ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ ಪರಿಷ್ಕರಣೆ ಕಡ್ಡಾಯ

ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾವ
Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾಲ ಕಾಲಕ್ಕೆ ವಿದ್ಯುತ್‌ ದರವನ್ನು ಕಡ್ಡಾಯವಾಗಿ ಪರಿಷ್ಕರಿಸುವ ಅಧಿಕಾರವನ್ನು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ನೀಡಲು ಬಯಸಿರುವ  ಕೇಂದ್ರ ಸರ್ಕಾರ, ಈ ಕುರಿತ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದೆ.

ವಿದ್ಯುತ್‌ ಸರಬರಾಜು ಸಂಸ್ಥೆಗಳು ದರ ಪರಿಷ್ಕರಿಸುವಂತೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ವಿನಂತಿಸಿಕೊಳ್ಳದಿದ್ದರೂ, ನಿಗದಿತ ಕಾಲ ಘಟ್ಟಗಳಲ್ಲಿ ಕಡ್ಡಾಯವಾಗಿ ವಿದ್ಯುತ್‌ ದರ ಪರಿಷ್ಕರಣೆ ಮಾಡುವ ಸ್ವಯಂ ಪ್ರೇರಿತ ಅಧಿಕಾರವನ್ನು ಆಯೋಗಕ್ಕೆ ನೀಡುವ ಪ್ರಸ್ತಾವವು ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ– 2014ರಲ್ಲಿ  ಇದೆ.

ದರ ಪರಿಷ್ಕರಣೆ ಸಂಬಂಧ ಆಯೋಗ ಹೊರಡಿಸಿದ ಆದೇಶವನ್ನು ಪಾಲಿಸದ ವಿದ್ಯುತ್‌ ಸರಬರಾಜು ಸಂಸ್ಥೆಗಳಿಗೆ ದಂಡ ಹಾಕುವ ಅಧಿಕಾರವನ್ನೂ ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಚುನಾವಣಾ ಸಂದ­ರ್ಭದಲ್ಲಿ ವಿದ್ಯುತ್‌ ದರ ಏರಿಕೆ ಮಾಡಿದರೆ ಜನರ ಕೆಂಗಣ್ಣಿಗೆ ಗುರಿಯಾಬೇಕಾದೀತು ಎಂಬ ಅಂಜಿ­ಕೆ­ಯಿಂದ ದರ ಪರಿಷ್ಕರಿಸುವಂತಹ ಕೋರಿ­ಕೆ­ಯನ್ನು ತಡೆಹಿಡಿಯುವಂತೆ ವಿದ್ಯುತ್‌ ಸರಬ­ರಾಜು ಸಂಸ್ಥೆಗಳ ಮೇಲೆ ಸರ್ಕಾರಗಳು ಒತ್ತಡ ಹಾಕು­ತ್ತಿ­ದ್ದವು. ಆದರೆ, ಈ ಮಸೂದೆಗೆ ಅಂಗೀಕಾರ ದೊರಕಿ­ದರೆ ಸರ್ಕಾರಗಳ ಇಂತಹ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT