸುತ್ತ ತಡೆ ಹಾಕಿ, ಪ್ರವೇಶ ನಿರ್ಬಂಧಿಸಿದ್ದರು.

ತ್ರಿವರ್ಣ ಧ್ವಜದೊಂದಿಗೆ ಬಿಜೆಪಿ ಕಾರ್ಯ­ಕರ್ತರು ಕೋಟೆಯ ಆವರಣ   ಪ್ರವೇಶಿಸಲು ಯತ್ನಿಸಿದರು. ಅವರನ್ನು ಪೊಲೀಸರು ತಡೆದರು. 
ನಂತರ ಬಿಜೆಪಿ ಕಾರ್ಯಕರ್ತರು ಬಾಪು ಘಾಟ್‌­­ನಲ್ಲಿ ಗುಂಪುಗೂಡಿ, ಕೋಟೆ­­ಯತ್ತ ಮೆರವಣಿಗೆ ಆರಂಭಿ­­ಸಿ­­ದರು. ಸ್ಥಳ­ದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋ­ಜಿಸಿ ಮೆರವಣಿಗೆಯನ್ನು ತಡೆ­ಯಲಾ­ಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿಯ ತೆಲಂಗಾಣ ಘಟಕದ ಅಧ್ಯಕ್ಷ ಜಿ. ಕೃಷ್ಣಾ ರೆಡ್ಡಿ ಪಕ್ಷದ ಕಚೇ­ರಿಯ ಎದುರು ತ್ರಿವರ್ಣ ಧ್ವಜವನ್ನು ಹಾರಿಸಿ, ‘ತೆಲಂಗಾಣ ವಿಮೋಚನಾ  ದಿನಾ­­ಚ­ರಣೆಗೆ ಅನು­­ಮತಿ ನೀಡಲು ಸರ್ಕಾರ ನಿರಾಕರಿಸುತ್ತಿರುವುದು ದುರ­ದೃಷ್ಟಕರ. ಸೆ.17 ತೆಲಂಗಾಣ ವಿಮೋ­ಚನಾ ದಿನ ಎಂದು ಅಧಿಕೃತವಾಗಿ ಘೋಷಿ­ಸು­ವುದಾಗಿ ಸರ್ಕಾರ ನೀಡಿದ್ದ ಭರವಸೆ ಸುಳ್ಳಾಗಿದೆ’ ಎಂದಿದ್ದಾರೆ.

‘ಸರ್ಕಾರ ತನ್ನ ಮಿತ್ರಪಕ್ಷ  ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮೀನ್‌ಗೆ  (ಎಂಐಎಂ) ಹೆದರಿ ಹೀಗೆ ನಡೆದು­ಕೊಳ್ಳು­ತ್ತಿ­ರಬಹುದು. ರಾಜ್ಯದಲ್ಲಿ ರಜಾಕಾರರು ಇರ­ಬೇಕೇ ಅಥವಾ ತೆಲಂಗಾಣ ಜನತೆ ಇರಬೇಕೇ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ನಿರ್ಧರಿಸಲಿ’ ಎಂದು ಅವರು ಕಿಡಿಕಾರಿದ್ದಾರೆ.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ­ಯಾದ ನಂತರ ಬರುತ್ತಿರುವ ಮೊದಲ ತೆಲಂಗಾಣ ವಿಮೋಚನಾ ದಿನ ಇದು. ಹಾಗಿದ್ದರೂ ತೆಲಂಗಾಣ ವಿಮೋಚನಾ ದಿನ­ವನ್ನು ಅಧಿಕೃತವಾಗಿ ಆಚರಿಸಬೇಕು ಎಂಬ ಬಿಜೆಪಿ ಮತ್ತು ಎಡಪಕ್ಷಗಳ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ.

ಹೈದರಾಬಾದ್ ರಾಜ್ಯದ ಭಾಗವಾ­ಗಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಅಧಿಕೃತ­ವಾಗಿಯೇ ಈ ದಿನ ಆಚರಿಸಲಾಗುತ್ತಿದೆ ಎಂದು ಬಿಜೆಪಿ ಮತ್ತು ಎಡಪಕ್ಷಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT