ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು ನೀಡಿದವರಿಗೆ ಬಹುಮಾನ!

ಮಾಲಿನ್ಯ ನಿಯಂತ್ರಣಕ್ಕೆ ಬಿಎಂಟಿಸಿ ಉಪಾಯ
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಂಚಾರ ಪೊಲೀಸರ ಸಹಕಾರದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಮೂಲಕ ಶಬ್ದ ಮತ್ತು ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಸಂಸ್ಥೆಯ ನೌಕರರಿಗೆ ಘಟಕ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆರಂಭಿಸಿದೆ.

ಸಂಸ್ಥೆಯ ಬಸ್ಸುಗಳಲ್ಲಿ ಆಗುತ್ತಿರುವ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯದ ಬಗ್ಗೆ ಸಾರ್ವಜನಿಕರು ದೂರು ಅಥವಾ ಸಲಹೆ ನೀಡಲು ಇಷ್ಟ ಪಟ್ಟರೆ ಸಂಸ್ಥೆಯ ವೆಬ್‌ಸೈಟ್ www.mybmtc.com ನಲ್ಲಿ ನೀಡ­ಬಹುದು. ದೂರುಗಳನ್ನು ಸಹಾಯಕ ಸಂಚಾರ ವ್ಯವಸ್ಥಾಪಕರು (ದೂರು) ಶ್ಯಾಮಲಾ ಎಸ್‌.ಎಂ.  (ದೂರವಾಣಿ ಸಂಖ್ಯೆ–7760991257)  ಅವರಿಗೂ ದೂರವಾಣಿ ಮುಖಾಂತರ  ನೀಡಬಹುದು.

ಯಾವುದೇ ನಾಗರಿಕರು ಸಂಸ್ಥೆಯ ವಾಹನದಿಂದ ಹೆಚ್ಚಾಗಿ ಹೊಗೆ ಸೂಸುತ್ತಿರುವ ಬಗ್ಗೆ ಮಾಹಿತಿ/ದೂರು ನೀಡಿದ್ದಲ್ಲಿ ಅಂತಹ ವಾಹನಗಳನ್ನು ತಕ್ಷಣವೇ ಪರಿಶೀಲಿಸಲಾಗುವುದು. ಆ ವಾಹನಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಹೊಗೆ ಸೂಸುವುದು ತಪಾ­ಸಣೆ ಯಂತ್ರದಲ್ಲಿ ಕಂಡು ಬಂದಲ್ಲಿ ಅಂತಹವರಿಗೆ ₨1,000 ನಗದು ಬಹುಮಾನವನ್ನು ದೃಢೀಕರಿಸಿ ನೀಡ­ಲಾಗುವುದು. ಜೊತೆಗೆ ನ್ಯೂನತೆಯ ಬಸ್ಸುಗಳನ್ನು ಆಚರಣೆಗೆ ನಿಯೋಜಿಸು­ವುದಿಲ್ಲ. ಸಂಸ್ಥೆಯ ಕಾಲ್‌ ಸೆಂಟರ್‌ಗೆ ಕರೆ ಮಾಡಿ ಸಹ ದೂರು ಸಲ್ಲಿಸ­ಬಹುದು. ಕಾಲ್‌ ಸೆಂಟರ್‌ ಸಂಖ್ಯೆ: 1800–425–1663 ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT