ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಂದಾ: 800 ವರ್ಷ ಬಳಿಕ ತರಗತಿ ಆರಂಭ

Last Updated 1 ಸೆಪ್ಟೆಂಬರ್ 2014, 13:46 IST
ಅಕ್ಷರ ಗಾತ್ರ

ಪಾಟ್ನಾ (ಐಎಎನ್‌ಎಸ್‌):  ಭಾರತೀಯ ಸಂಸ್ಕೃತಿ ಮತ್ತು ವಿದ್ಯಾ ಸಂಪನ್ನತೆಗೆ ಶಿಖರ ಪ್ರಾಯವಾಗಿದ್ದ ನಳಂದಾ ವಿಶ್ವವಿದ್ಯಾಲಯದಲ್ಲಿ 800 ವರ್ಷಗಳ ಬಳಿಕ ಮತ್ತೆ ತರಗತಿಗಳು ಆರಂಭಗೊಂಡಿವೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 15 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸೋಮವಾರದಿಂದ ತರಗತಿಗಳು ಆರಂಭಗೊಂಡಿವೆ ಎಂದು ವಿಶ್ವವಿದ್ಯಾ­ಲಯದ ಕುಲಪತಿ  ಗೋಪ ಸಬರ್‌ವಾಲ್‌ ತಿಳಿಸಿದ್ದಾರೆ. 

ಬಿಹಾರದ ಪಟ್ನಾದಿಂದ 100 ಕಿ.ಮೀ ದೂರದಲ್ಲಿರುವ ರಾಜ್‌ಗಿರ್‌ನಲ್ಲಿ ನಳಂದಾ ವಿಶ್ವವಿದ್ಯಾಲಯ ಮರು ಸ್ಥಾಪಿಸುವ ಪ್ರಯತ್ನ ನಡೆದಿದ್ದು, ಇಲ್ಲಿನ ಅಂತರರಾಷ್ಟ್ರೀಯ ಘಟಿಕೋತ್ಸವ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆಯಿಂದ ಚಾರಿತ್ರಿಕ ವಿಜ್ಞಾನ ಮತ್ತು ಪರಿಸರ ಅಧ್ಯಯನ ತರಗತಿಗಳು ಆರಂಭಗೊಂಡಿವೆ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

‘ನಳಂದಾ ವಿಶ್ವವಿದ್ಯಾಲಯವನ್ನು ಮರು ಸ್ಥಾಪಿಸುವ ಪ್ರಯತ್ನದಲ್ಲಿ ನಾವು ಮೊದಲ ಹೆಜ್ಜೆ ಪೂರ್ತಿಗೊಳಿಸಿದ್ದೇವೆ. ಇನ್ನೂ ಸಾಕಷ್ಟು ಪರಿಶ್ರಮದ ಅಗತ್ಯ ಇದೆ. ಪ್ರಪಂಚದಲ್ಲೇ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ನಳಂದಾ ಸಾಕಷ್ಟು ವಿದೇಶಿ ವಿದ್ಯಾರ್ಥಿಗಳನ್ನೂ ಸೆಳೆಯಲಿದೆ’ ಎಂದು ಸಬರ್‌ವಾಲ್‌ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಪುತ್ರಿ ಉಪಿಂದರ್‌ ಕೌರ್‌ ಅವರು ನಳಂದಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿ ಎನ್ನುವುದು ಮತ್ತೊಂದು ವಿಶೇಷ. ಸದ್ಯ ಅವರು ದೆಹಲಿ ವಿವಿಯಲ್ಲಿ ಇತಿಹಾಸ ಬೋಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT