ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದೆಲ್ಲ ಸ್ವಾರ್ಥ ರಾಜಕಾರಣ: ಸಿ.ಎಂ

‘ಮಹಾನ್‌ ಸಾಧಕ ಕೆ.ಸಿ.ರೆಡ್ಡಿ’ ಪುಸ್ತಕ ಬಿಡುಗಡೆ
Last Updated 25 ಜುಲೈ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವೆಲ್ಲ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತೇವೆ. ಆದರೆ ಕೆ.ಸಿ.­­ರೆಡ್ಡಿಯವರು ದೇಶದ ಮೇಲಿನ ಅಪಾ­ರವಾದ ಕಾಳಜಿಯಿಂದ ರಾಜಕಾ­ರಣ ಮಾಡಿದ್ದರು’ ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌­ನಲ್ಲಿ ಶುಕ್ರವಾರ ‘ಮಹಾನ್‌ ಸಾಧಕ ಕೆ.ಸಿ.­ರೆಡ್ಡಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ದೇಶವನ್ನು ಪರಕೀಯರ ಸಂಕೋಲೆ­ಯಿಂದ ಬಿಡಿಸಿ ಸ್ವಾತಂತ್ರ್ಯದ ರುಚಿ­ಯನ್ನು ಅನುಭವಿಸಬೇಕು ಎಂಬ ಏಕೈಕ ಉದ್ದೇಶದಿಂದ ಮಹಾತ್ಮ ಗಾಂಧೀಜಿ­ಯವರ ಜೊತೆ ಸೇರಿ ಸ್ವಾತಂತ್ರ್ಯಕ್ಕಾಗಿ ಶ್ರಮಿ­ಸಿದರು. ಅದರ ಫಲವನ್ನು ನಾವೀಗ ಅನುಭವಿಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಸಾಮಾನ್ಯವಾಗಿ ಬಡ ಕುಟುಂಬ­ದಿಂದ ಬಂದವರಲ್ಲಿ ಹೋರಾಟದ ಕಿಚ್ಚು ಇರುತ್ತದೆ. ಆದರೆ ರೆಡ್ಡಿಯವರು ಜಮೀ­ನ್ದಾರ ಕುಟುಂಬದಿಂದ ಬಂದವರು. ಆದರೆ ಶ್ರೀಮಂತಿಕೆಯ ಹಿಂದೆ ಹೋಗದೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಮೂರು ಸಲ ಸೆರೆವಾಸ ಅನುಭವಿಸಿ­ದ್ದರು. ಇಂಥ ನಿಸ್ವಾರ್ಥ ರಾಜಕಾರ­ಣಿಯ ಬದುಕು ಇಂದಿನ ರಾಜಕಾರಣಿ­ಗ­ಳಲ್ಲಿ ಸ್ವಲ್ಪವಾದರೂ ಬದಲಾವಣೆ ತಂದರೆ ಅದೇ ಅವರಿಗೆ ನೀಡುವ ಗೌರವ ಎಂದರು.

ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಸಚಿವರಾದ ರಾಮಲಿಂಗಾ­ರೆಡ್ಡಿ, ಡಿ.ಕೆ.ಶಿವಕುಮಾರ್‌, ಕೃಷ್ಣಭೈರೇ­ಗೌಡ, ಯು.ಟಿ.ಖಾದರ್‌, ರಾಜ್ಯಸಭಾ ಸದಸ್ಯ ಎಂ.ವಿ.ರಾಜೀವ್‌ಗೌಡ, ವಿಧಾನ­ಸಭೆ ಉಪಸಭಾಧ್ಯಕ್ಷ ಎನ್‌.ಎಚ್‌. ಶಿವಶಂಕರ ರೆಡ್ಡಿ ಮತ್ತು ಕೆ.ಸಿ.ರೆಡ್ಡಿ ಕುಟುಂಬದವರು ಉಪಸ್ಥಿತರಿದ್ದರು.

ಕೆ.ಸಿ.ರೆಡ್ಡಿ ಸ್ಮಾರಕ ಭವನಕ್ಕೆ ಒತ್ತಾಯ
ಸಂಸದ ಕೆ.ಎಚ್‌ ಮುನಿಯಪ್ಪ ಮಾತನಾಡಿ ಕೆ.ಸಿ.ರೆಡ್ಡಿಯವರು ಮೈಸೂರು ರಾಜ್ಯಕ್ಕೆ ಮೊದಲ  ಬಾರಿಗೆ ಪಂಚವಾರ್ಷಿಕ ಯೋಜನೆ­ ತಂದವರು. ಬೃಹತ್‌ ಕೈಗಾರಿಕೆ­ಗ­ಳನ್ನು ರಾಜ್ಯಕ್ಕೆ ತಂದವರು. ಅವರ ಸಾಧನೆಗಳನ್ನು ಇಂದಿನ ಯುವಕರಿಗೆ ನೆನಪಿಸುವ ನಿಟ್ಟಿನಲ್ಲಿ ಸ್ಮಾರಕ ಭವನ ನಿರ್ಮಿಸಬೇಕು ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT