ಜಿಂಡೊ (ಎಎಫ್‌ಪಿ): ದಕ್ಷಿಣ ಕೊರಿಯಾದ ಜಿಂಡೊ ದ್ವೀಪದ ಬಳಿ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ ನೂರರ ಗಡಿ ದಾಟಿದೆ.
ಅಧಿಕೃತ ಮಾಹಿತಿ ಪ್ರಕಾರ 120ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪಿದ್ದು, 194 ಮಂದಿ ನಾಪತ್ತೆಯಾಗಿದ್ದಾರೆ.
ದೋಣಿಯಲ್ಲಿದ್ದ ಪ್ರಯಾಣಿಕರ ಸಂಬಂಧಿಗಳಿಂದ ಒತ್ತಡ ಹೆಚ್ಚಿದ ನಂತರ ಮುಳುಗು ತಜ್ಞರು ಮೃತದೇಹ ಪತ್ತೆ ಹಚ್ಚುವ ಕಾರ್ಯ ತೀವ್ರ ಗೊಳಿಸಿದ್ದಾರೆ.
ಕಡಲ್ಗಾವಲು ಪಡೆಯ ನಿಧಾನ ಗತಿಯ ಕಾರ್ಯಾಚರಣೆಯನ್ನು ಪ್ರಧಾನಿ ಸೇರಿದಂತೆ ಹಿರಿಯ ರಾಜಕೀಯ ನಾಯಕರು ಟೀಕಿಸಿದ್ದಾರೆ.