ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಸಿಬ್ಬಂದಿ ನೇಮಕಾತಿಗೆ ಒತ್ತಾಯ

ಪೌರಾಡಳಿತ ನಿರ್ದೇಶಕರಿಗೆ ಮನವಿ ಸಲ್ಲಿಕೆ
Last Updated 1 ಅಕ್ಟೋಬರ್ 2014, 10:27 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:  ಆರೋಗ್ಯ ವಿಭಾಗ ಸೇರಿದಂತೆ ನಗರಸಭೆಯಲ್ಲಿನ ವಿವಿಧ ವಿಭಾಗಗಳಲ್ಲಿ  ಸಿಬ್ಬಂದಿ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಟಿತವಾಗಿದ್ದು ತುರ್ತಾಗಿ ನೇಮಕಾತಿ ಮಾಡುವಂತೆ ಮಂಗಳವಾರ ನಗರಸಭೆ ಅಧ್ಯಕ್ಷೆ ಶಂಷುನ್ನಿಸಾ ನೇತೃತ್ವದಲ್ಲಿ ಪೌರಾಡಳಿತ ನಿರ್ದೇಶಕಿ ಡಾ.ಮಂಜುಳಾ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಬಗ್ಗೆ ಮಾಹಿತಿ ನೀಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌ ಮಾಹಿತಿ ನೀಡಿ, ನಗರದ ಸ್ವಚ್ಚತೆಯಲ್ಲಿ ಆರೋಗ್ಯ ಇಲಾಖೆಯ ಪಾತ್ರ ಬಹುಮುಖ್ಯವಾಗಿದೆ. ಆದರೆ ದೊಡ್ಡಬಳ್ಳಾಪುರ ನಗರದಲ್ಲಿ ಒಂದು ಲಕ್ಷ ಜನಸಂಖ್ಯೆ ಮೀರಿದ್ದರೂ ಆರೋಗ್ಯ ನಿರೀಕ್ಷಕರ ಹುದ್ದೆ ಖಾಲಿ ಇದೆ. ಇದರಿಂದ ಕಸ ನಿರ್ವಹಣೆಗೆ ಅಡ್ಡಿಯಾಗಿದೆ.

ಇದಲ್ಲದೆ 2 ಪ್ರಥಮ ದರ್ಜೆ ಸಹಾಯಕರ ಹುದ್ದೆ, 2 ಹಿರಿಯ ಆರೋಗ್ಯ ನಿರೀಕ್ಷಕರ ಹುದ್ದೆ, 1 ಕಿರಿಯ ಆರೋಗ್ಯ ನಿರೀಕ್ಷಕರ ಹುದ್ದೆ, 1 ವಿದ್ಯುತ್‌ ನಿರ್ವಹಣ ಹುದ್ದೆ, 1 ಕಮ್ಯುನಿಟಿ ಆಫೈರ್‌ ಆಫೀಸರ್‌ (ಎಸ್‌ಜೆಎಸ್‌ಆರ್‌ವೈ), 34 ಪೌರ ಕಾರ್ಮಿಕರು, 4 ಗಾರ್ಡ್‌ನರ್ ಹುದ್ದೆಗಳು ಖಾಲಿ ಉಳಿದಿವೆ. ಇಷ್ಟೊಂದು ಹುದ್ದೆಗಳನ್ನು ಖಾಲಿಯಾಗಿಟ್ಟುಕೊಂಡು ಆಡಳಿತ ನಡೆಸುವುದು, ನಗರದ ನೈರ್ಮಲ್ಯ ಕಾಪಾಡುವುದು ಕಷ್ಟವಾಗಲಿದೆ. ನಗರಸಭೆಯಲ್ಲಿ ಹಲವಾರು ವರ್ಷಗಳಿಂದಲೂ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಆಡಳಿತ ನಿಧಾನಗತಿಗೆ ಕಾರಣವಾಗಿದೆ. ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಆರ್‌.ಗೋವಿಂದರಾಜ್‌, ಆರ್‌.ಕೆಂಪರಾಜ್‌, ವಡ್ಡರಹಳ್ಳಿರವಿ, ಶಿವಕುಮಾರ್‌, ಪಿ.ಸಿ. ಲಕ್ಷ್ಮೀನಾರಾಯಣ್‌, ಎಂ.ಮಲ್ಲೇಶ್‌, ಸುಶೀಲರಾಘವ, ಜೆಡಿಎಸ್‌ ಮುಖಂಡರಾದ ಸುಬ್ರಮಣಿ, ಚೌಡರಾಜ್‌, ಮೋಹನ್‌ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT