ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿಯಾಗಲಿದೆ ಕಾಶ್ಮೀರ ಸೇಬು

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಮ್ಮು–ಕಾಶ್ಮೀರದಲ್ಲಿ  ಸಂಭವಿಸಿದ ಪ್ರವಾಹ­ದಿಂದ ಒಂದು ಸಾವಿರ ಕೋಟಿ ಮೌಲ್ಯದ ಸೇಬು ಬೆಳೆ ನಾಶವಾಗಿದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ದೇಶದಲ್ಲಿ ಸೇಬು ದುಬಾರಿಯಾಗುವ ಸಾಧ್ಯತೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಹೇಳಿದೆ.

ಪ್ರವಾಹದಿಂದಾಗಿ ಈಗಾಗಲೇ ಕಾಶ್ಮೀರದಿಂದ ಸೇಬು ಪೂರೈಕೆ ಸ್ಥಗಿತ­-ಗೊಂಡಿದ್ದು, ಬೆಲೆ ಏರಿಕೆ ಆಗುತ್ತಿದೆ. ನವರಾತ್ರಿ ಸಂದರ್ಭದಲ್ಲಿ ಶೇ40 ರಿಂದ ಶೇ 45ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು
ಅಸೋಚಾಂ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ರಾವತ್‌ಹೇಳಿದ್ದಾರೆ.

ದೇಶದ ಬೇರೆ ಯಾವುದೇ ಭಾಗ­ದಿಂದ ಪೂರೈಕೆ ಕೊರತೆ ನೀಗಿಸಲು ಆಗುವುದಿಲ್ಲ. ಸೇಬು ಆಮದು ಕೂಡಾ ಹೆಚ್ಚಲಿದೆ ಎಂದಿದ್ದಾರೆ.ದೆಹಲಿಯ ಸಗಟು ಮಾರುಕಟ್ಟೆ­ಯಲ್ಲಿ ಕಾಶ್ಮೀರದ ಸೇಬು ಪೂರೈಕೆ ಪ್ರಮಾಣ ದಲ್ಲಿ ಶೇ60ರಷ್ಟು ಕುಸಿತ ಕಂಡಿದೆ ಎಂದು ಅವರು ತಿಳಿಸಿದ್ದಾರೆ.

ಸೇಬು ಉತ್ಪಾದನೆ ಕಾಶ್ಮೀರದ ಪ್ರಮುಖ ಆರ್ಥಿಕ ಮೂಲವಾಗಿದೆ. ವರ್ಷದಲ್ಲಿ ಒಟ್ಟಾರೆ ₨1,20 ಕೋಟಿ ವಹಿವಾಟು ನಡೆಯುತ್ತದೆ. ರಾಜ್ಯದ ತೋಟಗಾರಿಕಾ ಬೆಳೆಗಳ ಉತ್ಪಾದನೆ­ಯಲ್ಲಿ ಶೇ 86ರಷ್ಟು ಪಾಲು ಅಂದರೆ, ಒಂದು ಸಾವಿರ ಕೋಟಿ ಮೌಲ್ಯದಷ್ಟು ಸೇಬು ಬೆಳೆಯೊಂದೇ ಹೊಂದಿದೆ. ಅಲ್ಲದೆ ಪ್ರತ್ಯಕ್ಷ  ಮತ್ತು ಪೋಕ್ಷವಾಗಿ ಒಟ್ಟಾರೆ 30 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT