ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯವೇ ಹೆಚ್ಚು

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಕಸ ವಿಲೇವಾರಿಗೆ ಹೆಣಗಾಡುತ್ತಿರುವ ಸರ್ಕಾರಕ್ಕೆ ಈ ಸಮಸ್ಯೆ ನಿವಾರಣೆಗೆ ಜನಸಾಮಾನ್ಯರ ಸಹಕಾರ ಅನಿವಾರ್ಯ. ಬದಲಾದ ಜೀವನಶೈಲಿಯ ಪ್ರತಿ ಹೆಜ್ಜೆಯಲ್ಲೂ ಪ್ಲಾಸ್ಟಿಕ್‌ ಬಳಕೆ ಅತಿಯಾಗಿದೆ ಮತ್ತು ಅದನ್ನು ಹಾದಿಬೀದಿಯಲ್ಲಿ ಬಿಸಾಡುವುದೇ ಸುಲಭದ ಮಾರ್ಗವಾಗಿದೆ.

ಇತ್ತೀಚಿನ ದಿನಗಳಲ್ಲಿ ಕೊಳ್ಳುವ ವಸ್ತುಗಳಿಗಿಂತ ಅವನ್ನು ಪ್ಯಾಕ್‌ ಮಾಡಲು ಬಳಸುವ  ತ್ಯಾಜ್ಯವೇ ಹೆಚ್ಚೆನ್ನಬೇಕು. ಪ್ಲಾಸ್ಟಿಕ್‌ಗೆ ಪ್ರತ್ಯೇಕ ಬೆಲೆ ಇದ್ದರೂ ಸಾವಿರಾರು ರೂಪಾಯಿ ವಸ್ತುಗಳನ್ನು ಕೊಂಡವರಿಗೆ ಐದೋ ಹತ್ತೋ  ರೂಪಾಯಿ ಹೊರೆ ಎನಿಸುವುದಿಲ್ಲ. ಅಲ್ಲದೆ ಆನ್‌ಲೈನ್‌ನಲ್ಲಿ ಕೊಳ್ಳುವವರು ಹೆಚ್ಚಾದಂತೆಲ್ಲ ಸರಕನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಬಳಸುವ ರಟ್ಟು, ಪ್ಲಾಸ್ಟಿಕ್‌ ಇತ್ಯಾದಿಗಳು ಕಸದ ದೊಡ್ಡ ಭಾಗವಾಗಿ ಪರಿಣಮಿಸಿವೆ.

ಕೆಲವು ವರ್ಷಗಳ ಹಿಂದೆ ಎಲ್ಲರ ಮನೆಗಳಲ್ಲಿಯೂ ಇದ್ದ ನೀರಿನ ಹಂಡೆ ಒಲೆ ಈಗಲೂ ಕಾಣಸಿಕ್ಕಿದ್ದರೆ ಅರ್ಧದಷ್ಟು ಕಸ ರಸ್ತೆಗೆ ಬೀಳುವುದು ತಪ್ಪುತ್ತಿತ್ತು. ಅಲ್ಲದೆ ‘ಹಳೇ ಪೇಪರ್ ಖಾಲಿ ಸೀಸ’ ಎಂದು ಕೂಗಿ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ. ಪುನರ್ಬಳಕೆ ಮಾಡುವಂಥ ವಸ್ತುಗಳನ್ನು ಮನೆ ಮನೆಗೂ ಬಂದು ಬೆಲೆ ಕೊಟ್ಟು ಕೊಳ್ಳುವ ಜನ ಇದ್ದರೆ,  ಅವನ್ನು ಮನೆಯಲ್ಲೇ ಸಂಗ್ರಹ ಮಾಡಿ ಅವರಿಗೆ ಕೊಡಲು ಆಸಕ್ತಿ ಬಂದೀತೇನೊ! ಪರಿಸರವನ್ನು ಉಳಿಸಿ ಬೆಳೆಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT