ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ:ಚುನಾವಣೆಗೆ ಎಎಪಿ ಸಿದ್ಧ

ಪದತ್ಯಾಗಕ್ಕೆ ಕೇಜ್ರಿವಾಲ್‌ ಕ್ಷಮೆಯಾಚನೆ
Last Updated 21 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಧಿಕಾರ ವಹಿಸಿಕೊಂಡ 49 ದಿನ­ಗಳಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀ­ನಾಮೆ ಸಲ್ಲಿಸಿದ ತಪ್ಪಿಗಾಗಿ ದೆಹಲಿ ಜನ­ತೆ ಕ್ಷಮೆ­ ಯಾಚಿಸುವುದಾಗಿ ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ ಕೇಜ್ರಿವಾಲ್‌ ಬುಧವಾರ ಹೇಳಿದ್ದಾರೆ.

‘ಸಾರ್ವಜನಿಕರ ಅಭಿಪ್ರಾಯ ಪಡೆ­ಯದೆ ರಾಜೀನಾಮೆ ಸಲ್ಲಿ­ಸಿದ ನಿರ್ಧಾರ ದೊಡ್ಡ ತಪ್ಪು’ ಎಂದ ಅವರು, ‘ಎಎಪಿ ಹೊಸ­ದಾಗಿ ಚುನಾವಣೆ ಹೋಗಲು ಬಯಸಿದೆ’ ಎಂದೂ ತಿಳಿಸಿದರು. ಅಧಿ­ಕಾರಕ್ಕೆ ಮರಳುವ ಅವಕಾಶ ಈಗ ‘ನಗಣ್ಯ’­ವಾಗಿದೆ ಎಂದರು.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಕಿರಣ್‌ ಬೇಡಿ ಒಲವು: ದೆಹಲಿ ವಿಧಾನ­ಸಭೆಗೆ ಹೊಸದಾಗಿ ಚುನಾವಣೆ ನಡೆ­ದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ­ಯಾಗು­ವಂತೆ ಆಹ್ವಾನ ಬಂದರೆ, ಸ್ವೀಕರಿ­ಸುವುದಾಗಿ ಮಾಜಿ ಐಪಿಎಸ್‌ ಅಧಿಕಾರಿ,ಅಣ್ಣಾ ತಂಡದ ಸದಸ್ಯೆ ಕಿರಣ್‌ ಬೇಡಿ ಬುಧವಾರ ಇಲ್ಲಿ ಹೇಳಿದರು.

ಕಳೆದ ವಿಧಾನಸಭೆ ಚುನಾವಣೆ­ಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾ­ಗಿದ್ದ ಹರ್ಷವರ್ಧನ್‌ ಈಗ ಲೋಕಸಭೆಗೆ ಆಯ್ಕೆ ಆಗಿರುವುದರಿಂದ, ಮುಂಬರುವ ವಿಧಾನಸಭಾ ಚುನಾವಣೆಗೆ ಕಿರಣ್‌ ಬೇಡಿ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ­ಯನ್ನಾಗಿ ಮಾಡಲಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅವರು ಟಿವಿ ಚಾನೆಲ್‌ವೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT