ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಸದಸ್ಯರನ್ನು ಕೈಬಿಡಲು ರಾಹುಲ್‌ ಗಾಂಧಿ ಸಲಹೆ

Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ­ಗಳಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್‌ ಪಕ್ಷವನ್ನು ಸಮರ್ಥವಾಗಿ ಪುನರ್‌ ಸಂಘಟಿಸಲು  ನಡೆಯಲಿರುವ  ಸಾಂಸ್ಥಿಕ ಚುನಾವಣೆ ವೇಳೆ ನಕಲಿ ಸದಸ್ಯ­ರನ್ನು ಕೈಬಿಡುವಂತೆ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ  ಸಲಹೆ ಮಾಡಿ­ದ್ದಾರೆ.

ಪಕ್ಷದ ಸಾಂಸ್ಥಿಕ ಚುನಾವಣೆಗಳು ಮುಕ್ತ, ನ್ಯಾಯಸಮ್ಮತ ಹಾಗೂ ಪಾರ­ದರ್ಶಕ­­ವಾಗಿರಬೇಕು  ಹಾಗೂ ನಕಲಿ ಸದಸ್ಯ­ರಿಗೆ ಮತ ಚಲಾಯಿಸಲು ಅವ­ಕಾಶ ನೀಡ­ಬಾರದು ಎಂದು ಸೂಚಿಸಿ­ದ್ದಾರೆ. ಪಕ್ಷದ ಆಂತರಿಕ ಚುನಾವಣೆ­ಗಳನ್ನು ಮುಕ್ತ ಹಾಗೂ ನ್ಯಾಯಸಮ್ಮತ­ವಾಗಿ ನಡೆಸುವ ಎಲ್ಲ ಅಧಿಕಾರವನ್ನು ಎಂ. ರಾಮಚಂದ್ರನ್‌ ನೇತೃತ್ವದ ಪಕ್ಷದ ಕೇಂದ್ರ  ಚುನಾವಣಾ ಪ್ರಾಧಿಕಾರಕ್ಕೆ ನೀಡಲಾಗಿದೆ ಎಂದರು.

ನಗರದಲ್ಲಿ ಸೋಮವಾರ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ನಕಲಿ ಮತದಾನ ತಡೆಯಲು ಸದಸ್ಯ­ರಿಗೆ ಗುರುತಿನ ಚೀಟಿ ನೀಡುವುದು ಸೇರಿ­ದಂತೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗುವುದು ಎಂದರು.

ಪಕ್ಷದ ಸದಸ್ಯತ್ವ ಅಭಿಯಾನ ಡಿಸೆಂ­ಬರ್‌ನಲ್ಲಿ ಮುಕ್ತಾಯ­ವಾಗ­ಲಿದ್ದು ವರ್ಷಾ­ರಂಭ­ದಿಂದ ಬ್ಲಾಕ್‌ ಮಟ್ಟದ ಚುನಾ­ವಣೆ ಆರಂಭ­ವಾಗ­ಲಿದೆ. ಜುಲೈನಲ್ಲಿ ಕಾಂಗ್ರೆಸ್‌ ಅಧ್ಯಕ್ಷರ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT