ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್‌ ಟ್ರೋಫಿ ಫೈನಲ್‌: ದಕ್ಷಿಣ ವಲಯ ಮೇಲುಗೈ

ರಾಹುಲ್ ಶತಕ, ಮಿಂಚಿದ ಉತ್ತಪ್ಪ
Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಕೆ.ಎಲ್‌. ರಾಹುಲ್‌ ಶತಕ ಮತ್ತು ರಾಬಿನ್‌ ಉತ್ತಪ್ಪ ಅವರ ಉತ್ತಮ ಆಟದ ನೆರವಿನಿಂದ ದಕ್ಷಿಣ ವಲಯ ತಂಡ ದುಲೀಪ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿದೆ.

ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೇಂದ್ರ ವಲಯ ಮೊದಲ ಇನಿಂಗ್ಸ್‌ನಲ್ಲಿ 100 ಓವರ್‌ಗಳಲ್ಲಿ 276 ರನ್‌ ಕಲೆ ಹಾಕಿ ಆಲೌಟ್‌ ಆಯಿತು. ವಿನಯ್‌ ಕುಮಾರ್‌ ನೇತೃತ್ವದ ದಕ್ಷಿಣ ವಲಯಕ್ಕೆ ಭರ್ಜರಿ ಆರಂಭ ಲಭಿಸಿತು. ಇದರಿಂದ ವಿನಯ್‌ ಪಡೆ ಗುರುವಾರದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 69 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 308 ರನ್‌ ಕಲೆ ಹಾಕಿ 32 ರನ್‌ಗಳ ಮುನ್ನಡೆ ಪಡೆದಿದೆ.

ರಾಹುಲ್‌ ಅಬ್ಬರ: ಹೋದ ಸಲದ ದೇಶಿಯ ಋತುವಿನಲ್ಲಿ ಅಮೋಘ ಪ್ರದರ್ಶನ ತೋರಿರುವ ರಾಹುಲ್‌ ಫೈನಲ್‌­ನಲ್ಲಿ ತಮ್ಮ ಅಬ್ಬರ ಮುಂದುವ­ರಿಸಿದರು. 205 ಎಸೆತ­ಗಳನ್ನು ಎದುರಿಸಿದ ಬಲಗೈ ಬ್ಯಾಟ್ಸ್‌­ಮನ್‌ 18 ಬೌಂಡರಿ ಮತ್ತು ಎರಡು ಸಿಕ್ಸರ್‌ ಸೇರಿದಂತೆ 168 ರನ್‌ ಗಳಿಸಿದ್ದಾರೆ. ರಾಹುಲ್‌ ಆಟಕ್ಕೆ ತಕ್ಕ ಬೆಂಬಲ ನೀಡಿದ ಅನುಭವಿ ರಾಬಿನ್‌ ಉತ್ತಪ್ಪ (80, 97ಎಸೆತ, 13ಬೌಂಡರಿ, 2 ಸಿಕ್ಸರ್‌) ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆಯಲು ಕಸರತ್ತು ನಡೆಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 168 ರನ್‌ ಕಲೆ ಹಾಕಿತು.

ಉತ್ತಪ್ಪ ಔಟಾದ ನಂತರ ದಕ್ಷಿಣ ವಲಯ ಕುಸಿತ ಅನುಭವಿಸಿತು. ಎರಡು ರನ್‌ ಗಳಿಸುವ ಅಂತರದಲ್ಲಿ ಬಾಬಾ ಅಪರಾಜಿತ್‌ (21), ದಿನೇಶ್‌ ಕಾರ್ತಿಕ್‌ (0) ಮತ್ತು ಪ್ರಸನ್ನ (0) ಅವರನ್ನು ಕಳೆದುಕೊಂಡಿತು. ಕೊನೆಯಲ್ಲಿ ಹನುಮ ವಿಹಾರಿ (ಬ್ಯಾಟಿಂಗ್‌ 38) ರಾಹುಲ್‌ ಜೊತೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. 

​ರನ್‌: ಕೇಂದ್ರ ವಲಯ 100 ಓವರ್‌ಗಳಲ್ಲಿ 276(ಬುಧವಾರದ ಅಂತ್ಯಕ್ಕೆ 87 ಓವರ್‌ಗಳಲ್ಲಿ 7 ವಿಕೆಟ್‌ಗೆ 237)
ಅರಿಂದಮ್‌ ಘೋಷ್‌ ಸಿ ಅಪರಾಜಿತ್‌ ಬಿ ವಿನಯ್‌   32
ಅಲಿ ಮುರ್ತುಜಾ ಬಿ ಅಭಿಮನ್ಯು ಮಿಥುನ್‌  16
ಈಶ್ವರ್‌ ಪಾಂಡೆ ಎಲ್‌ಬಿಡಬ್ಲ್ಯು ಬಿ ಪ್ರಗ್ಯಾನ್‌ ಓಜಾ  15
ಪಂಕಜ್‌ ಸಿಂಗ್‌ ಔಟಾಗದೆ  08
ಇತರೆ: (ನೋ ಬಾಲ್‌–4)  04
ವಿಕೆಟ್‌ ಪತನ: 8–237 (ಘೋಷ್‌; 89.5), 9–262 (ಪಾಂಡೆ; 96.2), 10–276 (ಮುರ್ತುಜಾ; 99.6)
ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 25–9–54–2, ಅಭಿಮನ್ಯು ಮಿಥುನ್‌ 17–9–35–1, ಎಚ್‌.ಎಸ್‌. ಶರತ್‌ 17–6–56–1, ಪ್ರಗ್ಯಾನ್‌ ಓಜಾ 19–4–49–2, ಶ್ರೇಯಸ್ ಗೋಪಾಲ್‌ 14–2–53–1, ರಾಬಿನ್‌ ಉತ್ತಪ್ಪ 1–0–1–0, ಬಾಬಾ ಅಪರಾಜಿತ್‌ 6–0–26–2, ಹನುಮ ವಿಹಾರಿ 1–0–2–1.

ದಕ್ಷಿಣ ವಲಯ 69 ಓವರ್‌ಗಳಲ್ಲಿ 4  ವಿಕೆಟ್‌ಗೆ  308
ರಾಬಿನ್ ಉತ್ತಪ್ಪ ಎಲ್‌ಬಿಡಬ್ಲ್ಯು ಬಿ ಜಲಜ್‌ ಸಕ್ಸೆನಾ  80
ಕೆ.ಎಲ್‌. ರಾಹುಲ್ ಬ್ಯಾಟಿಂಗ್‌  168
ಬಾಬಾ ಅಪರಾಜಿತ್‌ ಸಿ ನಮನ್ ಓಜಾ ಬಿ ಪಂಕಜ್‌ ಸಿಂಗ್  21
ದಿನೇಶ್‌ ಕಾರ್ತಿಕ್‌ ಎಲ್‌ಬಿಡಬ್ಲ್ಯು ಬಿ ಪಂಕಜ್‌ ಸಿಂಗ್‌  00
ರಾಮಸ್ವಾಮಿ ಪ್ರಸನ್ನ ಸಿ ನಮನ್‌ ಓಜಾ ಬಿ ಪಂಕಜ್‌ ಸಿಂಗ್  00
ಹನುಮ ವಿಹಾರಿ ಬ್ಯಾಟಿಂಗ್‌  38
ಇತರೆ: (ಲೆಗ್‌ ಬೈ–1)  01
ವಿಕೆಟ್‌ ಪತನ: 1–168 (ಉತ್ತಪ್ಪ; 34.2), 2–231 (ಅಪರಾಜಿತ್‌; 51.4), 3–231 (ಕಾರ್ತಿಕ್‌; 51.6), 4–233 (ಪ್ರಸನ್ನ; 53.5).
ಬೌಲಿಂಗ್‌: ಪಂಕಜ್‌ ಸಿಂಗ್‌ 17–3–55–3, ಈಶ್ವರ್‌ ಪಾಂಡೆ 15–2–69–0, ಫೈಯಾಜ್‌ ಫಜಲ್‌ 3–0–13–0, ಅಲಿ ಮುರ್ತುಜಾ 8–0–46–0, ಪಿಯೂಷ್‌ ಚಾವ್ಲಾ 12–1–75–0, ಜಲಜ್‌ ಸಕ್ಸೆನಾ 14–0–49–1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT