ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರದಲ್ಲಿ ವಿಚಾರ ಸಂಕಿರಣ

Last Updated 29 ಆಗಸ್ಟ್ 2015, 9:03 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಗೀತಂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಟೆಕ್ನಾಲಜಿಯ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಎಂಜಿನಿಯರಿಂಗ್ ಆಂಡ್ ಇಲೆಕ್ಟ್ರ್ಕಿಲ್ ಆಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಕರೆಂಟ್ ರಿಸರ್ಚ್ ಟ್ರೆಂಡ್ಸ್ ಇನ್ ಎನರ್ಜಿ ಆಂಡ್ ಹೆಲ್ತ್ ಮಾನಿಟರಿಂಗ್ ಕುರಿತ ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಐಐಎಸ್‌ಸಿಯ ಇನ್‌ಸ್ಟ್ರೂಮೆಂಟೇಶನ್ ವಿಭಾಗದ ಪ್ರಾಧ್ಯಾಪಕ ಪ್ರೊ.ಜೆ.ನಾಗರಾಜು ಮಾತನಾಡಿ, ಗೀತಂ ವಿಶ್ವವಿದ್ಯಾಲಯವು ಮುಂದಿನ ಐವತ್ತು ವರ್ಷಗಳಲ್ಲಿ ಐಐಎಸ್‌ಸಿ ಮಟ್ಟಕ್ಕೇರುವ ಭರವಸೆ ಇದೆ. ವಿಶ್ವವಿದ್ಯಾಲಯ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಅವರು  ಅಭಿಪ್ರಾಯಪಟ್ಟರು.

ಸೋಲಾರ್ ಅಪ್ಲಿಯನ್ಸ್‌ಸ್ ಮತ್ತು ಬಯೋ ಮೆಡಿಕಲ್ ಇನ್‌ಸ್ಟ್ರೂಮೆಂಟ್ಸ್ ಅಪ್ಲಿಕೇಶನ್ ಕುರಿತಂತೆ ಮಾತನಾಡಿದ ಅವರು, ಸೌರಶಕ್ತಿ ಮತ್ತು ಹೆಲ್ತ್ ಮಾನಿಟರಿಂಗ್‌ನಿಂದಾಗುವ ಪ್ರಯೋಜನಗಳ ಕುರಿತಂತೆ ಮಾಡಬಹುದಾದ ವಿನೂತನ ಆವಿಷ್ಕಾರಗಳ ಸಾಧ್ಯತೆಯ ಬಗ್ಗೆ ಅವರು ಇದೇ ವೇಳೆ ವಿವರಿಸಿದರು.

ಗೀತಂ ರಿಜಿಸ್ಟ್ರಾರ್ ಪ್ರೊ.ಎಂ. ಪೋತರಾಜು, ಸ್ಕೂಲ್ ಆಪ್ ಟೆಕ್ನಾಲಜಿ ನಿರ್ದೇಶಕ ಪ್ರೊ.ಕೆ. ವಿಜಯ ಭಾಸ್ಕರರಾಜು, ಸಹಾಯಕ ಪ್ರಿನ್ಸಿಪಾಲ್ ಕೃಷ್ಣ ಪ್ರಸಾದ್‌  ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT