ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾಲ್ಯಾಂಡ್‌ ಸಿ.ಎಂ ಜೆಲಿಯಾಂಗ್‌

ಇಂದು ಪ್ರಮಾಣವಚನ ಸ್ವೀಕಾರ
Last Updated 23 ಮೇ 2014, 19:30 IST
ಅಕ್ಷರ ಗಾತ್ರ

ಕೊಹಿಮಾ (ಪಿಟಿಐ): ನಾಗಾಲ್ಯಾಂಡ್‌ ಮುಖ್ಯಮಂತ್ರಿ ನೈಫಿ ರಿಯೊ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿ­ಸಿದ್ದು, ಅವರ ಸಂಪುಟದ ಹಿರಿಯ ಸಚಿವ  ಟಿ.­ಆರ್‌. ಜೆಲಿಯಾಂಗ್‌ ನೂತನ ಮುಖ್ಯ­ಮಂತ್ರಿ­ಯಾಗಿ ಆಯ್ಕೆ­ಯಾಗಿದ್ದಾರೆ.

ಈಚೆಗೆ ನಡೆದ ಲೋಕಸಭಾ ಚುನಾ­ವಣೆಯಲ್ಲಿ ನಾಲ್ಕು ಲಕ್ಷ ಮತಗಳ ಅಂತರ­ದಿಂದ ಜಯ ಗಳಿಸಿರುವ ರಿಯೊ ಸಂಸದ ಸ್ಥಾನ ಉಳಿಸಿಕೊಂಡು, ಮುಖ್ಯ­ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ­ದ್ದಾರೆ. ಒಟ್ಟು ಮೂರು ಅವಧಿಗೆ ಮುಖ್ಯ­ಮಂತ್ರಿಯಾಗಿದ್ದ ಅವರು, 11 ವರ್ಷ ಆಡಳಿತ ನಡೆಸಿದ್ದರು. ರಿಯೊ ರಾಜೀನಾಮೆಯಿಂದ ತೆರ­ವಾಗಿ­ರುವ ಸ್ಥಾನಕ್ಕೆ ನಾಗಾ ಪೀಪಲ್ಸ್‌ ಫ್ರಂಟ್‌  ನಾಯಕ  ಜೆಲಿಯಾಂಗ್‌ ಅವ­ರನ್ನು ನಾಗಾ ಪೀಪಲ್ಸ್‌ ಫ್ರಂಟ್‌ ಮತ್ತು ನಾಗಾಲ್ಯಾಂಡ್‌ ಪ್ರಜಾಸತ್ತಾತ್ಮಕ ಮೈತ್ರಿ­­ಕೂಟದ ಸದಸ್ಯರು ಅವಿರೋಧ­ವಾಗಿ ಆಯ್ಕೆ ಮಾಡಿದರು. 

ಸರ್ಕಾರ ರಚಿಸುವಂತೆ ರಾಜ್ಯ­ಪಾಲರು ಜೆಲಿಯಾಂಗ್‌ ಅವರಿಗೆ ಆಹ್ವಾನ ನೀಡಿದ್ದು, ಶನಿವಾರ ಬೆಳಿಗ್ಗೆ ರಾಜಭವನ­ದಲ್ಲಿ  ಪ್ರಮಾಣವಚನ ಸ್ವೀಕಾರ ಸಮಾ­ರಂಭ ನಡೆಯಲಿದೆ. ರಾಜ್ಯಪಾಲ ಅಶ್ವನಿ ಕುಮಾರ್‌   ನೂತನ ಮುಖ್ಯಮಂತ್ರಿ ಜೆಲಿಯಾಂಗ್‌ ಮತ್ತು ಸಚಿವ ಸಂಪುಟದ ಸದಸ್ಯರಿಗೆ ಅಧಿಕಾರ ಮತ್ತು ಗೋಪ್ಯತೆ ಪ್ರಮಾಣ­ವಚನ ಬೋಧಿಸಲಿದ್ದಾರೆ. 60 ಸದ­ಸ್ಯರ ಸಂಖ್ಯಾಬಲದ ನಾಗಾ­ಲ್ಯಾಂಡ್‌ ಸರ್ಕಾ­ರ­ದಲ್ಲಿ ನಾಗಾ ಪೀಪಲ್ಸ್‌ ಫ್ರಂಟ್‌ ಮತ್ತು ನಾಗಾ­ಲ್ಯಾಂಡ್‌ ಪ್ರಜಾ­ಸ­ತ್ತಾ­ತ್ಮಕ ಮೈತ್ರಿಕೂಟ 52 ಸ್ಥಾನ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT