ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಯಾನಿ ಅಧಿಕಾರ ಮೊಟಕು

Last Updated 20 ಡಿಸೆಂಬರ್ 2014, 15:15 IST
ಅಕ್ಷರ ಗಾತ್ರ

ನವದೆಹಲಿ (ಏಜೆನ್ಸೀಸ್‌): ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರು ತಮ್ಮ ಮೇಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕಾರಣಕ್ಕೆ ವಿದೇಶಾಂಗ ವ್ಯವಹಾರಗಳ ಇಲಾಖೆಯು ಅವರ ಅಧಿಕಾರವನ್ನು ಮೊಟಕುಗೊಳಿಸಿದೆ.

ಇಲಾಖೆಯ ಪಾಲುದಾರಿಕೆ ಅಭಿವೃದ್ಧಿ ವಿಭಾಗದ ನಿರ್ದೇಶಕರ ಹುದ್ದೆಯಿಂದ ಅವರನ್ನು ತೆಗೆಯಲಾಗಿದೆ. ಸದ್ಯಕ್ಕೆ ಅವರಿಗೆ ಬೇರಾವುದೇ ಜವಾಬ್ದಾರಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಮೂಲಗಳು ತಿಳಿಸಿವೆ.

ತಮ್ಮ ಮಕ್ಕಳು ಅಮೆರಿಕದ ಪಾಸ್‌ಪೋರ್ಟ್‌ ಪಡೆದಿರುವುದನ್ನು ಬಹಿರಂಗಪಡಿಸದ ದೇವಯಾನಿ ಅವರ ನಿಲುವಿನ ಬಗ್ಗೆ ಇಲಾಖೆ ಕೋಪಗೊಂಡಿದೆ. ಅವರ ಮೇಲಿರುವ ಆರೋಪಗಳಿಂದ ಮುಕ್ತರಾಗುವವರೆಗೆ ಅವರಿಗೆ ಪಾಲುದಾರಿಕೆ ಅಭಿವೃದ್ಧಿ ವಿಭಾಗದ ನಿರ್ದೇಶಕರ ಹುದ್ದೆ ನೀಡುವುದು ಅನುಮಾನ ಎಂದು ತನಿಖಾತಂಡ ಹೇಳಿದೆ.

ದೇವಯಾನಿ ಖೋಬ್ರಾಗಡೆ ಅವರು 1999ರ ಸಾಲಿನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದು, ಅಮೆರಿಕದಲ್ಲಿ ರಾಜತಾಂತ್ರಿಕ ಸೇವೆಯಲ್ಲಿದ್ದ ಅವರನ್ನು ಕಳೆದ ವರ್ಷ ಬಂಧಿಸಿದ್ದ ವಾಷಿಂಗ್ಟನ್‌ನ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದರೆಂಬ ಕಾರಣಕ್ಕೆ ಭಾರೀ ವಿವಾದ ಉಂಟಾಗಿತ್ತು. ಆ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಭಾರತ ಸರ್ಕಾರ ಖೋಬ್ರಾಗಡೆ ಅವರನ್ನು ಭಾರತಕ್ಕೆ ಕರೆಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT