ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಕೌಟ್ ಹಂತಕ್ಕೆ ಭಾರತ ತಂಡ

ಏಷ್ಯನ್ 6 ರೆಡ್ ಸ್ನೂಕರ್ ಚಾಂಪಿಯನ್‌ಷಿಪ್‌
Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಭಾರತ ತಂಡವು ಅಬುಧಾಬಿಯಲ್ಲಿ ನಡೆಯುತ್ತಿರುವ ಏಷ್ಯನ್ ಟೀಮ್ ಸ್ನೂಕರ್ ಚಾಂಪಿಯನ್‌ ಷಿಪ್‌ನಲ್ಲಿ ಎರಡನೇ ಸ್ಥಾನ ಪಡೆದು ಎಂಟರ ಘಟ್ಟ ಪ್ರವೇಶಿಸಿತು.

ಮಂಗಳವಾರ ನಡೆದ ‘ಬಿ’ ಗುಂಪಿನ  ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡವು 2–3ರಿಂದ ಥಾಯ್ಲೆಂಡ್ ವಿರುದ್ಧ ಸೋಲನುಭವಿಸಿತು.

ನಾಲ್ಕು ತಂಡಗಳು ಇದ್ದ ಈ ಗುಂಪಿ ನಲ್ಲಿ ಥಾಯ್ಲೆಂಡ್‌ ಎದುರಿನ ಪಂದ್ಯಕ್ಕಿಂತ ಮೊದಲು ಎರಡು ಪಂದ್ಯಗಳು ನಡೆ ದವು. ಕತಾರ್ ಮತ್ತು ಶ್ರೀಲಂಕಾ ಎದು ರಿನ ಪಂದ್ಯಗಳಲ್ಲಿ ಭಾರತವು 3–0 ಅಂತರದಿಂದ ಗೆದ್ದಿತ್ತು. ಆದರಿಂದ ಕ್ವಾರ್ಟರ್‌ಫೈನಲ್ ಪ್ರವೇಶಿಸಿಲು ಸಾಧ್ಯ ವಾಯಿತು.  ಥಾಯ್ಲೆಂಡ್‌  ಒಟ್ಟು ಮೂರು ಪಂದ್ಯಗಳನ್ನು ಜಯಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.

ಕೊನೆಯ ಪಂದ್ಯದಲ್ಲಿ ಭಾರತ ತಂಡದ ಮನನ್ ಚಂದ್ರಾ ಅವರು 30–65 ಫ್ರೇಮ್‌ಗಳಿಂದ ಥಾಯ್ಲೆಂಡ್‌ನ ರಚಾಯೊತಿನ್ ಯೊತಾರುಕ್ ವಿರುದ್ಧ ಸೋತರು.

ಏಷ್ಯನ್ 6 ರೆಡ್ ಚಾಂಪಿಯನ್ ಆಗಿರುವ ಪಂಕಜ್ ಅಡ್ವಾಣಿ ಎರಡನೇ ಪಂದ್ಯದಲ್ಲಿ 70–37ರಿಂದ ಯುಟಾ ಪಾಪ್ ಪಾಕ್‌ಪೋಜ್ ವಿರುದ್ಧ ಗೆದ್ದರು. ಇದರಿಂದ ತಂಡವು 1–1ರಿಂದ ಸಮಬಲ ತಲುಪಿತು.  ನಂತರದ ಡಬಲ್ಸ್‌ ಪಂದ್ಯದಲ್ಲಿ ಪಂಕಜ್ ಮತ್ತು ಆದಿತ್ಯ ಮೆಹ್ತಾ 94–13ರಿಂದ ಯೊತಾರುಕ್ ಮತ್ತು ಪಾಕ್‌ಪೋಜ್ ಜೋಡಿ ವಿರುದ್ಧ ಗೆದ್ದರು. ಇದರಿಂದ ಭಾರತ 2–1ರ ಮುನ್ನಡೆ ಪಡೆಯಿತು.

ಆದರೆ,  20 ವರ್ಷ ವಯಸ್ಸಿನ ಪಾಕ್‌ಪೋಜ್ ನಂತರದ ಎರಡೂ ಸಿಂಗಲ್ಸ್‌ನಲ್ಲಿ ಜಯಿಸಿ ಭಾರತಕ್ಕೆ ಆಘಾತ ನೀಡಿದರು. 85–0 ಅಂಕಗಳಿಂದ ತಮಗಿಂತ ಹತ್ತು ವರ್ಷ ಹಿರಿಯರಾದ ಪಂಕಜ್ ಅವರನ್ನು ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಅವರು 62–54ರಿಂದ ಮನನ್ ಚಂದ್ರಾ ಅವರನ್ನು ಸೋಲಿಸಿದರು.

ಭಾರತವು ಕತಾರ್ ಎದುರಿನ ಪಂದ್ಯದಲ್ಲಿ ಪಂಕಜ್ 70–16ರಿಂದ ಅಹಮದ್ ಸಾಯಿ ಎದುರು; ಮನನ್ ಚಂದ್ರಾ 70–45ರಿಂದ ಮೊಹಸಿನ್ ಬುಕ್‌ಶೈಶಾ ಎದುರು; ಡಬಲ್ಸ್‌ನಲ್ಲಿ  ಪಂಕಜ್ ಮತ್ತು ಮನನ್ ಚಂದ್ರಾ  88–11ರಿಂದ ಸೈಫ್ ಮತ್ತು ಅಲಿ ಅಲೊಬೆಡ್ಲಾಯ್  ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT