ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಪ್ರಶಸ್ತಿ

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ತಂಡದವರು ಪ್ರೌಢಶಾಲಾ ಮಟ್ಟದ ರಾಜ್ಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗಗಳ ತಂಡ ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾರೆ.

ಇಲ್ಲಿನ ಸ್ವರಾಜ್‌ ಮೈದಾನದಲ್ಲಿ ಮಂಗಳವಾರ ಮುಕ್ತಾಯವಾದ ಎರಡು ದಿನಗಳ ಈ ಕೂಟದ ಬಾಲಕ ಮತ್ತು ಬಾಲಕಿಯರ ವಿಭಾಗಗಳೆರಡರಲ್ಲಿಯೂ  ಬೆಂಗಳೂರಿನ ವಿದ್ಯಾನಗರ ಕ್ರೀಡಾ ಶಾಲಾ ತಂಡದವರು ಕ್ರಮವಾಗಿ 21 ಮತ್ತು 19 ಪಾಯಿಂಟ್ಸ್‌ ಗಳಿಸಿ ಎರಡನೇ ಸ್ಥಾನ ಪಡೆದುಕೊಂಡರು. ಮೊದಲ ಸ್ಥಾನ ಗಳಿಸಿದ ದ.ಕ.ಜಿಲ್ಲಾ ತಂಡದ ಬಾಲಕಿ ಯರು 74 ಪಾಯಿಂಟ್ಸ್‌ ಗಳಿಸಿದ್ದಾರೆ.

ಇಲ್ಲಿನ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆದ ಈ ಕೂಟ ದಲ್ಲಿ ಉಡುಪಿ ಜಿಲ್ಲೆಯ ಅಭಿನ್‌.ಬಿ. ದೇವಾಡಿಗ ಮತ್ತು ವಿದ್ಯಾನಗರ ಕ್ರೀಡಾ ಶಾಲೆಯ ಎ.ಟಿ.ಧಾನೇಶ್ವರಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ಗೆದ್ದುಕೊಂಡರು.

ಅಭಿನ್‌ ದೇವಾಡಿಗ 100 ಮೀ. ಮತ್ತು 200 ಮೀ. ಓಟದಲ್ಲಿ ಕ್ರಮವಾಗಿ ಚಿನ್ನ, ಬೆಳ್ಳಿ ಗೆದ್ದು ಒಟ್ಟು 8 ಪಾಯಿಂಟ್ಸ್‌ ಗಳಿಸಿದ್ದರೆ, ಧಾನೇಶ್ವರಿ 100ಮೀ. ಮತ್ತು 200 ಮೀ. ಓಟಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದ್ದೇ ಅಲ್ಲದೆ, ಲಾಂಗ್‌ಜಂಪ್‌ ನಲ್ಲಿ ರಜತ ಪದಕ ಗಳಿಸುವುದರೊಂದಿಗೆ ಒಟ್ಟು 13 ಪಾಯಿಂಟ್ಸ್‌ ಗಳಿಸಿದ್ದಾರೆ.

ಅಂತಿಮ ದಿನವಾದ ಮಂಗಳವಾರ ಮೂರು ನೂತನ ಕೂಟ ದಾಖಲೆ ಮೂಡಿ ಬಂದವು. ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಆಳ್ವಾಸ್‌ ಶಿಕ್ಷಣ ಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿ ಶ್ರೀಮಂತ್‌ ಬಾಲಕರ ಪೋಲ್‌ವಾಲ್ಟ್‌ ಸ್ವರ್ಧೆಯಲ್ಲಿ 3.40 ಮೀಟರ್ಸ್‌ ಎತ್ತರ ಜಿಗಿದು, 2011ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಹಮ್ಮದ್‌ ಹಸನ್‌ ಷೇಕ್‌ ಮಾಡಿದ್ದ ದಾಖಲೆಯನ್ನು (3.20 ಮೀ.) ಅಳಿಸಿ ಹಾಕಿದರು.

ಉಡುಪಿ ಜಿಲ್ಲೆಯ ಕರಿಷ್ಮಾ ಸನಿಲ್‌ ಅವರು ಬಾಲಕಿಯರ ಜಾವಲಿನ್‌ ಎಸೆತದ ಸ್ವರ್ಧೆಯಲ್ಲಿ 34.36 ಮೀಟರ್ಸ್‌ ದೂರದ ಸಾಧನೆ ಮಾಡುವುದ ರೊಂದಿಗೆ ನೂತನ ಕೂಟ ದಾಖಲೆ ನಿರ್ಮಿಸಿದರು. ಹಳೆಯ ದಾಖಲೆ ಬೆಂಗಳೂರು ಉತ್ತರದ ಸಾಧನಾ ಬಿ ಅವರ ಹೆಸರಿನಲ್ಲಿತ್ತು. ಸಾಧನಾ 2007ರಲ್ಲಿ 31.93 ಮೀಟರ್ಸ್‌ ಎತ್ತರ ಜಿಗಿದಿದ್ದರು.

ಬಾಲಕಿಯರ ವಿಭಾಗದ ಲಾಂಗ್‌ ಜಂಪ್‌ನಲ್ಲಿ ಹಾಸನ ಜಿಲ್ಲಾ ತಂಡದ ಜೇಬಾ ಮುಖ್ತಿಯಾರ್‌ 5.46 ಮೀಟರ್ಸ್‌ ದೂರ ಜಿಗಿದು ನೂತನ ಕೂಟ ದಾಖಲೆ ಮಾಡಿದರು. 2010ರಲ್ಲಿ ಬೆಂಗಳೂರು ಉತ್ತರದ ಜಿ.ಬಿ.ದೀಕ್ಷಿತಾ 5.21 ಮೀಟರ್ಸ್‌ ಎತ್ತರ ಜಿಗಿದು ಮಾಡಿದ್ದ ದಾಖಲೆಯನ್ನು ಜೇಬಾ ಹಿಂದಿಕ್ಕಿದರು.

ಈ ಕೂಟದಲ್ಲಿ ಮೊದಲ ದಿನ 4 ಮತ್ತು ಎರಡನೇ ದಿನ 3 ನೂತನ ಕೂಟ ದಾಖಲೆಗಳು ಮೂಡಿ ಬಂದವು. ಈ ಸಾಧನೆ ಮಾಡಿದ ಪ್ರತಿಯೊಬ್ಬರಿಗೂ ಆತಿಥೇಯ ಆಳ್ವಾಸ್‌ ಸಂಸ್ಥೆ ತಲಾ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿತು.

ಎರಡನೇ ದಿನದ ಫಲಿತಾಂಶ:  ಬಾಲಕರು:  200 ಮೀಟರ್ಸ್‌ ಓಟ: ವೈ.ಐ ಕುಮಾರ್‌ (ಸ್ಪೋರ್ಟ್ಸ್‌ ಹಾಸ್ಟೆಲ್‌ ವಿದ್ಯಾನಗರ (ಕಾಲ: 23.4ಸೆ)–1, ಅಬಿನ್‌ ದೇವಾಡಿಗ (ಉಡುಪಿ) (23.7ಸೆ)–2, ಡಿ. ರೋಹನ್‌ (ದಕ್ಷಿಣ ಕನ್ನಡ) (23.8ಸೆ)–3.
800 ಮೀ: ಎಚ್‌.ಎನ್‌ ಶಂಕರಪ್ಪ (ಯಾದಗಿರಿ) (ಕಾಲ:02ನಿ.04.00ಸೆ)–1, ತೇಜಸ್‌ (ಬೆಂಗಳೂರು ದಕ್ಷಿಣ) (02ನಿ.04.90ಸೆ)–2, ಜಿ.ಎಲ್‌ ಶಶಿಧರ (ಹಾಸನ) (02ನಿ.04.90ಸೆ)–3.

3000 ಮೀ: ದರೆಪ್ಪ ಮಗ್ದುಮ್‌ (ಚಿಕ್ಕೋಡಿ) (ಕಾಲ:09ನಿ.24.9ಸೆ)–1, ಲಕ್ಷ್ಮಣ (ಸ್ಪೋರ್ಟ್ಸ್‌ ಹಾಸ್ಟೆಲ್‌ ವಿದ್ಯಾನಗರ) (09ನಿ.28.30ಸೆ)–2, ಮುತ್ತಮ್ಮ ದೊಡ್ಡಪ್ಪಗೋಲ (ಬಾಗಲಕೋಟೆ) (09ನಿ.36.10ಸೆ)–3.
4X400 ಮೀಟರ್ಸ್‌ ರಿಲೇ: ಸ್ಪೋರ್ಟ್ಸ್‌ ಹಾಸ್ಟೆಲ್‌ ವಿದ್ಯಾನಗರ (ಕಾಲ: 46.0ಸೆ)–1,  ದಕ್ಷಿಣ ಕನ್ನಡ (46.1ಸೆ)–2, ಕೂಡಿಗೆ ಸ್ಪೋರ್ಟ್ಸ್‌ ಹಾಸ್ಟೆಲ್‌ ಕೊಡಗು (46.5ಸೆ)–3.

100 ಮೀ ಹರ್ಡಲ್ಸ್‌: ಎಚ್‌.ಜೆ ಮೋಹನ್‌ ಕುಮಾರ್‌ (ಕೂಡಿಗೆ ಸ್ಪೋರ್ಟ್ಸ್‌ ಹಾಸ್ಟೆಲ್‌) (ಕಾಲ: 14.00ಸೆ)–1, ಶ್ರವಣ್‌ ಎಸ್‌ ಉಲ್ಲಾಳ (ದಕ್ಷಿಣ ಕನ್ನಡ) (14.50ಸೆ)–2, ಸುಜಿತ್‌ ಜಾರ್ಜ್‌ (ದಕ್ಷಿಣ ಕನ್ನಡ) (15.00ಸೆ)–3.
5ಕಿ.ಮೀ ನಡಿಗೆ: ಸಚಿನ್‌ (ಮಂಡ್ಯ) (ಕಾಲ:27ನಿ.00.60ಸೆ)–1, ಬಿ.ಎಸ್‌. ಸೋಮೇಶ್‌ (ಚಿಕ್ಕಮಗಳೂರು) (27ನಿ.38.30ಸೆ)–2, ಎಮ್‌. ದೀಕ್ಷಿತ್‌ (ದಕ್ಷಿಣ ಕನ್ನಡ) (28ನಿ.03.70ಸೆ)–3.

ಲಾಂಗ್‌ ಜಂಪ್‌: ಮಂಜುನಾಥ (ಕೊಪ್ಪಳ) (ದೂರ:6.49ಮೀ)–1, ಮೊಹಮ್ಮದ್‌ ಅಜ್ಮಲ್‌ (ದಕ್ಷಿಣ ಕನ್ನಡ) (6.45ಮೀ)–2, ತಬರೆಜ್‌ ಪಾಶ (ಮೈಸೂರು) (6.22ಮೀ)–3.

ಪೋಲ್‌ ವಾಲ್ಟ್‌: ಶ್ರೀಮಂತ್‌ (ದಕ್ಷಿಣ ಕನ್ನಡ) (ಎತ್ತರ:3.40ಮೀ)–1, ಮೊಹಮ್ಮದ್‌ ರ್‍ಯಾನ್‌ ಶೇಕ್‌ (ಉತ್ತರ ಕನ್ನಡ) (2.80ಮೀ)–2, ಧರ್ಮೇಂದ್ರ ಗೌಡ) (ಶಿರಸಿ: 2.80ಮೀ)–3.

ಹ್ಯಾಮರ್‌ ಎಸೆತ: ಎಚ್‌.ಎಸ್‌ ವೃಷಭ (ಹಾವೇರಿ) (ದೂರ:38.5 8ಮೀ)–1, ಶಿವರಾಜ ಮುದುಕಪ್ಪ (ಕೊಪ್ಪಳ) (36.99ಮೀ)–2, ಪಿ.ವಿ.ಕಲ್ಲಿ (ಗದಗ) (36.99ಮೀ)–3.

ಜಾವೆಲಿನ್‌ ಎಸೆತ: ಎಮ್‌.ಎಲ್‌. ಮನೋಜ್‌ (ಹಾಸನ) (ದೂರ: 45.38ಮೀ)–1, ಎಚ್‌.ಟಿ ಆಶಿಕ್‌ (ಶಿವಮೊಗ್ಗ) (45.33ಮೀ)–2, ಎಮ್‌.ಆರ್‌. ಲಮಾಣಿ (ಬಾಗಲಕೋಟೆ) (43.97ಮೀ)–3.

ಬಾಲಕಿಯರು: 200ಮೀ ಓಟ: ಎ.ಟಿ.ದಾನೇಶ್ವರಿ (ಕ್ರೀಡಾ ಶಾಲೆ,  ವಿದ್ಯಾನಗರ) (ಕಾಲ:27.0ಸೆ)–1, ಜೋಶ್ನಾ (ದಕ್ಷಿಣ ಕನ್ನಡ) (27.2ಸೆ)–2, ಡಿ.ಭೂಮಿಕಾ (ದಕ್ಷಿಣ ಕನ್ನಡ) (27.3ಸೆ)–3.

800 ಮೀ: ರಿಮಲ್‌ ಜಾಸ್ಮಿನ್‌ ಪೈಸ್‌ (ದಕ್ಷಿಣ ಕನ್ನಡ) (ಕಾಲ: 02ನಿ.24.60ಸೆ)–1, ಡಿ.ಮೋನಿಕಾ (ದಕ್ಷಿಣ ಕನ್ನಡ) (02ನಿ.27.70ಸೆ)–2, ಪಲ್ಲವಿ ಅಪ್ಪಿಮ್‌ ಬೈಲ್‌ (ಬೆಳಗಾವಿ) (02ನಿ.27.80ಸೆ)–3.

3000ಮೀ:  ಪಲ್ಲವಿ ಅಪ್ಪಿಮ್‌ ಬೈಲ್‌ (ಬೆಳಗಾವಿ) (ಕಾಲ: 11ನಿ.11.00ಸೆ)–1, ಶೃತಿ ಗಾಂವ್ಕರ್‌ (ಬೆಳಗಾವಿ) (11ನಿ.12.20ಸೆ)–2, ಬಿ.ಎನ್‌ ಶ್ರುತಿ (ದಕ್ಷಿಣ ಕನ್ನಡ) (11ನಿ.15.50ಸೆ)–3.

4X100ಮೀ ರಿಲೇ: ದಕ್ಷಿಣ ಕನ್ನಡ (ಕಾಲ:51.4ಸೆ)–1, ಕ್ರೀಡಾ ಶಾಲೆ, ವಿದ್ಯಾನಗರ (53.5ಸೆ)–2, ಕೂಡಿಗೆ ಕ್ರೀಡಾ ಶಾಲೆ, ಕೊಡಗು (54.1ಸೆ)–3.

100ಮೀ ಹರ್ಡಲ್ಸ್‌: ವಿ.ಎಸ್‌. ಶ್ರೀದೇವಿಕಾ (ದಕ್ಷಿಣ ಕನ್ನಡ) (ಕಾಲ: 15.7ಸೆ)–1, ದೀಕ್ಷಿತಾ (ಉಡುಪಿ) (16.3ಸೆ)–2, ಜಿ. ಸಿಂಧುಶ್ರೀ (ಶಿವಮೊಗ್ಗ) (17.8ಸೆ)–3.

3 ಕಿ.ಮೀ. ನಡಿಗೆ ಸ್ವರ್ಧೆ: ಎಮ್‌. ಸ್ಪಂದನ (ಚಿಕ್ಕಮಗಳೂರು) (ಕಾಲ: 17ನಿ.02.10ಸೆ)–1, ಭಾಗ್ಯಜ್ಯೋತಿ (ಚಿಕ್ಕಮಗಳೂರು) (17ನಿ.04.40ಸೆ)–2, ಎಚ್‌.ಎನ್‌.ಪರಿಮಳ (ಮಂಡ್ಯ) (17ನಿ.28.50ಸೆ)–3.

ಲಾಂಗ್‌ ಜಂಪ್‌: ಜೇಬಾ ಮುಕ್ತಿಯಾರ್‌ (ಹಾಸನ) (ದೂರ: 5.46ಮೀ)–1, ಎ.ಟಿ ದಾನೇಶ್ವರಿ (ಕ್ರೀಡಾ ಶಾಲೆ, ವಿದ್ಯಾನಗರ) (5.04ಮೀ)–2, ಸುನಿತಾ ಕಾಮತ್‌ (ಉತ್ತರ ಕನ್ನಡ) (5.02ಮೀ)–3.

ಜಾವೆಲಿನ್‌ ಎಸೆತ: ಕರೀಷ್ಮಾ ಎಸ್‌ ಸನಿಲ್‌ (ಉಡುಪಿ) (ದೂರ: 34.36ಮೀ)–1, ಶ್ವೇತಾ (ದಕ್ಷಿಣ ಕನ್ನಡ) (29.41ಮೀ)–2, ಪಾರ್ವತಿ ಎಮ್‌. ನಾಯಕ್‌ (ಶಿರಸಿ) (29.13ಮೀ)–3. ಪೋಲ್‌ ವಾಲ್ಟ್‌: ಪೂರ್ಣ (ದಕ್ಷಿಣ ಕನ್ನಡ) (ಎತ್ತರ: 2.45ಮೀ)–1, ಆರ್‌. ರಚನಾ (ದಕ್ಷಿಣ ಕನ್ನಡ) (2.20ಮೀ)–2, ಕಾವ್ಯಾ ಚೆನ್ನಯ್ಯ (ಶಿರಸಿ) (2.00ಮೀ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT