ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಮಂಜುನಾಥ ಚಾಂಪಿಯನ್‌

ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ:
Last Updated 21 ಡಿಸೆಂಬರ್ 2014, 19:49 IST
ಅಕ್ಷರ ಗಾತ್ರ

ಬೆಳಗಾವಿ: ದಾವಣಗೆರೆಯ ಎಸ್. ಮಂಜುನಾಥ ಅವರು ಇಲ್ಲಿನ ಸರ್ದಾರ್‍ಸ್‌ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ‘7ನೇ ಸತೀಶ್ ಶುಗರ್‍ಸ್‌ ಕ್ಲಾಸಿಕ್’ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಗೆಲುವಿನ ನಗೆ ಬೀರಿದ ಮಂಜುನಾಥ್‌ ₨ 1,55,555 ನಗದು ಜೊತೆಗೆ ಟ್ರೋಫಿ ಎತ್ತಿಹಿಡಿದರು. ಬೆಸ್ಟ್‌ ಪೋಸರ್ ಆಗಿ ಆಯ್ಕೆಯಾದ ಬೆಳಗಾವಿಯ ವಿನೋದ ಮೇತ್ರಿ ₨ 20 ಸಾವಿರ ನಗದು ಬಹುಮಾನ ಪಡೆದುಕೊಂಡರು.

ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₨ 15 ಸಾವಿರ, ದ್ವಿತೀಯ ಸ್ಥಾನಕ್ಕೆ ₨ 14 ಸಾವಿರ, ತೃತೀಯ ಸ್ಥಾನಕ್ಕೆ ₨ 13 ಸಾವಿರ, ನಾಲ್ಕನೇ ಸ್ಥಾನಕ್ಕೆ ₨ 12 ಸಾವಿರ ಮತ್ತು ಐದನೇ ಸ್ಥಾನ ಪಡೆದವರಿಗೆ ₨ 11 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ಫಲಿತಾಂಶ: 55 ಕೆ.ಜಿ. ವಿಭಾಗ: ವಿವೇಕ ಪವಾರ್ (ಬೆಳಗಾವಿ)–1, ರಿತೇಶ್‌ ಕೋಟ್ಯಾನ್‌ (ದಕ್ಷಿಣ ಕನ್ನಡ)–2, ಉಮೇಶ ಗಂಗಾನೆ (ಬೆಳಗಾವಿ)–3.

60 ಕೆ.ಜಿ. ವಿಭಾಗ: ಭೈರು ಪಾಟೀಲ (ಬೆಳಗಾವಿ)–1, ಕಿಶೋರ ಪಾಟೀಲ (ಬೆಳಗಾವಿ)–2, ಕುಮಾರ  (ಉಡುಪಿ)
–3.

65 ಕೆ.ಜಿ. ವಿಭಾಗ: ರಕ್ಷಿತ್ ಕೋಟಿಯಾನ್ (ದಕ್ಷಿಣ ಕನ್ನಡ)–1, ರಮೇಶ ಕೋಟಿಯಾನ್‌ (ದಕ್ಷಿಣ ಕನ್ನಡ)–2 , ವಿನೋದ ಮೇತ್ರಿ (ಬೆಳಗಾವಿ)–3.

70 ಕೆ.ಜಿ. ವಿಭಾಗ: ಆನಂದ ಸುವರ್ಣ (ಉಡುಪಿ)–1, ಜಿಲಾನಿ (ದಾವಣಗೆರೆ)–2, ರಿತೇಶ ಕೋಟಿಯಾನ್‌ (ದಕ್ಷಿಣ ಕನ್ನಡ)–3.
75 ಕೆ.ಜಿ. ವಿಭಾಗ: ಕೆ. ಕುಮಾರ (ಬೆಂಗಳೂರು)–1, ಎಸ್‌. ಅಪ್ಪು (ಬೆಂಗಳೂರು)–2, ಓಂಕಾರ ಮೋಟಾರ್ (ಬೆಳಗಾವಿ)–3.
80 ಕೆ.ಜಿ. ವಿಭಾಗ: ಶೌಕತ್ ಅಲಿ (ಶಿವಮೊಗ್ಗ)–1, ಪ್ರಶಾಂತ್‌ ಕಣ್ಣೂಕರ (ಬೆಳಗಾವಿ)–2, ಸಿದ್ದು ದೇಶನೂರ– (ಬೆಳಗಾವಿ) 3.
80 ಕೆ.ಜಿ. ಮೇಲ್ಪಟ್ಟವರ ವಿಭಾಗ:  ಎಸ್‌. ಮಂಜುನಾಥ (ದಾವಣಗೆರೆ)–1, ಜಿ. ಗೋಪಿ (ಬೆಂಗಳೂರು)–2, ಪ್ರಣಯ ಶೆಟ್ಟಿ (ಬೆಳಗಾವಿ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT