ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ದಿನವಿಡೀ ಸುರಿದ ಸೋನೆ ಮಳೆ

ಬುಧವಾರ 4.06 ಮಿ. ಮೀ ಮಳೆ
Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬುಧವಾರ 4.06 ಮಿ. ಮೀ ಮಳೆಯಾಗಿದೆ. ಮೋಡ ಮುಸುಕಿದ ವಾತಾವರಣ ಹಾಗೂ ಸಾಧಾರಣ  ಮಳೆಯು ದಿನವಿಡೀ ಮುಂದುವರೆದಿತ್ತು. ಇದರಿಂದ ಜನ ಜೀವನಕ್ಕೆ ಸ್ವಲ್ಪ ಮಟ್ಟಿಗೆ ಕಿರಿಕಿರಿಯಾಯಿತು. ‘ಜೂನ್‌ ತಿಂಗಳಲ್ಲಿ ಈತನಕ 187 ಮಿ. ಮೀ ಮಳೆಯಾಗಿದೆ. ಇದು ವಾಡಿಕೆಗಿಂತಲೂ ಹೆಚ್ಚು. ಕಳೆದ ವರ್ಷ ಜೂನ್‌ ತಿಂಗಳಲ್ಲಿ 85 ಮಿ.ಮೀ ಮಳೆಯಾಗಿತ್ತು. ನಗರದಲ್ಲಿ ಜೂನ್‌ ತಿಂಗಳಲ್ಲಿ 87 ಮಿ. ಮೀ ವಾಡಿಕೆ ಮಳೆ’ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕ ಸುಂದರ್‌ ಎಂ. ಮೇತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮರ ಧರೆಗೆ: ಮಳೆಯಿಂದಾಗಿ ನಗರ ಪೊಲೀಸ್‌ ಆಯುಕ್ತರ ಕಚೇರಿ ಹಿಂಭಾಗದ  ಅಲಿ ಅಸ್ಗರ್‌ ರಸ್ತೆಯಲ್ಲಿ ಬೃಹತ್‌ ಮರವೊಂದು ಬಿದ್ದು,  ಕಾರುಗಳು ಜಖಂಗೊಂಡಿವೆ. ಎಂ.ಎಸ್‌.ರಾಮಯ್ಯ ಆಸ್ಪತ್ರೆ ಸಮೀಪ ಮರದ ಕೊಂಬೆಯೊಂದು ಮುರಿದು ಕೇಬಲ್‌ ಮೇಲೆ ಬಿದ್ದಿದೆ. ಆದರೆ,ಯಾವುದೇ ಹಾನಿ ಸಂಭವಿಸಿಲ್ಲ.


ಪ್ರಕೃತಿ ವಿಕೋಪ–ಸಹಾಯವಾಣಿ ಕಾರ್ಯಾರಂಭ: ಮುಂಗಾರು ಮಳೆ ಯಿಂದಾಗಿ ಸಂಭವಿಸಬಹುದಾದ ಪ್ರಕೃತಿ ವಿಕೋಪದಿಂದಾಗಿ ಉಂಟಾ ಗುವ ಹಾನಿ ಹಾಗೂ ನಷ್ಟವನ್ನು ತಡೆಗಟ್ಟಲು  ಬೆಂಗಳೂರು ಗ್ರಾಮಾಂ ತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ವನ್ನು ಆರಂಭಿಸಲಾಗಿದೆ.
ಈ ಕೇಂದ್ರ ಬುಧವಾರದಿಂದ ಆರಂಭ ಮಾಡಿದ್ದು, ಸೆಪ್ಟೆಂಬರ್ 30 ರವರೆಗೆ  ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಜಿಲ್ಲೆಯ ಜನರು ಪ್ರಕೃತಿ ವಿಕೋಪದಿಂದಾಗುವ ಸಮಸ್ಯೆಗಳ ದೂರುಗಳನ್ನು ಟೋಲ್‌ಫ್ರೀ ನಂಬರ್‌ 1070 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಕುಡಿ ಯುವ ನೀರಿನ ಸಮಸ್ಯೆಗಾಗಿ ಅನುಷ್ಠಾನಗೊಳಿಸಿರುವ ಸಹಾಯ ವಾಣಿ  ಸಂಖ್ಯೆ 228604/2 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT