ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನಿಪೆಟ್ಟಿಗೆಗೆ ವಿಶ್ರಾಂತಿ ನೀಡಿ

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಏಪ್ರಿಲ್ ೧೬ ವಿಶ್ವ ಧ್ವನಿ ದಿನ. ಈ ಪ್ರಯುಕ್ತ ‘ಸಕ್ರಾ ವರ್ಲ್ಡ್‌ ಹಾಸ್ಪಿಟಲ್‌’ನ ಡಾ. ಶಾಂತನೂ ಟಂಡನ್ ಅವರು ಧ್ವನಿ ಸಮಸ್ಯೆಗಳು ಹಾಗೂ ಆರೋಗ್ಯಕರ ಕಂಠ ಕಾಪಾಡಿಕೊಳ್ಳುವುದರ ಕುರಿತು ಕೆಲವು ಉಪಯುಕ್ತ ಸಲಹೆ ನೀಡಿದ್ದಾರೆ... ಧ್ವನಿಪೆಟ್ಟಿಗೆಯ ಸಹಾಯದಿಂದಲೇ ನಮ್ಮೆಲ್ಲರಿಗೂ ಮಾತನಾಡಲು ಸಾಧ್ಯವಾಗುತ್ತದೆ. ಅದರಲ್ಲಿನ ವಿಶೇಷ ರೀತಿಯ ಮಾಂಸಖಂಡಗಳು ನಮ್ಮ ಧ್ವನಿನಾಳದ ಮೇಲೆ ಪ್ರಭಾವ ಬೀರುವ ಮೂಲಕ ಮಾತನಾಡಲು ಸಹಾಯ ಮಾಡುತ್ತವೆ.

ನಾವು ಮಾತನಾಡಲು ಪ್ರಯತ್ನಿಸಿದಾಗಲೆಲ್ಲಾ ಈ ಮಾಂಸಖಂಡಗಳು ಒಟ್ಟಾಗಿ ಸೇರಿ ಕಂಪನ ಸೃಷ್ಟಿಸುತ್ತವೆ. ಈ ಕಂಪನದಿಂದಾಗಿ ಪ್ರತಿ ಸೆಕೆಂಡಿಗೆ ಎರಡೂ ಮಾಂಸಖಂಡಗಳು ಸುಮಾರು ೮೦ರಿಂದ ೨೫೦ ಬಾರಿ ಪರಸ್ಪರ ಬಡಿದುಕೊಳ್ಳುತ್ತವೆ. ವೃತ್ತಿಪರ ಗಾಯಕರು, ಶಿಕ್ಷಕರು, ಆರ್‌.ಜೆಗಳು, ರಂಗಭೂಮಿ ಕಲಾವಿದರು, ಭಾಷಣಕಾರರು ಹಾಗೂ ಟೆಲಿಕಾಲರ್‌ಗಳಿಗೆ ಅವರ ಧ್ವನಿಯೇ ಬಂಡವಾಳ. ಹೀಗಾಗಿ ಇಂತಹ ವೃತ್ತಿಪರರಲ್ಲಿ ಧ್ವನಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತವೆ.

ಚೀರಾಡುವ ಮಕ್ಕಳಲ್ಲಿಯೂ ಕೂಡ ಬಹು ಬೇಗನೆ ಈ ರೀತಿಯ ಧ್ವನಿ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಜಠರದಲ್ಲಿ ಪಚನಕ್ರಿಯೆಗೆ ನೆರವಾಗುವ ಆಮ್ಲರಸಗಳು ಹಿಮ್ಮುಖವಾಗಿ ಚಲಿಸಿ ಧ್ವನಿನಾಳ ಪ್ರವೇಶಿಸಿದಾಗಲೂ ಧ್ವನಿಯ ಗುಣಮಟ್ಟ ಹಾಳಾಗುತ್ತದೆ. ಇದರಿಂದಾಗಿ ಗಂಟಲು ಉರಿ, ಗಂಟಲು ಭಾಗದಲ್ಲಿ ಗಂಟು ಕಟ್ಟಿದ ರೀತಿಯ ಅನುಭವ ಹಾಗೂ ಧ್ವನಿಯಲ್ಲಿ ಬದಲಾವಣೆ ಮತ್ತು ಕೆಮ್ಮು, ನೋವು ಕಾಣಿಸಿಕೊಳ್ಳುತ್ತದೆ.

ಧ್ವನಿ ಹಾಗೂ ಧ್ವನಿನಾಳದಲ್ಲಿನ ಸಮಸ್ಯೆಗಳನ್ನು ವಿಡಿಯೋಲ್ಯಾರಿಗೊಸ್ಕಪಿ ವಿಧಾನದ ಮೂಲಕ ಪತ್ತೆ ಮಾಡಬಹುದಾಗಿದೆ. ಈ ಮೂಲಕ ಧ್ವನಿಪೆಟ್ಟಿಗೆ ಹಾಗೂ ಧ್ವನಿನಾಳ ವೀಕ್ಷಿಸುವುದು ಸಾಧ್ಯವಾಗುತ್ತದೆ. 

ಆರೋಗ್ಯಕರ ಧ್ವನಿಪೆಟ್ಟಿಗೆಗಾಗಿ...
*ದಿನಕ್ಕೆ ೨.೫ರಿಂದ ೩ ಲೀಟರ್ ನೀರು ಕುಡಿಯುವ ಮೂಲಕ ನಿಮ್ಮ ಧ್ವನಿಪೆಟ್ಟಿಗೆ ಒಣಗದಂತೆ ನೋಡಿಕೊಳ್ಳಿ.
*ಟೀ, ಕಾಫಿ, ಆಲ್ಕೋಹಾಲ್ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
*ನಿಧಾನವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಹಾಗೂ ಮಾತನಾಡುವ ವೇಳೆ ಸಾಮಾನ್ಯ ರೀತಿಯಲ್ಲಿಯೇ ಉಸಿರಾಟ ನಡೆಸಿ.
*ಗಂಟಲು ಕಟ್ಟದಂತೆ ನಿಗಾ ವಹಿಸಲು ಕೆಮ್ಮುವ ಬದಲಿಗೆ ನಿಧಾನವಾಗಿ ಉಸಿರಾಡುತ್ತಾ ಕಟ್ಟಿದ ಎಂಜಲನ್ನು ನುಂಗಲು ಪ್ರಯತ್ನಿಸಬೇಕು.
*ಧೂಮಪಾನದಿಂದ ದೂರವಿರಬೇಕು.
*ಕರಿದ ಪದಾರ್ಥಗಳ ಸೇವನೆಯಿಂದ ದೂರವಿದ್ದು, ಅಸಿಡಿಟಿ ಆಗದಂತೆ ಎಚ್ಚರವಹಿಸಬೇಕು.

ವೃತ್ತಿಪರರು ಈ ಅಂಶಗಳನ್ನು ಗಮನಿಸಿ...
*ಹೆಚ್ಚಾಗಿ ನೀರು ಕುಡಿಯಬೇಕು. ಈ ಮೂಲಕ ಧ್ವನಿನಾಳಕ್ಕೆ ಸಾಕಾಗುವಷ್ಟು ನೀರಿನ ಅಂಶ ಒದಗುವಂತೆ ನೋಡಿಕೊಳ್ಳಬೇಕು. ಆಗ ‘ವಾಯ್ಸ್ ಕ್ರಾಕ್’ ಸಮಸ್ಯೆಗಳಿಂದ ಪಾರಾಗಬಹುದಾಗಿದೆ.
*ಗಾಯನ, ನಿರೂಪಣೆಗೂ ಮುನ್ನ ಸಕ್ಕರೆ ಹಾಗೂ ಕಾಫಿ ಸೇವನೆ ಕೂಡದು.
*ಬೃಹತ್ ಪ್ರಮಾಣದ ಜನರೆದುರು ಪ್ರದರ್ಶನ ನೀಡುವಾಗ ಮೈಕ್ರೋಫೋನ್‌ನಂತಹ ಧ್ವನಿ ವರ್ಧಕಗಳನ್ನು ಬಳಕೆ ಮಾಡಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ;  http://www.gbmc.org/RefluxChangestotheLarynx

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT