ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಮತ್ತೆ ಮಳೆ ಆರ್ಭಟ

ರಸ್ತೆಗಳಲ್ಲಿ ಪ್ರವಾಹ, ಮನೆಗಳಿಗೆ ನುಗ್ಗಿದ ನೀರು
Last Updated 25 ಅಕ್ಟೋಬರ್ 2014, 20:19 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನ ನಗರಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಿದ್ದ ಮಳೆ ಶನಿವಾರ ಸಂಜೆ ಮತ್ತೆ ಅಬ್ಬರಿಸಿದೆ. ಧಾರಾಕಾರ ಮಳೆಯಿಂದಾಗಿ ನಗರದ ವಿವಿಧ ರಸ್ತೆಗಳಲ್ಲಿ ನೀರು ನಿಂತು ಕೆರೆಯಂತಾಗಿದ್ದವು.

ಮಧ್ಯಾಹ್ನದಿಂದಲೇ ಮೋಡಕಟ್ಟಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ 4 ಗಂಟೆ ವೇಳೆಗೆ ಗುಡುಗು ಸಹಿತ ಮಳೆ ಸುರಿಯಿತು. ಸುಮಾರು ಎರಡು ಗಂಟೆ ಕಾಲ ಅಬ್ಬರಿ­ಸಿತು. ವಾರಾಂತ್ಯದ ಮಜೆಯ ಖುಷಿಯಲ್ಲಿ ಮನೆಯಿಂದ ಹೊರಟವರು ಮಳೆಗೆ ಸಿಲುಕಿ ತೊಂದರೆ ಅನುಭವಿಸಿದರು.

ಮನೆಗಳಿಗೆ ನುಗ್ಗಿದ ನೀರು: ಚಾಮರಾಜಪೇಟೆಯ ರೈತರ ಸಂತೆ ಬೀದಿ, ಚೆನ್ನಮ್ಮನ ಅಚ್ಚುಕಟ್ಟು, ಜರ್ನಲಿಸ್ಟ್‌ ಕಾಲೋನಿ, ನಾಯಂಡಹಳ್ಳಿಯ ಮೇಲ್ಸೇತುವೆ ಬಳಿ ಕೆಲ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಇಲ್ಲಿನ ತಗ್ಗು ಪ್ರದೇಶದ ನಿವಾಸಿಗಳು ಭಾರಿ ತೊಂದರೆ ಅನುಭವಿಸಿದರು.

ಧರೆಗುರುಳಿದ ಮರಗಳು: ಭಾರಿ ಮಳೆಯಿಂದಾಗಿ ಸರ್ಜಾಪುರ ಅಗ್ರಹಾರ, ಎಂ.ಸಿ.ಬಡಾವಣೆಯ ಬಿಡಿಎ ಸಂಕೀರ್ಣ, ಮಲ್ಲೇಶ್ವರ 13ನೇ ಅಡ್ಡರಸ್ತೆ ಹಾಗೂ ಜಯನಗರದ ಮೂರನೇ ಹಂತದ ಸಾಲಿಗ್ರಾಮದಲ್ಲಿ ಮರಗಳು ಧರೆಗುರುಳಿವೆ. ಕೆಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು.

ರಸ್ತೆಗಳು ಜಲಾವೃತ: ರಭಸದ ಮಳೆಯಿಂದಾಗಿ ಮೆಜೆಸ್ಟಿಕ್‌, ಮೈಸೂರು ರಸ್ತೆ, ಮೆಕ್ರಿ ವೃತ್ತದಲ್ಲಿ ವಾಹನ ದಟ್ಟಣೆ ಉಂಟಾ­ಯಿತು. ಹಳೇ ವಿಮಾನ ನಿಲ್ದಾಣ ರಸ್ತೆ, ಕಸ್ತೂರಬಾ ರಸ್ತೆ, ಅನಿಲ್‌ ಕುಂಬ್ಳೆ ವೃತ್ತ, ಕಾರ್ಪೊರೇಷನ್‌, ಮೆಜೆಸ್ಟಿಕ್‌ ಸೇರಿ­ದಂತೆ ಪ್ರಮುಖ ಪ್ರದೇಶಗಳಲ್ಲಿನ ರಸ್ತೆಗಳು ಜಲಾವೃತ­ವಾಗಿ­ದ್ದವು. ಕೆಲವೆಡೆ ಚರಂಡಿ ನೀರು ರಸ್ತೆಯ ಮೇಲೆ ಹರಿಯಿತು.

41.7 ಮಿ.ಮೀ. ಮಳೆ
ಹವಾಮಾನ ಇಲಾಖೆ ಪ್ರಕಾರ ನಗರದಲ್ಲಿ ಶನಿವಾರ ರಾತ್ರಿ 8.30ರ ವೇಳೆಗೆ 41.7 ಮಿ.ಮೀ. ಮಳೆ­ಯಾಗಿತ್ತು. ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 15.2 ಮಿ.ಮೀ, ಯಲಹಂಕದಲ್ಲಿ 23.1 ಮಿ.ಮೀ. ಮಳೆ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT