ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡೇ ದೊಡ್ಡಪ್ಪ ಎಂದಾದರೆ ಹೇಗೆ?

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕ್ಯಾಪ್ಟನ್  ಜಿ.ಆರ್.  ಗೋಪಿನಾಥ್ ಅವರ ಅಂಕಣಕ್ಕೆ  ನನ್ನ ಪ್ರತಿಕ್ರಿಯೆ (ಅರ್ಥವಿಚಾರ, ಪ್ರ.ವಾ., ಸೆ.10).  ಈ ಬರಹ  ಓದಿ ನನಗೆ ಅಚ್ಚರಿ  ಆಗಲಿಲ್ಲ. ಕಾರಣ, ಸರ್ಕಾರದ ವಹಿವಾಟು ಎಂದರೆ ಅದು  ಕೇವಲ ಹಣಕಾಸೇ, ಎಂದು ಪ್ರತಿ­ಪಾ­ದಿ­ಸಿ­ದವರಲ್ಲಿ ಗೋಪಿನಾಥರೇ ಮೊದಲೇ­ನಲ್ಲ.  ಈ ರೀತಿ ಹಣಕಾಸಿನ ನಿಟ್ಟಿನಲ್ಲಿ ಮಾತ್ರವೇ ಯೋಚಿಸುವವರು  ‘ಜನರು ದೇಶದ ಸಂಪತ್ತು’ ಎಂಬುದನ್ನು  ಒಪ್ಪುವುದಿಲ್ಲ. ಪ್ರವಾಸಿಗಳು, ಅವರ ಕಷ್ಟ ಸುಖಗಳು ದೇಶದ ಸಾಮಾನ್ಯ ಪ್ರಜೆಯ ಬದುಕಿನ ಆದ್ಯತೆ­ಗಿಂತಲೂ  ಪ್ರಮುಖ ಎಂಬ ಈ ಬಗೆಯ ನಿಲುವು ಸರಿಯಲ್ಲ. ಇದು ಕೇವಲ ವ್ಯಾಪಾರಿ ನಿಲುವು ಮಾತ್ರ.

ಇಂದು  ಪಂಜಾಬಿನಲ್ಲಿ  ಮಾದಕ ಪದಾ­ರ್ಥಗಳ ಸೇವನೆ ಹೆಚ್ಚಾಗಿದ್ದು, ಪಂಜಾಬಿನ ಶೇಕಡ  ೭೦ರಷ್ಟು  ತರುಣರು ದುರ್ವ್ಯಸನಿ
­ಗಳಾ­ಗಿದ್ದಾರೆ. ಅಂತೆಯೇ ನಾಗಾಲ್ಯಾಂಡ್  ಮತ್ತು ಮಣಿಪುರದ ಪರಿಸ್ಥಿತಿ ಇದಕ್ಕಿಂತ ಬೇರೆ­ಯೇನಲ್ಲ. ಅದರಿಂದ ದೇಶಕ್ಕೆ ಎಷ್ಟು
ಉತ್ಪಾ­ದನೆ­, ಸಂಪತ್ತು ­ಕಡಿಮೆಯಾಗಿದೆ ಎನ್ನುವು­ದರ ಬಗ್ಗೆ ಚಿಂತೆಯೇ ಇಲ್ಲ. 

ಕೇರಳದಲ್ಲಿ ಕುಡಿತದಿಂದ ಆ ರಾಜ್ಯದ ವರಮಾನ ಎಷ್ಟು ನಷ್ಟವಾಗಿದೆ ಅನ್ನುವುದರ ಬಗ್ಗೆಯೂ ಚಿಂತಿಸುವುದು ಮುಖ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT