ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಮಟ್ಟದಿಂದ ಇಳಿದ ಸೂಚ್ಯಂಕ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ ಷೇರು­ಪೇಟೆ ಸಂವೇದಿ ಸೂಚ್ಯಂಕವು ಮಂಗಳ­ವಾರ ವಹಿವಾ­ಟಿನ ಒಂದು ಹಂತದಲ್ಲಿ ಹೊಸ ಸಾರ್ವಕಾಲಿಕ ದಾಖಲೆ ಮಟ್ಟ­ವಾದ 22,853 ಅಂಶಗಳನ್ನು ತಲು­ಪಿತು. ಆದರೆ, ಮಾಹಿತಿ ತಂತ್ರಜ್ಞಾನ, ಲೋಹ ಮತ್ತು ವಾಹನ ಉದ್ಯಮ ವಲ­ಯ­ಗಳ ಷೇರು­ಗಳ ಮಾರಾಟದ ಒತ್ತಡ­ದಿಂದ ದಿನದಂ­ತ್ಯದಲ್ಲಿ 22,758 ಅಂಶ­ಗಳಿಗೆ ವಹಿವಾಟು ಕೊನೆಗೊಳಿಸಿತು.

ಸೋಮವಾರಕ್ಕೆ ಹೋಲಿಸಿದರೆ ಸೂಚ್ಯಂಕ ಆರು ಅಂಶಗಳಷ್ಟು ಕುಸಿತ ಕಂಡಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ ಎರಡು ಅಂಶಗಳಷ್ಟು ಕುಸಿತ ದಾಖಲಿಸಿ 6,815 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಖರೀದಿ ಭರಾಟೆ ಮುಂದು­ವರಿದಿದೆ. ಸೋಮವಾರ ₨212.85 ಕೋಟಿ ‘ಎಫ್‌ಐಐ’ ಹೂಡಿಕೆ ದಾಖಲಾ­ಗಿದೆ ಎಂದು ಷೇರುಪೇಟೆ ನಿಯಂತ್ರಣ ಮಂಡಳಿ ‘ಸೆಬಿ’ ಹೇಳಿದೆ.

ಬುಧವಾರ (ಏ.23) ಫ್ಯೂಚರ್‌ ಅಂಡ್‌ ಆಪ್ಷನ್ಸ್‌ (ಎಫ್‌ಅಂಡ್‌ಒ) ಏಪ್ರಿಲ್‌ ಕರಾರಿನ ಕೊನೆಯ ದಿನವಾದ್ದ­ರಿಂದ ಷೇರುಪೇಟೆ­ಯಲ್ಲಿ ಗರಿಷ್ಠ ಏರಿಳಿತ ನಿರೀಕ್ಷಿಸಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

‘ಚುನಾವಣೆ ನಂತರ ಸ್ಥಿರವಾದ ಸರ್ಕಾರ ರಚನೆಯಾಗಲಿದ್ದು, ಮುಂದಿನ ಐದು ವರ್ಷಗಳಲ್ಲಿ ದೇಶವು ಶೇ 6.5­ರಷ್ಟು ‘ಜಿಡಿಪಿ’ ಪ್ರಗತಿ ದಾಖಲಿ­ಸಲಿದೆ ಎಂದು ರೇಟಿಂಗ್‌ ಸಂಸ್ಥೆ ‘ಕ್ರಿಸಿಲ್‌’ ಭವಿಷ್ಯ ನುಡಿದಿರುವುದು ಸಹ ಹೂಡಿಕೆ­ದಾರರಲ್ಲಿ ವಿಶ್ವಾಸ ಮೂಡಿಸಿದೆ’ ಎಂದು  ರೆಲಿಗೇರ್‌ ಸೆಕ್ಯುರಿಟೀಸ್‌ನ ರಿಟೇಲ್‌ ವಿಭಾಗದ ಮುಖ್ಯಸ್ಥ ಜಯಂತ್‌ ಮಂಗ್ಲಿಕ್‌ ಅಭಿಪ್ರಾಯಪಟ್ಟಿದ್ದಾರೆ.

ದಿನದ ವಹಿವಾಟಿನಲ್ಲಿ ವಿಪ್ರೊ, ಎಸ್‌ಬಿಐ, ಮಾರುತಿ ಸುಜುಕಿ, ಟಾಟಾ ಷೇರುಗಳು ನಷ್ಟ ಅನುಭವಿಸಿದವು. ಕಾರ್ಪೊರೇಟ್‌ ಕಂಪೆನಿಗಳ ಜನವರಿ­–ಮಾರ್ಚ್‌ ತ್ರೈಮಾಸಿಕ ಫಲಿತಾಂಶ ಪೇಟೆಗೆ ಬಲ ತುಂಬ­ಬಹುದು ಎಂದು ಬೊನಾಂಜಾ ಪೋರ್ಟ್‌ಫೋಲಿಯೊ ಸಂಸ್ಥೆ  ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT