ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಮೇಲ್ಮನವಿಗೆ ರಾಜ್ಯ ವಿರೋಧ

ಕೃಷ್ಣಾ ನದಿ ನೀರು ಹಂಚಿಕೆ ವಿವಾದ
Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೃಷ್ಣಾ ಜಲ ವಿವಾದ  ನ್ಯಾಯಮಂಡಳಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತೆಲಂಗಾಣ ಸಲ್ಲಿಸಿದ್ದ ಮೇಲ್ಮನವಿ  ವಿರುದ್ಧ ಕರ್ನಾಟಕ ಸುಪ್ರೀಂ­ಕೋರ್ಟ್‌­ನಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ.

ಕರ್ನಾಟಕದ ಪರ ವಾದ ಮಂಡಿಸಿದ  ಹಿರಿಯ ವಕೀಲ ಫಾಲಿ ಎಸ್‌. ನಾರಿ­ಮನ್,   ಕೃಷ್ಣಾ ಜಲ ವಿವಾದ ನ್ಯಾಯ­ಮಂಡಳಿ  ಐತೀರ್ಪು ಅಂತಿಮ­ವಾಗಿದ್ದು, ಪ್ರಕರಣ­ವನ್ನು ಪುನಃ ವಿಚಾರಣೆಗೆ ಕೈಗೆತ್ತಿ­ಕೊಳ್ಳ­ದಂತೆ  ಮನವಿ ಮಾಡಿದರು. ನ್ಯಾಯ­ಮಂಡಳಿ ಆದೇಶ  ತೆಲಂಗಾಣದ ಹಿತಾಸಕ್ತಿ­ಗಣನೆಗೆ ತೆಗೆದು­ಕೊಂಡಿಲ್ಲ. ಮೇಲಾಗಿ ನ್ಯಾಯ­ಮಂಡ­ಳಿಯ ಆದೇಶ­ವನ್ನು ಇದೂವ­ರೆಗೂ ಗೆಜೆಟ್‌ ಪ್ರಕಟಿ­ಸಿಲ್ಲ. ಹೀಗಾಗಿ ಹೊಸದಾಗಿ ವಿಚಾರಣೆ ಕೈಗೆತ್ತಿಕೊಳ್ಳು­ವಂತೆ ತೆಲಂ ಗಾಣ ವಕೀಲರು ವಾದ ಮುಂದಿಟ್ಟರು.

ಫೆಬ್ರುವರಿ 11ರಂದು ವಾದ, ವಿವಾದ ಆಲಿಸಲು ಒಪ್ಪಿಕೊಂಡ ನ್ಯಾಯಾ­ಲ­ಯವು ಕರ್ನಾಟಕ, ಮಹಾ­ರಾಷ್ಟ್ರ ಹಾಗೂ ಆಂಧ್ರಪ್ರದೇಶಕ್ಕೆ ನೋಟಿಸ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT