ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಕಾಯ್ದೆ: ರಾಮ್‌ದೇವ್‌ ವಿರುದ್ಧ ಎಫ್‌ಐಆರ್‌

ವಿವಾದಕ್ಕೆ ಗುರಿಯಾದ ‘ಮಧುಚಂದ್ರ ’ ಟೀಕೆ
Last Updated 27 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಖನೌ/ಅಹಮದಾಬಾದ್‌ (ಪಿಟಿಐ): ‘‘ರಾಹುಲ್‌ ಗಾಂಧಿ ಅವರು ದಲಿತರ ಮನೆಗೆ ‘ಮಧುಚಂದ್ರ’ಕ್ಕಾಗಿ ತೆರಳುತ್ತಾರೆ’’ ಎಂದು ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್‌ದೇವ್‌ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ.
ಅಹಮದಾಬಾದ್‌ನ ‘ಅಂಬೇಡ್ಕರ್‌್ ಕಾರ್ವಾನ್‌್’ ಎಂಬ ಸರ್ಕಾ­ರೇ­ತರ ಸಂಸ್ಥೆಯೊಂದು ರಾಮ್‌ದೇವ್‌್ ವಿರುದ್ಧ ಈ ಕಾಯ್ದೆ ಅಡಿ ಎಫ್‌ಐ­ಆರ್‌್ ದಾಖಲಿಸಿದೆ.

ಕಾಂಗ್ರೆಸ್‌ನ ದಲಿತ್‌ ಮೋರ್ಚಾ ಸಹ ಇದೇ ಕಾಯ್ದೆ ಅಡಿ ರಾಮ್‌ದೇವ್‌ ವಿರುದ್ಧ ದೂರು ನೀಡಿದೆ. ರಾಮ್‌ದೇವ್‌ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ, ಚುನಾ­ವಣೆ ಮುಗಿಯುವ ತನಕ ಲಖನೌದಲ್ಲಿ ಅವರು ಯಾವುದೇ ಕಾರ್ಯಕ್ರಮ ನಡೆ­ಸ­ದಂತೆ ಜಿಲ್ಲಾಡಳಿತವು ನಿಷೇಧ ವಿಧಿಸಿದೆ.

‘ತಮ್ಮ ಸಂಸ್ಥೆಯ ವತಿಯಿಂದ ಯೋಗ ಕಾರ್ಯಕ್ರಮಗಳನ್ನು ಮಾತ್ರ ನಡೆ­ಸ­ಲಾ­ಗುವುದು. ಅದನ್ನು ಹೊರತು­ಪಡಿಸಿದರೆ ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ’ ಎಂದು ಈ ಮುಂಚೆ ರಾಮ್‌­ದೇವ್‌ ಅವರಿಂದ ಪ್ರಮಾಣಪತ್ರ ಪಡೆಯಲಾಗಿತ್ತು. ಆದರೆ ರಾಮ್‌­ದೇವ್‌ ಅವರ ಈಚಿನ ಹೇಳಿಕೆ ವಿರೋಧಿಸಿ ಪ್ರತಿಭಟನೆ­ಗಳು ನಡೆದಿರುವುದರಿಂದ ನಗರದಲ್ಲಿ ಮೇ 16ರವರೆಗೆ ಅವರು ಯಾವುದೇ ಕಾರ್ಯಕ್ರಮ ನಡೆಸದಂತೆ ನಿಷೇಧ ಹೇರ­ಲಾಗಿದೆ ಎಂದು ಹಿರಿಯ ಅಧಿಕಾರಿ­ಯೊಬ್ಬರು ತಿಳಿಸಿದರು.

ರಾಮ್‌ದೇವ್‌ ಅವರು ಏ.25­ರಂದು ರಾಹುಲ್‌ ಕುರಿತು ನೀಡಿದ ಹೇಳಿಕೆ  ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅವರ­ ಬಂಧನಕ್ಕಾಗಿ ಆಗ್ರಹಿಸಿದೆ. ‘ರಾಮ್‌­­ದೇವ್‌ ಅವರು ದಲಿತ ಸಮುದಾಯವನ್ನು ಅವಮಾನಿಸಿ­ದ್ದಾರೆ. ಇಂತಹ ಅಪರಾಧಗಳಿಗೆ ಕ್ಷಮೆ ಸಾಧ್ಯವೇ ಇಲ್ಲ’ ಎಂದು ಪಕ್ಷದ ಮುಖಂಡ ರಷೀದ್‌ ಅಲ್ವಿ ಹೇಳಿದ್ದಾರೆ.

ಅಹಮದಾಬಾದ್‌್ ವರದಿ: ರಾಮ್‌­ದೇವ್‌ ಅವರ ಹೇಳಿಕೆ ವಿವಾದಕ್ಕೆ ಗುರಿ­ಯಾದ ಬೆನ್ನಲ್ಲೇ ಚುನಾವಣಾ ಆಯೋ­ಗವು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಯಾರೇ ಆಗಲಿ ಬೇರೊಬ್ಬ ವ್ಯಕ್ತಿಯ ಖಾಸಗಿ ಜೀವನದ ಬಗ್ಗೆ ಅವಹೇಳನ­ಕಾರಿ ಹೇಳಿಕೆ ನೀಡಬಾರದು. ಯಾರು ಈ ನಿರ್ದೇಶನ ಪಾಲಿಸುವುದಿಲ್ಲವೋ ಅಂಥವರಿಗೆ ಚುನಾವಣೆ ಮುಗಿಯುವ ತನಕ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸದಂತೆ ನಿಷೇಧ ಹೇರಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT