ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಪಿ.ಜೆ. ಶರ್ಮಾ ನಿಧನ

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಹಿರಿಯ ತೆಲಗು ನಟ ಮತ್ತು ಡಬ್ಬಿಂಗ್‌ ಕಲಾವಿದ ಪಿ.ಜೆ. ಶರ್ಮಾ (70) ಭಾನುವಾರ ಹೃದಯಾಘಾತದಿಂದ ಇಲ್ಲಿ ನಿಧನರಾದರು.

ಕೆಲಕಾಲದಿಂದ ಅವರು ಅನಾರೋಗ್ಯ­ದಿಂದ ಬಳಲುತ್ತಿದ್ದರು. ಅನೇಕ ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಅವರು ವಿಶಿಷ್ಟ ಪಾತ್ರಗಳ ಮೂಲಕ ಮತ್ತು ಡಬ್ಬಿಂಗ್‌ ಕಲಾವಿದರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು.

500ಕ್ಕೂ ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಜೆಮಿನಿ ಗಣೇಶನ್‌ ಸೇರಿದಂತೆ ದಕ್ಷಿಣ ಭಾರತದ ಅನೇಕ ಹಿರಿಯ ಕಲಾವಿದರಿಗೆ ಶರ್ಮಾ ಕಂಠ­ದಾನ ಮಾಡಿದ್ದಾರೆ.

ಶರ್ಮಾ ಅವರ ಹಿರಿಯ ಪುತ್ರ ಸಾಯಿಕುಮಾರ್‌ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಅನೇಕ ಭಾಷಾ ಚಿತ್ರಗಳ ಖ್ಯಾತ ನಟರಾಗಿದ್ದಾರೆ. ಶರ್ಮಾ ಅವರ ಮತ್ತಿಬ್ಬರು ಪುತ್ರ­ರಾದ ರವಿಶಂಕರ್‌ ಮತ್ತು ಅಯ್ಯಪ್ಪ ಶರ್ಮಾ ಅವರೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಶನಿವಾರವಷ್ಟೇ ಶರ್ಮಾ ಅವರ ಮೊಮ್ಮಗ, ಸಾಯಿ­ಕುಮಾರ್‌ ಪುತ್ರ ಆದಿ ಅವರ ಮದುವೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT