ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಕ್ಕು ತಪ್ಪಿದ ಅಟ್‌ಕ್ಯಾಗ್ ಸೈಕಲ್ ಯೋಜನೆ

Last Updated 25 ಜನವರಿ 2015, 20:39 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿ-–ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣದ ನಡುವೆ 2012ರಲ್ಲಿ ಪ್ರಾಯೋಗಿಕವಾಗಿ ಆರಂಭಿ­ಸಿದ್ದ ‘ಅಟ್‌ಕ್ಯಾಗ್ ಸೈಕಲ್ ಯೋಜನೆ’ ಜನಸ್ಪಂದನೆ­ಯಿಲ್ಲದೆ ಸೊರಗಿದೆ.

ಮಾಲಿನ್ಯವನ್ನು ತಡೆಗಟ್ಟಲು ಹಾಗೂ ಸೈಕಲ್ ಬಳಕೆಯನ್ನು ಉತ್ತೇಜಿಸಲು  ಬಿಬಿಎಂಪಿಯು ನಗರ ಭೂ ಸಾರಿಗೆ ನಿರ್ದೇಶ­ನಾಲಯ (ಡಲ್ಟ್) ಮತ್ತು ಕೆರ್ಬೆರಾನ್ ಸಂಸ್ಥೆಯ ಸಹಯೋಗ­ದೊಂದಿಗೆಯೋಜನೆಯನ್ನು ಆರಂಭಿಸಿತ್ತು.

ಬಿಬಿಎಂಪಿ ಸಹಯೋಗದಿಂದ ನಗರದ ಅನಿಲ್ ಕುಂಬ್ಳೆ ವೃತ್ತ, ಬಿಗ್ರೇಡ್ ವೃತ್ತ ಮೆಯೋ­ಹಾಲ್‌ನ ಯುಟಿಲಿಟಿ ಕಟ್ಟಡ ಬಳಿ ‘ಡಾಕಿಂಗ್

ಏನಿದು ಅಟ್‌ಕ್ಯಾಗ್‌
ಅಟ್‌ಕ್ಯಾಗ್‌(ಆಟೋಮೇಟೆಡ್‌  ಬೈಸಿಕಲ್ ಷೇರಿಂಗ್ ಸಿಸ್ಟಮ್‌)ಎಂದರೆ ಸ್ಮಾರ್ಟ್‌ ಕಾರ್ಡ್‌ ಅನ್ನು  ಸ್ವೈಪ್‌ ಮಾಡಿ ಸೈಕಲ್‌ ಬಾಡಿಗೆ ಪಡೆ­ಯುವ ವ್ಯವಸ್ಥೆ.
ಸೈಕಲ್ ಬಾಡಿಗೆಗೆ ಠೇವಣಿ ರೂಪವಾಗಿ ಮೊದಲು ₨ 1000 ಪಾವತಿ ಮಾಡಬೇಕು. ದಾಖಲೆ­­ಯೊಂದಿಗೆ  ಆನ್‌ಲೈನ್‌ನಲ್ಲಿ ಹೆಸರು ನೋಂದಾ­ಯಿಸಿ ಸದಸ್ಯರಾಗಬಹುದು. ಸೈಕಲ್  ಬಾಡಿಗೆ ಪಡೆಯಲು ₨ 250 ಪಾವತಿಸಿ ರೀಚಾರ್ಜ್ ಮಾಡಿಸಿಕೊಂಡರೆ ಸಂಸ್ಥೆ ಸ್ಮಾರ್ಟ್‌ ಕಾರ್ಡ್‌ ನೀಡುತ್ತದೆ. ಮೊದಲ ಒಂದು ಗಂಟೆಗೆ ಬಾಡಿಗೆ ಇರುವುದಿಲ್ಲ. ನಂತರ ಪ್ರತಿ ಗಂಟೆಗೆ ₨ 10 ಬಾಡಿಗೆ ನೀಡಬೇಕು. ಒಂದು ವೇಳೆ ಸದಸ್ಯತ್ವ ಬೇಡ ಎಂದು ಬಿಟ್ಟರೆ ಠೇವಣಿ ಹಣವನ್ನು ಹಿಂತಿರುಗಿಸಲಾಗುತ್ತದೆ.
ಸೈಕಲ್‌ಗಳನ್ನು ಬಾಡಿಗೆ ಪಡೆದ ಸ್ಥಳದ­ಲ್ಲಿಯೇ ಹಿಂತಿರುಗಿಸಬೇಕೆಂದಿಲ್ಲ. ಒಂದು ಸೈಕಲ್ ನಿಲ್ದಾಣದಲ್ಲಿ ಬಾಡಿಗೆ ಪಡೆದ      ಸೈಕ­ಲನ್ನು ಇನ್ನೊಂದು ನಿಲ್ದಾಣದಲ್ಲಿ ನಿಲ್ಲಿಸ­ಬಹುದು.

ಅಗತ್ಯ ಸ್ಥಳಾವಕಾಶದ ಕೊರತೆ
‘500 ಮೀಟರ್‌ಗೊಂದು ಒಂದು ಸೈಕಲ್‌ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಇದೆ. ಇದಕ್ಕೆ ಬಿಬಿಎಂಪಿ ಕಡೆಯಿಂದ ಅಗತ್ಯ ಸ್ಥಳಾವಕಾಶ ಹಾಗೂ ನೆರವು ನಿರೀಕ್ಷಿಸುತ್ತಿದ್ದೇವೆ’
– ಶ್ರೀನಿಧಿ, ಸಂಸ್ಥೆಯ ನಿರ್ದೇಶಕ

ಸೈಕಲ್ ಲೇನ್‌ಗಳ ನಿರ್ಮಿಸಿ
‘ನಗರದ ರಸ್ತೆಗಳು ವಾಹನಗಳಿಗೆ ಹೆಚ್ಚು ಸ್ಥಳಾ­ವಕಾಶ ಕಲ್ಪಿಸಿವೆ. ಇದರಿಂದ ಸೈಕಲ್‌ ಓಡಾ­­­ಟಕ್ಕೆ ಸ್ಥಳದ ಕೊರತೆ ಎದುರಾಗಿದೆ. ಮಡಿ­ವಾಳದಲ್ಲಿ ಸೈಕಲ್ ಲೇನ್ ನಿರ್ಮಾಣಕ್ಕೆ ಅನು­ಮೋದನೆ ಸಿಕ್ಕಿದೆ. ಇದೇ ರೀತಿ ನಗರದ ಎಲ್ಲ ಕಡೆ­­ಗಳಲ್ಲಿ ಸೈಕಲ್‌ ಲೇನ್‌ಗಳನ್ನು ನಿರ್ಮಿಸ­ಬೇಕು’  
ಮುರಳಿ, ‘ನಮ್ಮ ಸೈಕಲ್’ ಸಂಸ್ಥೆಯ ನಿರ್ದೇಶಕ

ಸೈಕಲ್ ನಿಲ್ದಾಣ’ ನಿಮಾರ್ಣವಾಗಿದೆ. ಯೋಜನೆ ಆರಂಭವಾಗಿ ಎರಡೂವರೆ ವರ್ಷ ಕಳೆದರೂ ಸೈಕಲ್‌ ಬಾಡಿಗೆಗೆ ಪಡೆಯಲು ಹೆಸರು ನೋಂದಾಯಿಸಿ­ರುವುದು 300 ಮಂದಿ ಮಾತ್ರ.

‘ಸಂಚಾರ ಸಮಸ್ಯೆ ಕಡಿಮೆ ಮಾಡುವ ಜತೆಗೆ ನಾಗರಿಕರಲ್ಲಿ ಸೈಕಲ್‌ ಬಳಕೆ ಕುರಿತು ಅರಿವು ಮೂಡಿಸುವ  ಯೋಜನೆ ಇದಾ­ಗಿತ್ತು. ಆದರೆ, ಆರ್ಥಿಕ ಮುಗ್ಗಟ್ಟು ಮತ್ತು ಪ್ರಚಾರದ ಕೊರತೆ­ಯಿಂದ ಯೋಜನೆಗೆ ಹಿನ್ನಡೆಯಾಗಿದೆ’ ಎಂದು ಕೆರ್ಬೆರಾನ್ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಬೈಯಪ್ಪನ ಹಳ್ಳಿಯಿಂದ ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣ­ದವರೆಗೆ ಅಟ್‌ಕ್ಯಾಗ್ ಕಾರ್ಯನಿರ್ವಹಿಸುತ್ತಿದೆ. ನಗರದ ಕೆಲವೇ ಕಡೆಗಳಲ್ಲಿ ಸೈಕಲ್‌ ಅನ್ನು ಬಾಡಿಗೆ ಪಡೆ­ಯುವ ಸೌಕರ್ಯ ಇರುವುದರಿಂದ ಬಹುತೇಕ ಜನರಿಗೆ ಈ  ಯೋಜನೆ ಇದೆ ಎನ್ನುವುದೇ ತಿಳಿದಿಲ್ಲ’ ಎಂದು ಸೈಕಲ್‌ ಸವಾರರೊಬ್ಬರು ದೂರುತ್ತಾರೆ.

‘ಬರೀ ಮೆಟ್ರೊ ನಿಲ್ದಾಣಗಳಲ್ಲಿ ಇಂತಹ ವ್ಯವಸ್ಥೆ ಕಲ್ಪಿಸಿದರೆ ಸಾಲದು. ನಗರದ ಪ್ರಮುಖ ರಸ್ತೆಗಳು ಹಾಗೂ ಹೆಚ್ಚು  ಜನಸಂದಣಿ  ಇರುವ  ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಶಿವಾಜಿನಗರ, ಶಾಂತಿನಗರ ಮತ್ತಿತರ ರಸ್ತೆಯಲ್ಲಿ ಸೈಕಲ್‌ ಬಾಡಿಗೆ ಪಡೆಯುವ  ವ್ಯವಸ್ಥೆ ಕಲ್ಪಿಸಬೇಕು’ ಎಂದು ನಾಗವಾರಪಾಳ್ಯದ ನಿವಾಸಿ ಸಂತೋಷ್ ಸಲಹೆ ನೀಡುತ್ತಾರೆ.

‘ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಬಾಡಿಗೆ ಸೈಕಲ್ ತಂಗುದಾಣಗಳಿಗೆ ಟೆಂಡರ್‌ ಕರೆದರೆ  ಸಂಪಿಗೆ ರಸ್ತೆಯಿಂದ ಪೀಣ್ಯ ಮೆಟ್ರೊ ನಿಲ್ದಾಣದವರೆಗೂ ಯೋಜನೆಯನ್ನು ವಿಸ್ತರಿಸಲು ಸಿದ್ಧ’ ಎಂದು ಕೆರ್ಬೆರಾನ್ ಸಂಸ್ಥೆಯ ನಿರ್ದೇಶಕ ಶ್ರೀನಿಧಿ ತಿಳಿಸುತ್ತಾರೆ.
ಸೈಕಲ್ ಬಾಡಿಗೆ ಪಡೆಯಲು ಆಸಕ್ತಿ ಹೊಂದಿ­ರು­ವವರು ವೆಬ್‌ಸೈಟ್ www.atcag.inನಲ್ಲಿ ಹೆಸರು ನೋಂದಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT