ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಬಿಜೆಪಿ ಸರ್ಕಾರ ನಿರೀಕ್ಷೆ

ರಾಷ್ಟ್ರಪತಿಗೆ ಲೆಫ್ಟಿನೆಂಟ್‌ ಗವರ್ನರ್‌ ಶಿಫಾರಸು
Last Updated 5 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ, ಐಎಎನ್ಎಸ್‌): ದೆಹಲಿ ವಿಧಾನ­ಸಭೆ­ಯಲ್ಲಿ ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನಿಸುವ ಬಗ್ಗೆ ಅನುಮತಿ ಕೋರಿ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಅವರು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಶಿಫಾ­ರಸು ಪತ್ರ ಸಲ್ಲಿಸಿದ್ದಾರೆ.

ಇದರಿಂದಾಗಿ ರಾಜ್ಯ ವಿಧಾನಸಭೆ­ಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲ­ದಿ­ದ್ದರೂ, ಅತಿ­ದೊಡ್ಡ ಪಕ್ಷವಾದ ಬಿಜೆಪಿ­ಯನ್ನು ಸರ್ಕಾರ ರಚಿಸಲು ಆಹ್ವಾನಿ­ಸುವ ನಿರೀಕ್ಷೆಗಳಿವೆ  ಎಂದು ಬಲ್ಲ ಮೂಲ­ಗಳು ಶುಕ್ರವಾರ ಇಲ್ಲಿ ತಿಳಿಸಿವೆ.

ರಾಷ್ಟ್ರಪತಿ ಆಡಳಿತ: 49 ದಿನಗಳ ಕಾಲ ಮುಖ್ಯ­ಮಂತ್ರಿ­­ಯಾ­ಗಿದ್ದ ಅರವಿಂದ ಕೇಜ್ರಿವಾಲ್‌ ಅವರ ರಾಜೀ­ನಾಮೆ ನಂತರ ಆಮ್‌ ಆದ್ಮಿ ಪಕ್ಷ (ಎಎಪಿ)ದ ಸರ್ಕಾರ ಪತನ­ವಾಗಿದ್ದು,  ಆ­ಮೇಲೆ ರಾಜ್ಯದಲ್ಲಿ ಫೆ. 17­ರಿಂದ ರಾಷ್ಟ್ರ­ಪತಿ ಆಡಳಿತ ಜಾರಿಯಲ್ಲಿದೆ.

ಒಟ್ಟು 70 ಸದಸ್ಯ ಬಲದ ವಿಧಾನ­ಸಭೆ­­ಯಲ್ಲಿ ಬಿಜೆಪಿಯ ಮೂವರು ಸದ­ಸ್ಯರು ಲೋಕ­ಸಭೆಗೆ ಆಯ್ಕೆ ಆಗಿರುವುದ­ರಿಂದ ಹಾಲಿ 67 ಶಾಸಕರು ಮಾತ್ರ ಇದ್ದಾರೆ. ಹೀಗಾಗಿ ಈ ಪಕ್ಷ 31 ಸ್ಥಾನ­ಗಳನ್ನು ಗೆದ್ದರೂ, ಈಗ 28 ಶಾಸಕರನ್ನು ಮಾತ್ರ ಹೊಂದಿರುವುದರಿಂದ ಸರ್ಕಾರ ರಚಿಸಲು ಪಕ್ಷಕ್ಕೆ 34 ಶಾಸಕರ ಅವಶ್ಯಕತೆ ಇದೆ.

28 ಸ್ಥಾನ­ಗಳನ್ನು ಗೆದ್ದಿದ್ದ ಎಎಪಿ­ಯಲ್ಲಿ ಒಬ್ಬ ಸದಸ್ಯ ಬಂಡಾಯ ಆಗಿ­ರು­­ವು­ದರಿಂದ ಇದರ ಬಲ 27 ಆಗಿದೆ. ಉಳಿ­ದಂತೆ ಕಾಂಗ್ರೆಸ್‌ 8, ಅಕಾಲಿದಳ ಒಬ್ಬ ಹಾಗೂ ಜೆಡಿಯು ಒಬ್ಬ ಶಾಸಕ­ರನ್ನು ಹೊಂದಿವೆ.

ರಾಜನಾಥ್‌ ಸಭೆ: ಈ ಮಧ್ಯೆ, ಕೇಂದ್ರ ಗೃಹ ಸಚಿವ ರಾಜ­ನಾಥ್‌ ಸಿಂಗ್‌ ಅವರು ಬಿಜೆಪಿ ದೆಹಲಿ ವ್ಯವಹಾರಗಳ ಉಸ್ತುವಾರಿ ಹೊತ್ತಿರುವ ಇನ್ನೊಬ್ಬ ಕೇಂದ್ರ ಸಚಿವ ನಿತಿನ್‌ ಗಡ್ಕರಿ , ಪಕ್ಷದ ಉಪಾಧ್ಯಕ್ಷ ಪ್ರಭಾತ್‌ ಝಾ ಹಾಗೂ ಪಕ್ಷದ ದೆಹಲಿ ಘಟಕ ಅಧ್ಯಕ್ಷ ಸತೀಶ್‌ ಉಪಾಧ್ಯಾಯ ಅವರೊಂದಿಗೆ ಸಭೆ ನಡೆಸಿ, ಪ್ರಸ್ತುತ ಬೆಳವ­ಣಿಗೆಗಳ ಬಗ್ಗೆ ಚರ್ಚಿಸಿದರು.

ಸುದ್ದಿಗಾರರ ಜೊತೆ ಮಾತ­ನಾಡಿದ ‘ರಾಜ­ನಾಥ್‌, ಪಕ್ಷವು ಸೂಕ್ತ ನಿರ್ಧಾರ ತೆಗೆದುಕೊಳ್ಳು­ವುದು. ಆದರೆ ಶಾಸಕರ ಖರೀದಿಯಲ್ಲಿ ಭಾಗಿ­ಯಾಗುವು­ದಿಲ್ಲ’ ಎಂದು ಹೇಳಿದರು.

ಉಪಾಧ್ಯಾಯ ಪ್ರತಿಕ್ರಿಯಿಸಿ, ಸರ್ಕಾರ ರಚಿಸಲು ಪಕ್ಷ­ವನ್ನು ಆಹ್ವಾನಿಸಿ­ದರೆ, ಬಿಜೆಪಿ ಅದನ್ನು ಪರಿ­ಶೀಲಿಸುವುದು ಎಂದರು.

ಎಎಪಿ, ಕಾಂಗ್ರೆಸ್‌ ಟೀಕೆ: ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸುವ ಲೆಫ್ಟಿನೆಂಟ್‌ ಗವರ್ನರ್‌ ಅವರ ನಿರ್ಧಾರವನ್ನು ಎಎಪಿ ಮತ್ತು ಕಾಂಗ್ರೆಸ್‌ ಖಂಡಿಸಿವೆ.

ಜಂಗ್‌ ಅವರು ಬಿಜೆಪಿಗೆ ಶಾಸಕರನ್ನು ಖರೀದಿ­ಸಲು ಅನುವು ಮಾಡಿಕೊಟ್ಟಿ­ದ್ದಾರೆ ಎಂದು ಎಎಪಿ ಮುಖಂಡ­ರಾದ ಅಶು­ತೋಷ್‌ ಮತ್ತು ಸೋಮ­ನಾಥ್‌ ಭಾರ್ತಿ ಟೀಕಿಸಿದ್ದಾರೆ. ರಾಜ್ಯದಲ್ಲಿ ಹೊಸ­ದಾಗಿ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಶೂನ್ಯ ಸಾಧನೆ ಮಾಡಿರುವುದರಿಂದ ದೆಹಲಿಯಲ್ಲಿ ಹೊಸ­ದಾಗಿ ಚುನಾವಣೆ ಎದುರಿಸದೆ, ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಮುಂದಾಗಿದೆ ಎಂದು ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT