ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟದಲ್ಲಿ ಕೇಂದ್ರದ 79 ಉದ್ಯಮಗಳು

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಕೇಂದ್ರ ಸರ್ಕಾರ ಸ್ವಾಮ್ಯದ 79 ಉದ್ಯಮಗಳು (ಸಿಪಿಎಸ್‌ಯು) ನಷ್ಟದಲ್ಲಿದ್ದು, ಅವುಗಳಲ್ಲಿ  48 ಉದ್ಯಮಗಳ ಪುನಶ್ಚೇತನಕ್ಕೆ ₨40,937 ಕೋಟಿ ವ್ಯಯಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದರು.

ಪ್ರಶ್ನೋತ್ತರ ವೇಳೆಯಲ್ಲಿ ಮಾತನಾ­ಡಿದ ಅವರು ‘ಸಿಪಿಎಸ್‌ಇ’ಗಳ ಕಾರ್ಯ­ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

79 ‘ಸಿಪಿಎಸ್‌ಯು’ಗಳಿಗೆ  ಸರ್ಕಾರ   ಈಗಾಗಲೇ ₨1.57 ಲಕ್ಷ ಕೋಟಿ ಬಂಡವಾಳ ಒದಗಿಸಿದೆ. ಹೀಗಿದ್ದರೂ 49 ಉದ್ಯಮಗಳು ರೋಗಗ್ರಸ್ತವಾಗಿದೆ. 4 ಉದ್ಯಮಗಳು ಮುಚ್ಚುವ ಹಂತಕ್ಕೆ ತಲುಪಿವೆ ಎಂದು ವಿವರಿಸಿದರು.

ಇಂದಿನ ಸ್ಪರ್ಧಾತ್ಮಕ ವಾತಾವರಣ­ದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಹೆಚ್ಚಿನ ವೃತ್ತಿಪರತೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಜೇಟ್ಲಿ ಇದೇ ವೇಳೆ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT