ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್‌ ಟ್ರೋಫಿ ಫೈನಲ್‌: ಕೇಂದ್ರ ವಲಯದ ಮರು ಹೋರಾಟ

ಫಜಲ್‌, ಜಲಜ್‌ ಅರ್ಧಶತಕ, ಶ್ರೇಯಸ್‌ಗೆ ಎರಡು ವಿಕೆಟ್‌
Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಇನಿಂಗ್ಸ್‌ ಹಿನ್ನಡೆ ಅನುಭವಿಸಿದ್ದ ಕೇಂದ್ರ ವಲಯ ತಂಡ ಫೈಯಾಜ್‌ ಫಜಲ್‌ ಮತ್ತು ಜಲಜ್ ಸಕ್ಸೆನಾ ಅವರ ಅರ್ಧಶತಕದ ಬಲದಿಂದ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶುಕ್ರವಾರ ಮರು ಹೋರಾಟ ತೋರಿದೆ.

ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೂರನೇ ದಿನದ ಅಂತ್ಯಕ್ಕೆ ಕೇಂದ್ರ ವಲಯ ಎರಡನೇ ಇನಿಂಗ್ಸ್‌ನಲ್ಲಿ 62 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 214 ರನ್‌ ಕಲೆ ಹಾಕಿತ್ತು. ವಿನಯ್‌ ಕುಮಾರ್ ‌ಸಾರಥ್ಯದ ದಕ್ಷಿಣ ವಲಯ ಮೊದಲ ಇನಿಂಗ್ಸ್‌ನಲ್ಲಿ 90.3 ಓವರ್‌ಗಳಲ್ಲಿ 379 ರನ್‌ ಗಳಿಸಿತು.

ರಾಹುಲ್‌ ಗರಿಷ್ಠ ರನ್‌: ಕರ್ನಾಟಕದ ಕೆ.ಎಲ್‌. ರಾಹುಲ್‌ ಗುರುವಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಕಲೆ ಹಾಕಿದ ಸಾಧನೆ ಮಾಡಿದ್ದರು. 158 ರನ್‌ ಅವರ ಮೊದಲಿನ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿತ್ತು. ಆ ಸಾಧನೆಯನ್ನು ಬಲಗೈ ಬ್ಯಾಟ್ಸ್‌ಮನ್‌ ಇಲ್ಲಿ ಉತ್ತಮಪಡಿಸಿಕೊಂಡರು.

ಎರಡನೇ ದಿನದಾಟದಲ್ಲಿ 168 ರನ್‌ ಗಳಿಸಿದ್ದ ರಾಹುಲ್‌ ಶುಕ್ರವಾರ 17 ರನ್‌ ಸೇರಿಸಿ ಪಿಯೂಷ್ ಚಾವ್ಲಾ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಇದರಲ್ಲಿ 19 ಬೌಂಡರಿ  ಮತ್ತು ಎರಡು ಸಿಕ್ಸರ್‌ ಸೇರಿವೆ. 

ದಿಢೀರ್‌ ಕುಸಿತ
ಉತ್ತಮ ಆರಂಭ ಪಡೆದಿದ್ದ  ವಿನಯ್‌ ಪಡೆ ಮೂರನೇ ದಿನದಾಟದ ಮೊದಲ ಅವಧಿಯಲ್ಲಿ ದಿಢೀರ್‌ ಕುಸಿತ ಕಂಡಿತು. 71 ರನ್‌ ಗಳಿಸುವ ಅಂತರದಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿದ್ದೇ ಇದಕ್ಕೆ ಸಾಕ್ಷಿ.

ದಿನದಾಟದ 12ನೇ ಓವರ್‌ನಲ್ಲಿ ರಾಹುಲ್‌ ಔಟಾದ ನಂತರ ಪೆವಿಲಿಯನ್‌ ಪರೇಡ್‌ ಆರಂಭವಾಯಿತು. ನಂತರದ ಓವರ್‌ನಲ್ಲಿ ಹನುಮ ವಿಹಾರಿ (75, 97ಎಸೆತ, 10 ಬೌಂಡರಿ, 2 ಸಿಕ್ಸರ್‌) ವಿಕೆಟ್‌ ಒಪ್ಪಿಸಿದರು. ವಿನಯ್‌ (2), ಅಭಿಮನ್ಯು ಮಿಥುನ್ (0), ಪ್ರಗ್ಯಾನ್ ಓಜಾ (1) ಮತ್ತು ಎಚ್‌.ಎಸ್‌. ಶರತ್ ಬಂದಷ್ಟೇ ವೇಗವಾಗಿ ಔಟಾದರು.

ಬಿಗುವಿನ ದಾಳಿ
ಎರಡನೇ ದಿನ ವಿಕೆಟ್‌ ಪಡೆಯಲು ಪರದಾಡಿದ್ದ ಕೇಂದ್ರ ವಲಯ ಶುಕ್ರವಾರ ಬಿಗುವಿನ ದಾಳಿ ನಡೆಸಿತು. ಪಂಕಜ್‌ ಸಿಂಗ್‌ ಮೂರು ಮತ್ತು ಅಲಿ ಮುರ್ತುಜಾ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಅನುಭವಿ ಸ್ಪಿನ್ನರ್‌ ಪಿಯೂಷ್‌ ಚಾವ್ಲಾ (95ಕ್ಕೆ2) ಮತ್ತು ಜಲಜ್ (71ಕ್ಕೆ1) ಗಮನ ಸೆಳೆದರು.

ಶತಕದ ಜೊತೆಯಾಟ
ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕದ ಹೊಸ್ತಿಲಲ್ಲಿ ಎಡವಿದ್ದ ಫಜಲ್‌ ಎರಡನೇ ಇನಿಂಗ್ಸ್‌ನಲ್ಲಿ 139 ಎಸೆತಗಳಲ್ಲಿ 72 ರನ್‌ ಕಲೆ ಹಾಕಿದರು. ಜೊತೆಗೆ, ಹನ್ನೊಂದು ಬೌಂಡರಿ ಬಾರಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ ಜಲಜ್ (71) ಅರ್ಧಶತಕ ಗಳಿಸಿದರು.

ಫಜಲ್‌ ನಿಧಾನವಾಗಿ ರನ್‌ ಕಲೆ ಹಾಕಿದರೆ ಜಲಜ್‌ ಅಬ್ಬರಿಸಿದರು. ಬೌಂಡರಿ (15) ಮೂಲಕವೇ 60 ರನ್ ಬಾರಿಸಿದ್ದು ಅವರ ವೇಗದ ಆಟಕ್ಕೆ ಸಾಕ್ಷಿ. ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 37.5 ಓವರ್‌ಗಳಲ್ಲಿ 128 ರನ್‌ ಕಲೆ ಹಾಕಿ ಗಟ್ಟಿ ಬುನಾದಿ ನಿರ್ಮಿಸಿತು. ಆದರೆ, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ನಮನ್‌ ಓಜಾ (27) ಮತ್ತು ಅಶೋಕ್‌ ಮೆನಾರಿಯಾ (0) ಬೇಗನೆ ಔಟಾದರು. ಈ ಎರಡೂ ವಿಕೆಟ್‌ಗಳು ಕರ್ನಾಟಕದ ಯುವ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಪಾಲಾದವು.

ಕೇಂದ್ರ ವಲಯ ತಂಡ ಈಗ 111 ರನ್‌ಗಳ ಮುನ್ನಡೆ ಹೊಂದಿದೆ. ದಿನದ ಮೊದಲ ಅವಧಿಯ ಆಟದಲ್ಲಿ ಪಿಚ್‌ ಬೌಲರ್‌ಗಳಿಗೆ ನೆರವಾಗುತ್ತಿರುವ ಕಾರಣ ಕೇಂದ್ರ ವಲಯದ ಬ್ಯಾಟ್ಸ್‌ಮನ್‌ಗಳ ಮೇಲೆ ಮಹತ್ವದ ಜವಾಬ್ದಾರಿಯಿದೆ. ಆದರೆ, ಎದುರಾಳಿ ಆಟಗಾರರನ್ನು ಬೇಗನೆ ಕಟ್ಟಿಹಾಕಿ ಪ್ರಶಸ್ತಿ ತನ್ನಲ್ಲಿಯೇ ಉಳಿಸಿಕೊಳ್ಳುವ ಲೆಕ್ಕಾಚಾರ ವಿನಯ್ ಬಳಗದ್ದಾಗಿದೆ. ಹೋದ ಸಲದ ದುಲೀಫ್‌ ಟ್ರೋಫಿ ಟೂರ್ನಿಯಲ್ಲೂ ದಕ್ಷಿಣ ವಲಯ ತಂಡ ಉತ್ತರ ವಲಯದ ಜೊತೆ ಜಂಟಿಯಾಗಿ ಪ್ರಶಸ್ತಿ ಹಂಚಿಕೊಂಡಿತ್ತು. ಆಗಲೂ ವಿನಯ್‌ ತಂಡವನ್ನು ಮುನ್ನಡೆಸಿದ್ದರು.

ಸ್ಕೋರ್‌ ವಿವರ
ಕೇಂದ್ರ ವಲಯ ಮೊದಲ ಇನಿಂಗ್ಸ್‌ 100 ಓವರ್‌ಗಳಲ್ಲಿ 276
ದಕ್ಷಿಣ ವಲಯ ಪ್ರಥಮ ಇನಿಂಗ್ಸ್‌ 90.3 ಓವರ್‌ಗಳಲ್ಲಿ 379

(ಗುರುವಾರದ ಅಂತ್ಯಕ್ಕೆ 69 ಓವರ್‌ಗಳಲ್ಲಿ 4  ವಿಕೆಟ್‌ಗೆ 308)
ಕೆ.ಎಲ್‌. ರಾಹುಲ್ ಬಿ ಪಿಯೂಷ್ ಚಾವ್ಲಾ  185
ಹನುಮ ವಿಹಾರಿ ಬಿ ಅಲಿ ಮುರ್ತುಜಾ  75
ಆರ್‌. ವಿನಯ್‌ ಎಲ್‌ಬಿಡಬ್ಲ್ಯು ಬಿ ಅಲಿ ಮುರ್ತುಜಾ  02
ಶ್ರೇಯಸ್ ಗೋಪಾಲ್‌ ಔಟಾಗದೆ  13
ಮಿಥುನ್‌ ಎಲ್‌ಬಿಡಬ್ಲ್ಯು ಬಿ ಅಲಿ ಮುರ್ತುಜಾ  00
ಪ್ರಗ್ಯಾನ್‌ ಓಜಾ ಸಿ ಜಲಜ್ ಸಕ್ಸೆನಾ ಬಿ ಅಲಿ ಮುರ್ತುಜಾ  01
ಎಚ್‌.ಎಸ್‌. ಶರತ್ ಸಿ ಮತ್ತು ಬಿ ಪಿಯೂಷ್ ಚಾವ್ಲಾ  00
ಇತರೆ: (ಲೆಗ್‌ ಬೈ–2)  02
ವಿಕೆಟ್‌ ಪತನ: 5–359 (ರಾಹುಲ್‌; 80.6), 6–363 (ವಿಹಾರಿ; 81.5), 7–366 (ವಿನಯ್‌; 83.5), 8–370 (ಮಿಥುನ್‌; 85.3), 9–378 (ಓಜಾ; 89.5), 10–379 (ಶರತ್‌; 90.3)
ಬೌಲಿಂಗ್‌: ಪಂಕಜ್‌ ಸಿಂಗ್‌ 20–3–67–3, ಈಶ್ವರ್‌ ಪಾಂಡೆ 17–2–72–0, ಫೈಯಾಜ್‌ ಫಜಲ್‌ 3–0–13–0, ಅಲಿ ಮುರ್ತುಜಾ 13–1–59–4, ಪಿಯೂಷ್‌ ಚಾವ್ಲಾ 20.3–3–95–2, ಜಲಜ್‌ ಸಕ್ಸೆನಾ 17–0–71–1.
ಕೇಂದ್ರ ವಲಯ ಎರಡನೇ ಇನಿಂಗ್ಸ್‌ 62 ಓವರ್‌ಗಳಲ್ಲಿ 4 ವಿಕೆಟ್‌ಗೆ 214
ಫೈಯಾಜ್‌ ಫಜಲ್‌ ಸಿ ಬಾಬಾ ಅಪರಾಜಿತ್‌ ಬಿ ವಿನಯ್‌  72
ಜಲಜ್‌ ಸಕ್ಸೆನಾ ಎಲ್‌ಬಿಡಬ್ಲ್ಯು ಬಿ ಪ್ರಗ್ಯಾಜ್‌ ಓಜಾ  71
ರಾಬಿನ್ ಬಿಸ್ಟ್‌ ಬ್ಯಾಟಿಂಗ್‌  26
ಓಜಾ ಸಿ ರಾಬಿನ್‌ ಉತ್ತಪ್ಪ ಬಿ ಶ್ರೇಯಸ್ ಗೋಪಾಲ್‌  27
ಅಶೋಕ್ ಮೆನಾರಿಯಾ ಎಲ್‌ಬಿಡಬ್ಲ್ಯು ಬಿ ಶ್ರೇಯಸ್ ಗೋಪಾಲ್‌  00
ಮಹೇಶ್‌ ರಾವತ್‌ ಬ್ಯಾಟಿಂಗ್  11
ಇತರೆ: (ಬೈ–6, ಲೆಗ್‌ ಬೈ–1)  07
ವಿಕೆಟ್‌ ಪತನ: 1–128 (ಜಲಜ್‌; 37.5), 2–160 (ಫಜಲ್‌; 46.5), 3–195 (ಓಜಾ; 57.5), 4–201 (ಮೆನಾರಿಯಾ; 59.2).
ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 10–1–56–1, ಅಭಿಮನ್ಯು ಮಿಥುನ್‌ 8–1–25–0, ಪ್ರಗ್ಯಾಜ್‌ ಓಜಾ 22–7–52–1, ಶ್ರೇಯಸ್ ಗೋಪಾಲ್‌ 10–2–43–2, ಎಚ್‌.ಎಸ್‌. ಶರತ್ 9–3–22–0, ಬಾಬಾ ಅಪರಾಜಿತ್‌ 3–1–9–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT