ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ರೂಪವೇನು?

Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ಸ್ವರೂಪಾನಂದರು ಶಿರಡಿ ಸಾಯಿಬಾಬಾ ದೇವರಲ್ಲ ಎನ್ನುತ್ತಾರೆ. ಪೇಜಾವರರು ಮಂತ್ರಾಲಯದ ರಾಘ­ವೇಂದ್ರ ಸ್ವಾಮಿಗಳು ದೇವರಲ್ಲ ಎನ್ನುತ್ತಾರೆ. ಇವರು ಅವರಲ್ಲ ಎನ್ನಬೇಕಾದರೆ, ಅವರ ಮುಖಪರಿಚಯ ಹಾಗೆ ಹೇಳಿದವರಿಗೆ ಇರಬೇಕು. ಸ್ವರೂಪಾನಂದರಿ­ಗಾ­ಗಲಿ, ಪೇಜಾವರರಿಗಾಗಲಿ ದೇವರ ಪರಿಚಯವಿದ್ದರೆ, ದೇವರ ರೂಪವೇನು?

ಗುಣ ಆಕಾರಗಳೇನು ಎಂಬು­ದನ್ನು ತಿಳಿಸಿ ಅರಿಯದ ಪಾಮರರ ಉದ್ಧಾರ ಮಾಡ­ಬಾರದೇಕೆ? ಹಿಂದೊಮ್ಮೆ ಅಧ್ಯಾತ್ಮ ಗುರುಗಳೊಬ್ಬ­ರನ್ನು ಭಕ್ತ­ರೊ­ಬ್ಬರು ‘ತಾವು ದೇವರನ್ನು ನೋಡಿರು­ವಿರಾ?’ ಎಂದು ಪ್ರಶ್ನಿಸಿದರು. ಗುರುಗಳು ‘ನಿಮ್ಮ ಮುಂದೆಯೇ ನಿಂತಿರು­ವೆನಲ್ಲಾ’ ಎಂದು ಉತ್ತರಿಸಿದರು.

ದೇವರು ಸರ್ವಾಂ­ತ­ರ್ಯಾಮಿ, ನಿರಾಕಾರ, ಅಣುರೇಣು ತೃಣ­ಕಾಷ್ಠ­ಗಳಲ್ಲಿಯೂ ಇದ್ದಾನೆ ಎಂದು ನಂಬುವುದಾದರೆ, ಸಾಯಿಬಾಬಾರಲ್ಲಿ, ರಾಘವೇಂದ್ರ ಸ್ವಾಮಿಗಳ­ಲ್ಲಿಯೂ ಇರಬಾರದೇಕೆ?
  – ಎಸ್‌.ಎಚ್‌. ಕರಣಿಕ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT