ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಅಭಿವೃದ್ಧಿ ಪಥದಲ್ಲಿ: ಮನಮೋಹನ್‌ ಸಿಂಗ್‌

ಯೋಜನಾ ಆಯೋಗಕ್ಕೆ ಪ್ರಧಾನಿ ವಿದಾಯ
Last Updated 30 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ದೇಶವು ಅಭಿವೃದ್ಧಿ ಪಥ­ದ­ಲ್ಲಿದೆ. ಆದರೆ, ನಾವು ಇನ್ನೂ ಬಹು ದೂರ ಸಾಗಬೇಕಾ­ಗಿದೆ’ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಬುಧ­ವಾರ ಅಭಿಪ್ರಾಯಪಟ್ಟರು.

ಯೋಜನಾ ಆಯೋಗಕ್ಕೆ ವಿದಾಯ ಹೇಳುತ್ತಿರುವ ಸಂದರ್ಭದಲ್ಲಿ ಆಯೋ­ಗದ ಸದಸ್ಯರೊಂದಿಗಿನ ಸಂವಾದ ಕಾರ್ಯ­­ಕ್ರಮದಲ್ಲಿ ಮಾತನಾಡಿದ ಪ್ರಧಾನಿ ಸಿಂಗ್‌, ಭಾರತದ್ದು ಪ್ರಗತಿಯ ಯಶೋಗಾಥೆ. ಆದರೆ, ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲು ನಾವು ಬಹು ದೂರ ಸಾಗಬೇಕಿದೆ’ ಎಂದು ಪ್ರತಿಪಾದಿಸಿದರು.

‘ಮಾರುಕಟ್ಟೆ ವ್ಯವಸ್ಥೆ ಮೇಲೆಯೇ ಹೆಚ್ಚು ಅವಲಂಬಿ­ತ­ವಾಗಿರುವ ಇಂದಿನ ಮುಕ್ತ ಮತ್ತು ಉದಾರ ಆರ್ಥಿಕ ಪರಿ ಸ್ಥಿತಿಯಲ್ಲಿ ಯೋಜನಾ ಆಯೋಗವು ಹೊಸ ಜಗತ್ತಿನಲ್ಲಿ  ಯಾವ ರೀತಿಯ ಪಾತ್ರ ನಿರ್ವಹಿಸ­ಬೇಕು ಎಂಬುದನ್ನು ನಾವು ಅಭಿ­ವ್ಯಕ್ತಿ ಪಡಿಸುವ ಅಗತ್ಯವಿದೆ’ ಎಂದು ಆಯೋಗದ ಅಧ್ಯಕ್ಷರೂ ಆದ ಸಿಂಗ್‌ ಹೇಳಿದರು.

ಯುಪಿಎಯ 10 ವರ್ಷಗಳ ಆಡಳಿತ­ದಲ್ಲಿ ಆಯೋ­ಗದ ಕಾರ್ಯ­ನಿರ್ವ­ಹಣೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಿ, ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ವಿವೇಚನೆ­ಯುಕ್ತ ವಿಶ್ಲೇಷಣೆಗೆ ಆಯೋ­ಗವು ಒಳ­ಪಡ­­ಲಿದೆ ಮತ್ತು ದೇಶದ ಅಭಿ­ವೃದ್ಧಿ­­ಯಲ್ಲಿ ನಿರ್ವಹಿಸುತ್ತಿ­ರುವ  ಪಾತ್ರ­ವನ್ನು ಅದು ಭವಿಷ್ಯ­ದಲ್ಲೂ ಮುಂದು ವ­ರಿ­­ಸ­­­ಲಿದೆ ಎಂಬ ವಿಶ್ವಾಸ­ವನ್ನು ವ್ಯಕ್ತ­ಪಡಿಸಿ­ದರು.

ಸಿಂಗ್‌ ಅವರು 1980ರ ಏಪ್ರಿಲ್‌ನಿಂದ ಯೋಜನಾ ಆಯೋಗದೊಂದಿಗೆ ಗುರುತಿಸಿಕೊಂಡಿ­ದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಆಯೋಗ ಸೇರಿದ್ದ ಸಿಂಗ್‌, ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಆಯೋ­ಗದ ಉಪಾಧ್ಯಕ್ಷರಾಗಿದ್ದರು.1991–95ರ ಅವಧಿಯಲ್ಲಿ ತಾವು ಹಣಕಾಸು ಸಚಿವರಾಗಿದ್ದ ಸಂದರ್ಭ­ದಲ್ಲಿ ಆಗಿನ ಯೋಜನಾ  ಆಯೋಗದ ಉಪಾಧ್ಯಕ್ಷ, ಈಗಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ನೀಡಿದ್ದ ಬೆಂಬಲ­ವನ್ನು ಸಿಂಗ್‌ ಅವರು ಇದೇ ಸಂದರ್ಭ­ದಲ್ಲಿ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT