ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ವಲಯ ಎಚ್ಚರಿಕೆಯ ಆಟ

ಹನುಮಂತ ಸಿಂಗ್‌ ಟ್ರೋಫಿ ಅಂತರ ವಲಯ ಕ್ರಿಕೆಟ್‌
Last Updated 2 ಜೂನ್ 2015, 19:30 IST
ಅಕ್ಷರ ಗಾತ್ರ

ದಾವಣಗೆರೆ: ಭೂಪೇನ್ ಲಾಲ್ವಾನಿ ಅವರ ಅಜೇಯ 172 ರನ್‌ಗಳ ನೆರವಿ ನಿಂದ ಪಶ್ಚಿಮ ವಲಯ, 16 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ 397 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಆದರೆ ದಕ್ಷಿಣ ವಲಯವೂ ದಿಟ್ಟ ಉತ್ತರ ನೀಡಿದ್ದು, ಮಂಗಳವಾರ ಎರಡನೇ ದಿನದಾಟ ಮುಗಿದಾಗ ವಿಕೆಟ್‌ ಕಳೆದುಕೊಳ್ಳದೇ 109 ರನ್‌ ಗಳಿಸಿದೆ.

ಜೆಎನ್ಎನ್‌ಸಿಇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಮೂರು ದಿನಗಳ ಪಂದ್ಯದಲ್ಲಿ ನಿರ್ಣಾಯಕ ಫಲಿತಾಂಶ ಬರುವ ಸಾಧ್ಯತೆ ಕಡಿಮೆಯಾಗಿದೆ. ಭೂಪೇನ್‌ 323 ಎಸೆತ ಎದುರಿಸಿ, ಎರಡು ಸಿಕ್ಸರ್‌, 23 ಬೌಂಡರಿ ಬಾರಿಸಿದರು. ದಕ್ಷಿಣ ವಲಯದ ಕಡೆ ರುಚಿರ್‌ ಮತ್ತು ಬಿ.ಎಂ.ಶ್ರೇಯಸ್‌ ತಲಾ ನಾಲ್ಕು ವಿಕೆಟ್‌ ಪಡೆದರು.

ದಕ್ಷಿಣ ವಲಯ ಎಚ್ಚರಿಕೆಗೆ ಆದ್ಯತೆ ನೀಡಿದ್ದು, ಡಿ.ಪಡಿಕಲ್‌ 68 ರನ್‌ (189 ಎಸೆತ, 11 ಬೌಂಡರಿ) ಮತ್ತು ನಾಯಕ ನಿಖಿನ್‌ ಜೋಸ್‌ 28 ರನ್‌ (188 ಎಸೆತ, 2ಬೌಂಡರಿ) ಗಳಿಸಿ ಅಜೇಯರಾಗಿದ್ದಾರೆ.

ಪೆಸಿಟ್‌ ಕ್ರೀಡಾಂಗಣದಲ್ಲಿ ಉತ್ತರ ವಲಯದ 472 ರನ್‌ಗಳ ಭಾರಿ ಮೊತ್ತಕ್ಕೆ ಉತ್ತರವಾಗಿ, ಕೇಂದ್ರ ವಲಯ ಕೂಡ ಹೋರಾಟ ಪ್ರದರ್ಶಿಸಿದ್ದು 3 ವಿಕೆಟ್‌ಗೆ 245 ರನ್‌ ಹೊಡೆದಿದೆ.

ಉತ್ತರ ವಲಯ ಲಂಚ್‌ಗೆ ಮೊದಲೇ, 7 ವಿಕೆಟ್‌ಗೆ 472 ರನ್‌ಗಳಾಗಿ ದ್ದಾಗ ಇನಿಂಗ್ಸ್‌ ಡಿಕ್ಲೇರ್‌ ಮಾಡಿ ಕೊಂಡಿತು. ಶುಭಮನ್‌ ಗಿಲ್‌ (ಸೋಮವಾರ: ಔಟಾಗದೇ 209), ಅಂತಿಮವಾಗಿ 219 ರನ್‌ ಗಳಿಸಿ ಅಜೇಯರಾಗೇ ಉಳಿದರು.

ಕೇಂದ್ರ ವಲಯದ ಪರ ಆರಂಭ ಆಟಗಾರ ರಾಹುಲ್‌ ಚಂದ್ರೋಲ್‌ (ಔಟಾಗದೇ 84, 8 ಬೌಂಡರಿ) ಮತ್ತು ಪ್ರಿಯಂ ಗರ್ಗ್‌ (ಔಟಾಗದೇ 70, 11 ಬೌಂಡರಿ) ಮುರಿಯದ ನಾಲ್ಕನೇ ವಿಕೆಟ್‌ಗೆ 91 ರನ್‌ ಸೇರಿಸಿದ್ದಾರೆ.  ಸೂರಜ್‌ ಸೆಂಗರ್‌ ಉಪಯುಕ್ತ ಅರ್ಧ ಶತಕ (52) ಗಳಿಸಿದರು.

ಸ್ಕೋರು: ಪೆಸಿಟ್ ಕ್ರೀಡಾಂಗಣ: ಪಶ್ಚಿಮ ವಲಯ: 120.3 ಓವರುಗಳಲ್ಲಿ 397 (ಭೂಪೇನ್ ಲಾಲ್ವಾನಿ ಔಟಾಗದೇ 172; ರುಚಿರ್ 77ಕ್ಕೆ4, ಬಿ.ಎಂ.ಶ್ರೇಯಸ್‌ 70ಕ್ಕೆ4); ದಕ್ಷಿಣ ವಲಯ: 63 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 109 (ಡಿ.ಪಡಿಕಲ್‌ ಬ್ಯಾಟಿಂಗ್‌ 68, ನಿಖಿನ್‌ ಜೋಸ್‌ ಬ್ಯಾಟಿಂಗ್‌ 28).

ಜೆಎನ್‌ಎನ್‌ಸಿಇ ಕ್ರೀಡಾಂಗಣ: ಉತ್ತರ ವಲಯ: 95.1 ಓವರುಗಳಲ್ಲಿ 7 ವಿಕೆಟ್‌ಗೆ 472 ಡಿಕ್ಲೇರ್‌ (ಶುಭಮನ್‌ ಗಿಲ್‌ ಔಟಾಗದೇ 219, ರಿತಿಕ್‌ ಸಿಂಗ್‌ 86; ಪೂರ್ನಕ್‌ ತ್ಯಾಗಿ 62ಕ್ಕೆ5); ಕೇಂದ್ರ ವಲಯ: 86 ಓವರುಗಳಲ್ಲಿ 3 ವಿಕೆಟ್‌ಗೆ 245 (ರಾಹುಲ್‌ ಚಂದ್ರೋಲ್‌ ಬ್ಯಾಟಿಂಗ್‌ 84, ಸೂರಜ್‌ ಸೆಂಗರ್‌ 52, ಪ್ರಿಯಂ ಗರ್ಗ್‌ ಬ್ಯಾಟಿಂಗ್ 70).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT