ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಣಿಗೆದಾರರ ಮಾಹಿತಿ ನೀಡದ ಪಕ್ಷಗಳು

₨ 11.14 ಕೋಟಿ ನೀಡಿದ 703 ದಾನಿಗಳ ವಿವರಗಳೇ ಇಲ್ಲ
Last Updated 25 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌):  ರಾಜ­ಕೀಯ ಪಕ್ಷಗಳು ₨ 20 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ನೀಡಿದವರ ವಿವರಗಳನ್ನು ಸಲ್ಲಿಸುವುದು ಕಡ್ಡಾಯ. ಆದರೆ 2012–13ನೇ ವರ್ಷದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ₨11.14 ಕೋಟಿ ದೇಣಿಗೆ ನೀಡಿದ 703 ಜನರ ವಿವರಗಳನ್ನು ಸಲ್ಲಿಸ­ಲಾ­ಗಿಲ್ಲ ಎಂದು ಪ್ರಜಾಸತ್ತಾತ್ಮಕ ಸುಧಾರ-­ಣೆ­­ಗಳ ಸಂಸ್ಥೆ (ಎಡಿಆರ್‌) ವರದಿ ಹೇಳಿದೆ.

‘₨ 29 ಲಕ್ಷ ದೇಣಿಗೆ ನೀಡಿರುವ 43 ದಾನಿಗಳ ಹೆಸರು ಮತ್ತು ವಿಳಾಸ­ಗಳನ್ನು ರಾಜಕೀಯ ಪಕ್ಷಗಳು ತಮ್ಮ ಲೆಕ್ಕಪತ್ರದಲ್ಲಿ ಪ್ರಕಟಿಸಿಯೇ ಇಲ್ಲ’ ಎಂದು  ಎಡಿಆರ್‌ ಹೇಳಿದೆ. ₨ 11.14 ಕೋಟಿ ದೇಣಿಗೆ ನೀಡಿರು­ವ­ವರನ್ನು ಪಕ್ಷಗಳು ನೀಡಿದ ಹೆಸರು ಮತ್ತು ವಿಳಾಸ­ದಲ್ಲಿ ಗುರುತಿಸುವುದು ಸಾಧ್ಯ­ವಾ­ಗಿಲ್ಲ ಎಂದೂ ಎಡಿಆರ್‌ ತಿಳಿಸಿದೆ.

ಹಾಗೆಯೇ ₨ 10.84 ಕೋಟಿ ದೇಣಿಗೆ ನೀಡಿರುವ 655 ವ್ಯಕ್ತಿಗಳ ವಿಳಾಸ­ಗಳನ್ನೂ ಬಿಜೆಪಿ, ಕಾಂಗ್ರೆಸ್‌, ಸಿಪಿಐ, ಸಿಪಿಎಂ, ಬಿಎಸ್‌ಪಿ ಮತ್ತು ಎನ್‌ಸಿಪಿ­ಗಳು ಪ್ರಕಟಿಸಿಲ್ಲ ಎಂದು ಎಡಿಆರ್‌ ವರದಿ ತಿಳಿಸಿದೆ.

₨ 20 ಸಾವಿರಕ್ಕಿಂತ ಹೆಚ್ಚಿನ ದೇಣಿಗೆ ನೀಡಿದ ವ್ಯಕ್ತಿಗಳ ಹೆಸರು, ವಿಳಾಸ, ಪ್ಯಾನ್‌ ಸಂಖ್ಯೆ ಮತ್ತು ದೇಣಿಗೆ ಪಾವತಿ­ಯಾದ ವಿಧಾನಗಳ ವಿವರಗಳನ್ನು ನೀಡು­­ವುದನ್ನು ಚುನಾವಣಾ ಆಯೋಗ ಕಡ್ಡಾಯಗೊಳಿಸಿದೆ. ವರ್ಷ­ಕ್ಕೊಂದು ಬಾರಿ ಈ ವಿವರಗಳನ್ನು ಸಲ್ಲಿಸಬೇಕಾಗಿದೆ.
ಆದರೆ ಆಯೋಗದ ಈ ನಿಯಮದ ಬಗ್ಗೆ ರಾಷ್ಟ್ರೀಯ ರಾಜಕೀಯ ಪಕ್ಷಗಳು ಕುರುಡಾಗಿವೆ ಎಂದು ಎಡಿಆರ್‌ ಹೇಳಿದೆ. ಈ ಪಕ್ಷಗಳು 3,777 ದಾನಿ­ಗಳಿಂದ ₨ 99.14 ಕೋಟಿ ದೇಣಿಗೆ ಪಡೆದಿವೆ. ಆದರೆ ನಿಯಮ ಪಾಲಿಸಿಲ್ಲ ಎಂದು ಹೇಳಿದೆ.

ಒಟ್ಟು 3,775 ದಾನಿಗಳಲ್ಲಿ ₨37.-­64 ಕೋಟಿ ದೇಣಿಗೆ ನೀಡಿರುವ 2,371 ದಾನಿಗಳ ಪ್ಯಾನ್  ಸಂಖ್ಯೆಗ­ಳನ್ನು ರಾಜಕೀಯ ಪಕ್ಷಗಳು ಸಲ್ಲಿಸಿಲ್ಲ. ಈ ಪಟ್ಟಿಯಲ್ಲಿ ಬಿಜೆಪಿ ಪ್ರಥಮ ಸ್ಥಾನ­ದಲ್ಲಿದ್ದು, ₨ 25.99 ಕೋಟಿ ದೇಣಿಗೆ ನೀಡಿರುವ 1,670 ದಾನಿಗಳ ಪ್ಯಾನ್‌ ಮಾಹಿತಿಯನ್ನು ಬಿಜೆಪಿ ನೀಡಿಲ್ಲ.

ರಾಷ್ಟ್ರೀಯ ರಾಜಕೀಯ ಪಕ್ಷಗಳ 2012–13ನೇ ಹಣಕಾಸು ವರ್ಷದ ವರಮಾನ ತೆರಿಗೆ ಮಾಹಿತಿ ಮತ್ತು ದೇಣಿಗೆ ವರದಿಗಳ ಆಧಾರದಲ್ಲಿ ಎಡಿಆರ್‌ ಈ ವರದಿಯನ್ನು ಸಿದ್ಧಪ­ಡಿಸಿದೆ. ಅದರ ಪ್ರಕಾರ, ಕಾಂಗ್ರೆಸ್‌ ಅತಿ ಹೆಚ್ಚು ವರಮಾನವನ್ನು ಗಳಿಸಿದ್ದು ₨ 425.69 ಕೋಟಿ ಹಣ ಪಡೆದಿದೆ.

₨ 324.16 ಕೋಟಿ ದೇಣಿಗೆ ಪಡೆದಿರುವ ಬಿಜೆಪಿ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT