ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಳು ಹಿಡಿದ ಕಂಪ್ಯೂಟರ್‌

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾ­ರ್ಥಿ­­ಗಳಿಗೆ ಕಂಪ್ಯೂಟರ್‌ ಸಾಕ್ಷರತೆ ನೀಡಲು ಸರ್ಕಾರವು ಕಂಪ್ಯೂಟರ್‌ಗಳನ್ನು ಒದಗಿಸಿದೆ. ಈ ಕಂಪ್ಯೂಟರ್‌ಗಳಿಂದ ವಿದ್ಯಾರ್ಥಿಗಳಿಗೆ  ಶಿಕ್ಷಣ ಕೊಡಿಸಲು  ಶಿಕ್ಷಕರನ್ನು  ನೇಮಿ­ಸಲು ಸರ್ಕಾರ, ಒಂದು ತರಬೇತಿ  ಸಂಸ್ಥೆಗೆ ಹೊರಗುತ್ತಿಗೆ ನೀಡಿತ್ತು.

ಈ ಸಂಸ್ಥೆಯು ಯೋಜನೆ ಆರಂಭ ವಾದ 2009 ರಿಂದ 2013 ರ­ವರೆಗೆ ಶಿಕ್ಷಕರ ಸೇವೆಯನ್ನು ಒದ­ಗಿಸಿದ್ದು, 2013 ರಿಂದ ಈ ಯೋಜ­ನೆಯು ನಿಂತುಹೋಗಿದ್ದು, ಇಲ್ಲಿ ಕೆಲಸ ಮಾಡುತ್ತಿದ್ದ 2279 ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಕೊನೆಯ ಮೂರು ತಿಂಗಳ ಸಂಬಳವನ್ನು ನೀಡದೆ ಏಜೆನ್ಸಿಯು ಶಿಕ್ಷಕರಿಗೆ ತೊಂದರೆ ನೀಡುತ್ತಿದೆ.

ಐಸಿಟಿ ಎರಡನೇ ಹಂತದಲ್ಲಿ ನಡೆ­ಯು­ತ್ತಿದ್ದ ಈ ಯೋಜನೆಯಲ್ಲಿ 1571 ಪ್ರೌಢ­ಶಾಲೆಗಳು ಸೇರಿದಂತೆ ಪದವಿ­ಪೂರ್ವ ಕಾಲೇಜುಗಳು 708 ಸೇರಿವೆ. ಈ ಶಾಲಾ–ಕಾಲೇಜುಗಳಲ್ಲಿ ಕಂಪ್ಯೂಟರ್‌ ಶಿಕ್ಷಣ ನೀಡಲು ಅಳವಡಿಸಿದ್ದ ಕಂಪ್ಯೂಟರ್‌ಗಳು ಶಿಕ್ಷಕರಿಲ್ಲದೆ ದೂಳು ಹಿಡಿಯುತ್ತಿವೆ.

ಕಂಪ್ಯೂಟರ್‌ ಸಾಕ್ಷರತೆಯನ್ನು ಗ್ರಾಮೀಣ ಮಕ್ಕಳಲ್ಲೂ ಮೂಡಿಸುವ ಸದುದ್ದೇಶದಿಂದ ಆರಂಭವಾದ ಈ ಮಹತ್ವಾಕಾಂಕ್ಷೆ ಯೋಜನೆಯು ನಿರ್ವ­ಹಣೆ ಇಲ್ಲದೆ ಇತ್ತ ವಿದ್ಯಾರ್ಥಿ­ಗಳಿಗೆ ಕಂಪ್ಯೂಟರ್‌ ಜ್ಞಾನವು ಇಲ್ಲ, ಅತ್ತ ಕೋಟ್ಯಂತರ ರೂಪಾಯಿ ಮೌಲ್ಯದ  ಕಂಪ್ಯೂಟರ್‌ಗಳು ದೂಳು ಹಿಡಿ­ಯುತ್ತಿರುವುದರ ಜೊತೆಗೆ ಶಿಕ್ಷಕರು ಕೆಲಸ ಕಳೆದುಕೊಂಡಿ­ರುವುದು ಶೋಚ­­ನೀಯ. ಸರ್ಕಾರ ಇತ್ತ ಗಮನಹರಿಸಲಿ.

–ಲಕ್ಷ್ಮೀಕಾಂತರಾಜು ಎಂ.ಜಿ. ಮಠ, ಗುಬ್ಬಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT