ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೃವ ಹೆಲಿಕಾಪ್ಟರ್ ಬಳಕೆಗೆ ನಿರ್ಬಂಧ

Last Updated 30 ಜನವರಿ 2015, 12:48 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಭಾರತದಿಂದ ಆಮದು ಮಾಡಿಕೊಂಡ ಧೃವ ಹೆಲಿಕಾಪ್ಟರ್ ಗಳನ್ನು ಬಳಸದಿರಲು ಇಕ್ವೆಡಾರ್ ವಾಯ ಪಡೆ ನಿರ್ಧರಿಸಿದೆ. ಈ ಹೆಲಿಕಾಪ್ಟರ್ ಪದೇ ಪದೆ ಅಪಘಾತಕ್ಕೀಡಾಗುತ್ತಿರುವುದೇ ಕಾರಣ.

ಎಚ್ ಎಎಲ್ ನಿರ್ಮಿತ ಇಂತಹ ಏಳು ಹೆಲಿಕಾಪ್ಟರ್ ಗಳನ್ನು ಇಕ್ವೆಡಾರ್ ನ ವಾಯುಪಡೆ 2009ರಲ್ಲಿ ಅಂದಾಜು 4.5 ಕೋಟಿ ಡಾಲರ್ ಗಳಿಗೆ ಖರೀದಿಸಿತ್ತು. ಭಾರತ ಇಂತಹ ಇನ್ನಷ್ಟು ಹೆಲಿಕಾಪ್ಟರ್ ಗಳನ್ನು ರಫ್ತು ಮಾಡುವ ಗುರಿ ಹೊಂದಿದೆ. ಆದರೆ, ಇಕ್ವೆಡಾರ್ ನ ಈ ನಿರ್ಧಾರದಿಂದಾಗಿ ಭಾರತಕ್ಕೆ ಹಿನ್ನಡೆಯಾದಂತಾಗಿದೆ. 

ಇತ್ತೀಚಿಗೆ ಮೂರು ಧೃವ ಹೆಲಿಕಾಪ್ಟರ್ ಗಳು ಸರಣಿ ಅಪಘಾತಕ್ಕೊಳಗಾಗಿವೆ. ಹೀಗಾಗಿ, ಸಂಪೂರ್ಣ ಭದ್ರತಾ ಪರೀಕ್ಷೆ ನಡೆಸಿ ಬಳಕೆಗೆ ಯೋಗ್ಯ ಎಂದು ಖಾತ್ರಿಯಾದ ಬಳಿಕವೇ ಇವುಗಳನ್ನು ಬಳಸಿಕೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT