ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜ್‌ಪಾಲ್‌ ಜಾಮೀನು ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಿರಿಯ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕ­ರಣದ ಆರೋಪಿ ತೆಹೆಲ್ಕಾ ಪತ್ರಿಕೆ ಸ್ಥಾಪಕ ಸಂಪಾದಕ ತರುಣ್‌ ತೇಜ್‌­ಪಾಲ್‌ ಅವರ ಜಾಮೀನು ಮನವಿ­ ವಿಚಾರಣೆಗೆ ಸೋಮ­ವಾರ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ  ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ಪೀಠ   ಗೋವಾ ಪೊಲೀಸರಿಗೆ  ಸೂಚಿಸಿದೆ.
ತೇಜ್‌ಪಾಲ್‌ ಅವರಿಗೆ ಮಧ್ಯಾಂತರ ಜಾಮೀನು ನೀಡುವಂತೆ ಮನವಿ ಮಾಡಿ­ಕೊಂಡ ಆರೋಪಿ ಪರ ವಕೀಲ ಹರೀಶ್‌ ಸಾಳ್ವೆ ‘ತೇಜ್‌ಪಾಲ್‌ ಗೋವಾ­ವನ್ನು ತೊರೆ­ಯ­ದಂತೆ ಷರತ್ತು ಹಾಕಿ ಜಾಮೀನು ನೀಡಬಹುದು’ ಎಂದು ವಾದಿಸಿದರು.

ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಮಾರ್ಚ್‌ 14 ರಂದು ತೇಜ್‌­ಪಾಲ್‌ಗೆ ಜಾಮೀನು ನೀಡಲು ನಿರಾಕ­ರಿ­ಸಿತ್ತು. ಇದನ್ನು ಪ್ರಶ್ನಿಸಿ ತೇಜ್‌ಪಾಲ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಸದ್ಯ ತೇಜ್‌ಪಾಲ್‌ ಅವರನ್ನು ಗೋವಾದ ವಾಸ್ಕೋ ನಗರದ ಸದಾ ಉಪ­ಕಾರಾಗೃಹ­ದಲ್ಲಿ ನ್ಯಾಯಾಂಗ ಬಂಧನ­ದಲ್ಲಿ ಇರಿಸಲಾಗಿದೆ. ಕಳೆದ ವರ್ಷ ನವೆಂಬರ್‌ 30ರಂದು ಅವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT