ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಸರ್ಕಾರ: ನಿಲುವಿಗೆ ಶೀಲಾ ಬದ್ಧ

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಯತ್ನಿಸುತ್ತಿರುವುದು ಸರಿ ಎಂಬ ತಮ್ಮ ಹೇಳಿಕೆಗೆ ಪಕ್ಷದೊಳ­ಗೆ  ವ್ಯಕ್ತವಾಗಿರುವ ಟೀಕೆಗೆ ಎದೆಗುಂದದ ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್‌ ‘ನಾನು ಬಿಜೆಪಿಯನ್ನು ಬೆಂಬಲಿಸುತ್ತಿಲ್ಲ. ವಾಸ್ತವ ಮತ್ತು ಸಾಂವಿಧಾನಿಕ ಅವಕಾಶ­ಗಳನ್ನು ವಿವರಿಸಿದ್ದೇನೆ ಅಷ್ಟೇ ಎಂದಿದ್ದಾರೆ.

ಬಿಜೆಪಿ ಬಳಿ ಸರ್ಕಾರ ರಚಿಸು­ವಷ್ಟು ಸಂಖ್ಯಾ ಬಲ ಇದೆ ಎನ್ನು­ವುದು ಲೆಫ್ಟಿ­ನೆಂಟ್‌ ಗವರ್ನರ್‌ಗೆ ಅನಿಸಿದರೆ ಸರ್ಕಾರ ರಚನೆಗೆ ಆ ಪಕ್ಷವನ್ನು ಆಹ್ವಾನಿಸು­ವುದರಲ್ಲಿ ತಪ್ಪೇನಿಲ್ಲ ಎಂದು  ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ‘ಸರ್ಕಾರ ರಚನೆಗೆ ಬಿಜೆಪಿಯನ್ನು ಆಹ್ವಾನಿಸಿದರೆ ಅವರು ಬಹುಮತ ಸಾಬೀತು­­ಪಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT